ಮಕ್ಕಳ ಕವನಗಳು : ಸಂಚಿಕೆ -26
Sunday, August 11, 2024
Edit
ಮಕ್ಕಳ ಕವನಗಳು : ಸಂಚಿಕೆ -26
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದಿರೆ ತಾಲೂಕು, ದಕ್ಷಿಣ ಕನ್ನಡ
ಈ ಶಾಲೆಯಲ್ಲಿ ಕಲಿಯುತ್ತಿರುವ
ಕವನ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಚಂದ್ರು ಕೆ, 8ನೇ ತರಗತಿ
◾ ಅನ್ವಿತ, 9ನೇ ತರಗತಿ
◾ ಮಲ್ಲಿಕಾರ್ಜುನ , 10ನೇ ತರಗತಿ
ಆಟ ಆಡಿಸುವುದೇ ಸೊಗಸು
ಕ್ಷಣದಲ್ಲೇ ಆಸೆಯನ್ನು
ಬದಲಾಯಿಸುವುದು ಮನಸ್ಸು
ದುಃಖವಾದಾಗ ಕಣ್ಣಲ್ಲಿ
ನೀರು ತರಿಸುವುದು ಅದೇ ಮನಸ್ಸು
ವ್ಯಕ್ತಿಗೆ ಛಲ ತರಿಸುವುದು
ಅದೇ ಮನಸ್ಸು
ಭರವಸೆ ನೀಡುವುದು
ಅದೇ ಮನಸ್ಸು
ಕಾಣದ ಮನಸ್ಸು ಆಟ ಆಡಿಸುವುದೇ
ಸೊಗಸು,ಸೊಗಸು, ಸೊಗಸು.....
.................................................. ಚಂದ್ರು ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ಮಳೆ ಬಂದರೆ ಬಿಸಿಲು ಬರಲಿ
ಎನ್ನುವರು ಜನರು
ಬಿಸಿಲು ಬಂದರೆ ಮಳೆ ಬರಲಿ
ಎನ್ನುವರು ಜನರು
ಹಣ ಖರ್ಚು ಮಾಡಿದರೆ ಹಣದ ಬೆಲೆ ಗೊತ್ತಿಲ್ಲದಂತೆ ವರ್ತಿಸುವರು ಜನರು
ಹಣ ಖರ್ಚು ಮಾಡದಿದ್ದರೆ
ಜಿಪುಣ ಎನ್ನುವರು
ಜನರು ಮಾತಾಡಿಸಿದರೆ
ಕೆಲಸವಿಲ್ಲವೇನು ಎನ್ನುವರು ಜನರು
ಮಾತನಾಡದೆ ಇದ್ದರೆ
ಸೊಕ್ಕು ಇದೆ ಎನ್ನುವರು
ಜನರು ಏನನ್ನು ಸಹಿಸಲಾರರು
ಜನರು, ಜನರು, ಜನರು.....
.................................................. ಚಂದ್ರು ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ನಿನ್ನ ಹಾಗೆ ನನಗೆ ಬೇರೆ ಯಾರೂ ಕಾಣರು
ನಿನ್ನ ಋಣ ತೀರಿಸಲು ಎಂದೆಂದೂ ಆಗದು
ಅಮ್ಮ ನೀ ಇಲ್ಲದೆ ನನ್ನ ಜೀವ ಇರಲಾರದು
.................................................. ಚಂದ್ರು ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ನಿನ್ನನ್ನು ನಂಬಿದವರು
ಎಂದೂ ಆಗಿಲ್ಲ ಬಡಪಾಯಿ
ನಿನ್ನ ಮೇಲೆ ನಿಯತ್ತಾಗಿರುವುದೇ
ನಮ್ಮೆಲ್ಲರ ದಾರಿ
ಯಾವ ಗ್ರಹದಲ್ಲಿಯೂ ಇಲ್ಲ
ನಿನ್ನ ಹಾಗೆ ಓ ಭೂಮಿ ತಾಯಿ
8ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ಪುಸ್ತಕ - ಹರಿಯುವ ತನಕ
ಜೀವ - ಇರುವ ತನಕ
ಆದರೆ ನನ್ನ ತಾಯಿಯ ಪ್ರೀತಿ
ಕೊನೆ ತನಕ..
........................................................ ಅನ್ವಿತ
9ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ಪ್ರೀತಿಯ ಬಂಧನ
ನಮ್ಮ ಸುಂದರ ಜೀವನ
ಸಂತಸದ ಹೂವು ಬನ
........................................................ ಅನ್ವಿತ
9ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ಮೌನದಲ್ಲಿರುವ ಮಾತನ್ನು
ಕೋಪದಲ್ಲಿರುವ ನಗುವನ್ನು
ಅರಿಯದೆ ಮಾಡಿದ ತಪ್ಪನ್ನು
ಮರೆಸುವುದೇ ನಿಜವಾದ ಸ್ನೇಹ
........................................................ ಅನ್ವಿತ
9ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ಅರಿತು ನಡೆದರೆ ಹೂವಿನಂತೆ
ಮರೆತು ನಡೆದರೆ ಮುಳ್ಳಿನಂತೆ
ಸರಿಯಾಗಿ ತಿಳಿದು ನಡೆದರೆ
ಬಾಳು ಸವಿ ಜೇನಿನಂತೆ
9ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ಎಲ್ಲರೂ ಒಂದೇ ಎಂಬ ಭಾವನೆ ಇತ್ತು
ಅವರು ಹೋದ ಮೇಲೆ
ಅದು ಮಾಯವಾಗಿ
ಮತ್ತೇ ಹುಟ್ಟಿದವರು ಕೀಳಾಗಿ ನೋಡುತ್ತಾರೆ.
ಈಗಿನ ಜನರ ಮನಸ್ಸು ಹೀಗಾಗಿದೆ.
ಮುಂದೆ ಹೇಗೋ ಏನೋ
ಯಾರು ಬಲ್ಲರು...?
........................................... ಮಲ್ಲಿಕಾರ್ಜುನ
10ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ದುಡಿಯುವವನಿಗೆ ಬೆಲೆ ಇಲ್ಲ
ನಿಜ ಹೇಳಿದರೆ ಆಗೌರವ
ದುಡ್ಡು ಇಲ್ಲದವನಿಗೆ ಬೆಲೆಯಿಲ್ಲ
ಜೀವನದ ನಂಬಿಕೆಯೇ ಇಲ್ಲದಾಗಿದೆ
ಇದನ್ನು ಸರಿಪಡಿಸಲು
ಯಾರಿಂದಲೂ ಸಾಧ್ಯವಿಲ್ಲವೇ...?
........................................... ಮಲ್ಲಿಕಾರ್ಜುನ
10ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ತಾಯಿಯೇ ದೇವರು
ಕನ್ನಡವೇ ಭಾಷೆ
ಸಂಸ್ಕೃತಿಯೇ ಒಡಲು
ಒಳ್ಳೆಯ ತನವೇ ಶ್ರೀ ರಕ್ಷೆ
ಗೆಳೆತನವೇ ಅಮೂಲ್ಯ
ಇದಕ್ಕೆಲ್ಲ ಮುಖ್ಯವಾಗಿರಬೇಕು
ನಮ್ಮ ವ್ಯಕ್ತಿತ್ವ..
........................................... ಮಲ್ಲಿಕಾರ್ಜುನ
10ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************
ಬೆಳೆಸಿದ್ದು ತಾಯಿ
ಸರಿಯಾದ ದಾರಿಗೆ ತಂದದ್ದು ತಾಯಿ
ಕಷ್ಟ ತೋರಿಸದೆ ಬೆಳೆಸಿದ್ದು ತಾಯಿ
ಒಳ್ಳೆ ಬುದ್ಧಿ ಕಲಿಸಿದ್ದು ತಾಯಿ
ಎಂತಹ ಕಷ್ಟಕ್ಕೂ ಬಗ್ಗದ ನನ್ನ ತಾಯಿ
ಇಂತಿ ನನ್ನ ಪ್ರೀತಿಯ ತಾಯಿ
10ನೇ ತರಗತಿ
ಸರಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡುಬಿದರೆ ತಾಲೂಕು, ದಕ್ಷಿಣ ಕನ್ನಡ
******************************************