ಪ್ರೀತಿಯ ಪುಸ್ತಕ : ಸಂಚಿಕೆ - 126
Friday, August 30, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 126
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ನಮಗೆ ವಾಸಿಸಲು ಮನೆ ಬೇಕು. ನಮ್ಮ ಮನೆಗಳು ವಿವಿಧ ರೀತಿಯಲ್ಲಿ ಇರುತ್ತವೆ. ನಮ್ಮ ಸುತ್ತು ಮುತ್ತ ಬದುಕುವ ಪ್ರಾಣಿ, ಪಕ್ಷಿ, ಕೀಟಗಳಿಗೂ ವಾಸಿಸಲು ಮನೆ ಬೇಕು ಅಲ್ಲವೇ? ಉದ್ದನೆಯ ಮನೆ, ಗಿಡದಲ್ಲಿ ಮನೆ, ತೂಗಾಡುವ ಮನೆ, ನೆಲದಲ್ಲಿ ಮನೆ, ಬಿಲದಲ್ಲಿ ಮನೆ.. ಅಬ್ಬಾ ಎಂತೆಂತಹ ಮನೆಗಳಲ್ಲಿ ಅವರೆಲ್ಲಾ ವಾಸಿಸುತ್ತಾರೆ. ಕುತೂಹಲಕಾರಿಯಾಗಿ ಇರುತ್ತವೆ. ಚಿಕ್ಕ ಗೆದ್ದಲು ಹುಳಗಳು ಜೊತೆಸೇರಿಕೊಂಡು ಎಂತಹ ಚಂದದ ಮಣ್ಣಿನ ಮನೆ ಕಟ್ಟುತ್ತವೆ ಅಲ್ಲವೇ? ಬಸವನ ಹುಳ ಮತ್ತು ಆಮೆಗಳ ದೇಹದಲ್ಲಿಯೇ ಅವರ ಮನೆ ಇದೆ. ಅವು ಹೋದಲ್ಲೆಲ್ಲಾ ಅವುಗಳ ಮನೆ ಹೊತ್ತುಕೊಂಡು ತಿರುಗುತ್ತವೆ. ಎಂತಹ ಅಚ್ಚರಿಯಲ್ಲವೇ? ಚಂದ ಚಂದದ ಮನೆಗಳ ಚಿತ್ರಗಳೊಂದಿಗೆ ಪುಟದಲ್ಲಿ ಎರಡು ಮೂರು ವಾಕ್ಯಗಳೊಂದಿಗೆ ಈ ಪುಸ್ತಕ ನಿಮಗೆ ಖಂಡಿತಾ ಖುಶಿ ಕೊಡುವಂತಿದೆ. ನಿಮ್ಮ ಅಕ್ಕ ಪಕ್ಕ ಇಂತಹ ಮನೆಗಳನ್ನು ನೀವು ಹುಡುಕುತ್ತಾ ಹೋಗಬಹುದು. ನೀವೂ ಕೂಡಾ ವಿವಿಧ ರೀತಿಯ ಮನೆಗಳನ್ನು ಕಲ್ಪಿಸಿಕೊಂಡು ಚಿತ್ರಗಳನ್ನೂ ಮಾಡಬಹುದು.
ಲೇಖಕರು: ಅಶ್ವಿತಾ ಜಯಕುಮಾರ್
ಅನುವಾದ: ತನುಜಾ ಜಕ್ಕಣ್ಣನವರ್
ಚಿತ್ರಗಳು: ನಫಿಸಾ ನಂದಿನಿ ಕೃಷ್ಣಾ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.65/-
ಹಂತ 1, 1ನೇ ತರಗತಿಯ ಮಕ್ಕಳು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಆಸಕ್ತಿ ಹುಟ್ಟಿಸುವ ಹಾಗೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************