ಭತ್ತ ಬೆಳೆಯುವ ಗದ್ದೆಯಲ್ಲಿ ಒಂದು ದಿನ - ಬರಹ : ಅಭಿನವ್ ರಾಜ್ ಎನ್ ಪಟ್ಟೆ, 7ನೇ ತರಗತಿ
Thursday, July 18, 2024
Edit
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 08
ಲೇಖನ : ಭತ್ತ ಬೆಳೆಯುವ ಗದ್ದೆಯಲ್ಲಿ ಒಂದು ದಿನ
ಬರಹ : ಅಭಿನವ್ ರಾಜ್ ಎನ್ ಪಟ್ಟೆ
7ನೇ ತರಗತಿ
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಳೆದ ಗುರುವಾರ ಸಂಜೆ ನಮ್ಮ ಶಾಲೆಯಿಂದ ಕುಳದ ಪಾರೆಯಲ್ಲಿರುವ ಭತ್ತದ ಗದ್ದೆಗೆ ಮುಂದಿನ ಬುಧವಾರ ಹೋಗಲಿಕ್ಕಿದೆ ಎಂದು ಹೇಳಿದ್ದರು.. ಆಗ ನಾನು ಹೋಗಬೇಕೆಂದು ತೀರ್ಮಾನಿಸಿದೆ.
ಬುಧವಾರ ಬಂತು. ಬೆಳಗ್ಗೆ ನಾನು ಐದು ಗಂಟೆಗೆ ಎದ್ದೆ. ಮತ್ತೆ ಯೋಗ ಮಾಡಿದೆ. ತಿಂಡಿ ತಿಂದು ಕೆಸರುಗದ್ದೆಗೆ ಹೋಗಲು ತಯಾರಾದೆ. ಬಸ್ಸು 15 ನಿಮಿಷ ಮೊದಲು ಬರುತ್ತದೆ ಎಂದು ಮೆಸೇಜ್ ಕಳುಹಿಸಿದ್ದರು. ಅದಕ್ಕೆ ನಾನು ಮಾಮೂಲು ಬರುವ ಸಮಯಕ್ಕಿಂತ 15 ನಿಮಿಷ ಮೊದಲೇ ಮನೆಯ ಕೆಳಗೆ ಇರುವ ರಸ್ತೆಯ ಪಕ್ಕ ಹೋದೆ. ಆದರೆ ಬಸ್ಸು ಬರುವಾಗ ಸ್ವಲ್ಪ ತಡವಾಯಿತು. ನಾನು ಬಸ್ಸು ಹೋಗಿರಬಹುದು ಎಂದು ಯೋಚಿಸಿ ಬೇಸರದಿಂದ ಮನೆಗೆ ಹೋಗಲು ತಯಾರಾದೆ. ಅಷ್ಟರಲ್ಲಿ ನಮ್ಮ ಶಾಲೆಯ ಬಸ್ಸು ಬಂತು. ನಾನು ಖುಷಿಯಿಂದ ಬಸ್ ಹತ್ತಿದೆ. ನನ್ನ ಗೆಳೆಯರು ಬಸ್ಸಿನಲ್ಲಿ ಕುಳಿತಿದ್ದರು. ನಾನು ಅವರ ಬಳಿ ಹೋಗಿ ಕುಳಿತು ಮಾತನಾಡಲು ಪ್ರಾರಂಭಿಸಿದೆ. ಬಸ್ಸು ಕುಳದ ಪಾರೆಗೆ ಹೋಗುವ ದಾರಿಯಲ್ಲಿ ಸಿಕ್ಕಿಹಾಕಿಕೊಂಡಿತು. ಒಬ್ಬರು ಹೇಳಿದರು "ಇಲ್ಲಿ ಹೋಗಲು ಸಾಧ್ಯವಿಲ್ಲ ನೀವು ಇನ್ನೊಂದು ದಾರಿಯಲ್ಲಿ ಹೋಗಿ" ಎಂದು. ಅದಕ್ಕೆ ನಮ್ಮ ಡ್ರೈವರ್ ಇನ್ನೊಂದು ದಾರಿಯಲ್ಲಿ ಬಸ್ಸು ತೆಗೆದುಕೊಂಡು ಹೋದರು. ನಾವು ಕುಳದಪಾರೆಗೆ ತಲುಪಿದೆವು.