-->
ಮಕ್ಕಳ ಕವನಗಳು : ಸಂಚಿಕೆ - 21 : ಕವನ ರಚನೆ : ಶರ್ಮಿಳಾ ಕೆ ಎಸ್, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 21 : ಕವನ ರಚನೆ : ಶರ್ಮಿಳಾ ಕೆ ಎಸ್, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 21
ಕವನ ರಚನೆ : ಶರ್ಮಿಳಾ ಕೆ ಎಸ್ 
10ನೇ ತರಗತಿ        
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
        
ಉಡುಪಿ ಜಿಲ್ಲೆಯ ಕುಂದಾಪುರದ ಇತಿಹಾಸವನ್ನು ಬ್ರಿಟಿಷರ ಕಾಲದಿಂದಲೂ ಕಾಣಬಹುದು. ಬ್ರಿಟಿಷರು ಭಾರತವನ್ನು ಆಳುವಾಗ ಕರಾವಳಿ ಭಾಗಕ್ಕೆ ಹೇಗೆ ಕೆನರಾ ಎಂದು ಕರೆಯುತ್ತಿದ್ದರೋ ಹಾಗೆ ಕುಂದಾಪುರಕ್ಕೆ ಖೂಂಡಾಪುರ್ ಎಂದು ಇಂಗ್ಲೀಷ್ ಶೈಲಿಯಲ್ಲಿ ಕರೆಯುತ್ತಿದ್ದರು. ನಂತರ ಕಾಲಕ್ರಮೇಣ ಹಲವು ವಿವಾದಗಳ ಕಾರಣಗಳಿಂದಾಗಿ ಕುಂದಾಪುರ ಎಂದು ಮರುನಾಮಕರಣ ವಾಯಿತು. ಹಿಂದಿನ ಕಾಲದಲ್ಲಿ ಕುಂದಕನ್ನಡ ಅಥವಾ ಕುಂದಾಪ್ರ ಕನ್ನಡವನ್ನು ಕುಂದಾಪುರದಲ್ಲಿ ಮಾತ್ರ ಮಾತನಾಡುತ್ತಿದ್ದರು ಆದರೆ ಈಗ ಬೈಂದೂರಿನಿಂದ ಹಿಡಿದು ಬ್ರಹ್ಮಾವರದವರೆಗೆ ಕುಂದಾಪ್ರ ಕನ್ನಡ ಭಾಷೆಯನ್ನೇ ಹೇರಳವಾಗಿ ಮಾತನಾಡುತ್ತಾರೆ. ಅಲ್ಲಿಂದ ಮುಂದೆ ಹೋದಂತೆ ತುಳು ಭಾಷೆ ಕಂಡುಬರುತ್ತದೆ. ಕರ್ನಾಟಕದಲ್ಲಿ ಪ್ರಾದೇಶಿಕ ಲಕ್ಷಣಕ್ಕೆ ಅನುಗುಣವಾಗಿ ಕನ್ನಡವನ್ನು ಹಲವು ರೀತಿಯಲ್ಲಿ ಸುಲಭವಾಗುವಂತೆ ಉಪಯೋಗಿಸುತ್ತಾರೆ. ಕನ್ನಡದ ಒಂದು ಉಪಭಾಷೆ ಅಥವಾ ವಿಶಿಷ್ಟ ಶೈಲಿಯ ಕನ್ನಡವೇ ಕುಂದಾಪುರ ಕನ್ನಡ. ಕೋಟದ ಬ್ರಾಹ್ಮಣರು ಕೂಡ ಈ ಶೈಲಿಯನ್ನು ಉಪಯೋಗಿಸುವುದರಿಂದ ಇದನ್ನು ''ಕೋಟಕನ್ನಡ'' ಎಂದೂ ಸಹ ಕರೆಯುತ್ತಾರೆ. 

ಎಲ್ರಿಗೂ ನಮಸ್ಕಾರ. ನಾನ್ ನಿಮ್ಮ್ ಶರ್ಮಿಳಾ. ಇಷ್ಟ್ ದಿನ ನನ್ನ್ ಕವನ, ಕಥಿ, ಲೇಖನ ಓದಿ ಖುಷಿ ಆಯ್ತ್ ಅಂದ್ ಅನ್ಕಂತೆ ಮತ್ತೆ ಇನ್ನೂ ಪ್ರೋತ್ಸಾಹ ಕೊಟ್ಟಿರಿ. ಆದ್ರೆ ಇವತ್ತ್ ನಾನ್ ನಮ್ಮ್ ಹೆಮ್ಮೆದ್  ಹೊಯ್ಕ್, ಬರ್ಕ್ ಭಾಷಿ ಕುಂದಾಪ್ರ ಕನ್ನಡದಂಗೆ ಕವನ ಬರ್ದಿದೆ... ಶರ್ಮಿಳಾ ಕೆ ಎಸ್ , 10ನೇ ತರಗತಿ        

           

ಆಸಾಡಿ ಅಮಾಸಿ ಬಂದ್ರೆ ಸಾಕ್ ಕಾಣಿ
ಕಟಕಟ ಕುಟುಕುಟು ಚಳಿ ಸುರು ಆತ್ತ್
ಮುಚ್ಚಾಕಂಡ್ ಮನಿಕಂಡ್ರೆ ಬೆಳಗಾರೂ
ಎಚ್ಚರ್ಕಿಯೇ ಆತಿಲ್ಲ ಒಳ್ಳೆ ನಿದ್ರಿ ಕಾಣಿ... 

ಆಟಿ ಅಮಾಸಿ ದಿನ ಬೆಳಗ್ಗೆ ಬೇಗ ಏಳ್ಕ್
ಯಬ್ಯಾ ಏಳುವತಿಗೆ ಮಾಡಿ ಆಯಿರತ್ ಕಾಣಿ 
ಹಾಲಿಕೆತ್ತಿದ್ ಕಯಿ ಕಯಿ ಕಷಾಯ  
ಯಬ್ಯಾ ಕುಡಿಕಾರೆ ಮಾಡುಕಿತಾಪತಿ ಒಂದೈಡಲ್ಲ 

ಮೂಗ್ ಹತ್ರ ತಂದ್ರೆ ಸಾಕ್ ಒಗ್ರ್ ವಾಸ್ನಿ ಬತತ್ತ್
ಕಷಾಯದೊಟ್ಟಿಗೆ ನೀರ್ ಇರ್ಕೆ ಇಲ್ದಿರ್ ಆತಿಲ್ಲ
ಕುಡುವತಿಗೆ ಹಿರ್ಗ್ಲ್ ಅನ್ಸ್ರು ಅಡ್ಡಿಲ್ಲ
ಅಪ್ಪ ಅಬ್ಬಿ ಹತ್ರ ಬೈಸ್ಕಂಬು ಯಾಪಾರ ಬ್ಯಾಡ 

ಗೆದ್ದಿ ಬೈಲಿಗ್ ಹೋರೆ ಎಲ್ಲ್ ಕಂಡ್ರು ಹಸ್ರ್ ಹಸ್ರ್     
ಗಟ್ಟಿ ಇತ್ತ್ ಅಂದ್ ಕಾಲ್ ಹಾಕುಕು
ಬುಳ್ಕ್ ಅಂದ್ಕಂಡ್ ಅಡಿ ಹೋಪುಕು
ಒಂದ್ಸಲ ಗುಂಡ್ಗಿ ಬಾಯಿಗ್ ಬಂದಂಗಾತ್ತ್ 

ಮರವಂತಿ ಹಬ್ಬಕ್ ಹೋಪು ಖುಷಿಂಗೆ
ಅಮಾಸಿ ಕಳದ್ದೇ ಗೊತಾತಿಲ್ಲ
ಮಾರಸ್ವಾಮಿದ್ ದರ್ಶನ ಮಾಡಿ 
ಸಮುದ್ರದ್ ಬದಿಗೆ ಹೋಪುಕೆ ಗಮ್ಮತ್ತ್ ಆತ್ ಕಾಣಿ    

ಆಸಾಡಿ ಅಮಾಸಿ ಮುಗುವರಿಗೂ
ಯಾವ್ ಹಬ್ಬವೂ ಬತ್ತಿಲ್ಲ 
ದೇವ್ರಿಗೆಲ್ಲ ಆಸಾಡಿಂಗೆ ಶಕ್ತಿ ಕಮ್ಮಿ 
ಅಂದ್ಕಂಡ್ ನಮ್ಮೂರ್ ಬದಿಂಗೆಲ್ಲ ಹೇಳ್ತ್ರ್ 

ಆಸಾಡಿ ಮುಗುವತಿಗೆ ಬೇಗ ಹೋಯ್
ದೈದ್ಮನಿ ದೇವ್ರಿಗ್ ಒಂದ್ ಅಡ್ಡ ಬಿದ್ದ್ ಬರ್ಕ್ ಕಾಣಿ
ಯಾವ್ದೇ ಭೂತ ನನ್ನ್ ಮೇಲ್ ಕಣ್ಹಾಕ್ರು
ನೀನೆ ಕಾವ್ಲ್ ಅಂದ್ರೆ ಬೇಡ್ಕಂಡ್ರೆ ಸಮಾಧಾನ ಆತ್ 

ನಮ್ಮೂರ್ ಭಾಷಿ ಅಂತೂ ಕೇಂಬುದೆ ಬ್ಯಾಡ
ಚಂದ ಗ್ವಾಂಪಿ ನಮ್ಮ್ ಕುಂದಾಪ್ರ ಕನ್ನಡ 
ಅದನ್ನ ಮಾತಾಡುಕೆ ಒಂದ್ ಖುಷಿ 
ಹೊಯ್ಕ್ ಬರ್ಕ್ ಅಂದ್ಕಂಡ್ ಕೂಳ್ ತಿಂಬುಕೆ ಲೈಕಾತ್...
........................................ ಶರ್ಮಿಳಾ ಕೆ ಎಸ್ 
10ನೇ ತರಗತಿ        
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article