-->
ಪ್ರೀತಿಯ ಪುಸ್ತಕ : ಸಂಚಿಕೆ - 113

ಪ್ರೀತಿಯ ಪುಸ್ತಕ : ಸಂಚಿಕೆ - 113

ಪ್ರೀತಿಯ ಪುಸ್ತಕ
ಸಂಚಿಕೆ - 113
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

                     
                          ಎದ್ದು ನಿಂತ ಬಾಲ
ಪ್ರೀತಿಯ ಮಕ್ಕಳೇ.... ಬಲು ತುಂಟ ಮಕ್ಕಳಿಗಾಗಿ ಮತ್ತು ತುಂಟತನವನ್ನು ನೋಡಿ ಖುಶಿ ಪಡುವವರಿಗಾಗಿ ಈ ಕಥೆ ಬರೆದಿದ್ದಾರಂತೆ ಪಾಟೀಲ ಅಂಕಲ್. ಏನೇನೋ ಕಲ್ಪನೆ ಮಾಡಿಕೊಳ್ಳಲಿಕ್ಕೆ ಮಜಾ ಬರುತ್ತದಲ್ಲಾ.. ಈ ಕಥೆ ಕೂಡಾ ಅಂತಹುದೇ. ಹಂದಿಯೊಂದು ಒಂದು ಸಂಜೆ ಮನೆಗೆ ಬರುತ್ತದೆ. ಹಂದಿ ಮನೆಗೆ ಬಂತು ಅಂದ ತಕ್ಷಣ ಅಸಹ್ಯ ಅನಿಸುತ್ತಾ....! ಏನೂ ಬೇಕಾಗಿಲ್ಲ. ಈ ಹಂದಿ ಮನೆ ಒಳಗೆ ಬರಬೇಕಾದರೆ ಎಲ್ಲಾ ಕ್ಲೀನ್ ಮಾಡಿಕೊಂಡು ಬಂದಿತ್ತು. ಅದನ್ನ ಮಿ.ಪಿಗ್ ಅಂತ ಕರೆದರೆ ಅದಕ್ಕೆ ಖುಶಿಯಂತೆ. ಯಾಕೆ ಬಂತು? ಬಂದು ಏನು ಮಾಡಿತು? ಓದಿ ನೋಡಿದರೆ ನಿಮಗೇ ತಿಳಿಯುತ್ತದೆ. ಪುಟ್ಟ ಪುಸ್ತಕ, ಮಜಾ ಓದು. ನೀವು ಕೂಡಾ ಇಂತಹ ಮಜಾ ಮಜಾ ಕಲ್ಪನೆ ಮಾಡಿಕೊಳ್ಳಬಹುದು. 
ಲೇಖಕರು: ಆನಂದ ಪಾಟೀಲ್ 
ಚಿತ್ರಗಳು: ಆನಂದ ಪಾಟೀಲ   
ಪ್ರಕಾಶಕರು: ಅಭಿನವ ಪ್ರಕಾಶನ, ಬೆಂಗಳೂರು 
ಬೆಲೆ: ರೂ.25/-
5-6ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: ಅಭಿನವ ಪ್ರಕಾಶನ abhinavaravi@gmail.com, www.abhinavabook.com 9448804905
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article