-->
ಪ್ರೀತಿಯ ಪುಸ್ತಕ : ಸಂಚಿಕೆ - 98

ಪ್ರೀತಿಯ ಪುಸ್ತಕ : ಸಂಚಿಕೆ - 98

ಪ್ರೀತಿಯ ಪುಸ್ತಕ
ಸಂಚಿಕೆ - 98
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                
                  ಹದಿಮೂರು ಶ್ರೇಷ್ಠ ಕಥೆಗಳು 
ಪ್ರೀತಿಯ ಮಕ್ಕಳೇ,
ನಮ್ಮ ನಮ್ಮ ಊರಿನ ಕಥೆಗಳು ನಮಗೆ ಇಷ್ಟ, ಹಾಗೆಯೇ ಬೇರೆ ಬೇರೆ ಪ್ರಾಂತ್ಯದ ಕಥೆಗಳೂ ಇಷ್ಟವಾಗುತ್ತವೆ, ತಾನೇ? ಈ ಪುಸ್ತಕದಲ್ಲಿ 13 ಭಾಷೆಗಳ ಅಂದರೆ 13 ಊರುಗಳ, 13 ಲೇಖಕರು ಬರೆದ ಕಥೆಗಳು ಇವೆ. ದಕ್ಷಿಣದ ಕೇರಳದಿಂದ ಹಿಡಿದು, ಉತ್ತರದ ಅಸ್ಸಾಮಿನವರೆಗಿನ ಕಥೆಗಳು ಇಲ್ಲಿವೆ. ಹಣದ ಬೆಲೆಯೇ ತಿಳಿಯದ ಅಪ್ಪು ಬದಲಾಗಿದ್ದು; ಅಂಚೆ ಚೀಟಿ ಸಂಗ್ರಹಿಸುವ ರಾಜುವಿನ ಅನುಭವ, ಬಮ್ ಬಹಾದೂರ್ ಎಂಬ ಆನೆಯ ಕಥೆ ಹೀಗೆ ವಿವಿಧ ಬಗೆಯ ಕಥೆಗಳು ಇವೆ. ಮಕ್ಕಳ ಕಥೆಗಾರ ರಸ್ಕಿನ್ ಬಾಂಡ್, ಬಂಗಾಳದ ಸತ್ಯಜಿತ್ ರೇ, ಕನ್ನಡದ ತ್ರಿವೇಣಿ ಮುಂತಾದ ಅನೇಕ ಪ್ರಸಿದ್ಧ ಲೇಖಕರು ಈ ಕಥೆಗಳನ್ನು ಬರೆದಿದ್ದಾರೆ. ಓದಿ..
ಲೇಖಕರು: ಅನೇಕ ಲೇಖಕರು
ಅನುವಾದ: ಎಲ್. ಎಸ್. ಶೇಷಗಿರಿ ರಾವ್ 
ಚಿತ್ರಗಳು: ಮಿಕ್ಕಿ ಪಟೇಲ್ 
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718) 
ಬೆಲೆ: ರೂ 45 (ಇದು ಹಳೆಯ ಪುಸ್ತಕ, ಈಗ ಬೆಲೆ ಬದಲಾಗಿರಬಹುದು) 
7-8ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article