-->
ಪ್ರೀತಿಯ ಪುಸ್ತಕ : ಸಂಚಿಕೆ - 96

ಪ್ರೀತಿಯ ಪುಸ್ತಕ : ಸಂಚಿಕೆ - 96

ಪ್ರೀತಿಯ ಪುಸ್ತಕ
ಸಂಚಿಕೆ - 96
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 

    
       
                              ಹಳ್ಳೀ ಸುಬ್ಬ 
ಪ್ರೀತಿಯ ಮಕ್ಕಳೇ, ಒಂದೊಂದು ಸಾರಿ ನಿಮಗೆ, ನಿಮ್ಮ ಮನೆಯ ದೊಡ್ಡವರ ಅಂದರೆ ಅಮ್ಮ, ಅಪ್ಪ, ಅಜ್ಜ, ಅಜ್ಜಿ ಇವರ ಬಾಲ್ಯದ ಕತೆ ಕೇಳಿಸಿಕೊಳ್ಳಲು ಇಷ್ಟವಾಗುತ್ತದೆ ಅಲ್ಲವೇ...? ಅಮ್ಮ ಚಿಕ್ಕವಳಿರುವಾಗ ಏನೇನು ತುಂಟತನ ಮಾಡುತ್ತಿದ್ದಳು, ಅಪ್ಪನಿಗೆ ಅಜ್ಜ ಪೆಟ್ಟು ಕೊಡುತ್ತಿದ್ದರೇ, ಅಮ್ಮನಿಗೆ ಶಾಲೆಯಲ್ಲಿ ಎಷ್ಟು ಅಂಕ ಬರುತ್ತಿತ್ತು..... ಇವೆಲ್ಲಾ ಕೇಳಿಸಿಕೊಳ್ಳಲು ಏನೋ ಖುಶಿ. ಹಳ್ಳೀ ಸುಬ್ಬ ಅಂತಹುದೇ ಕಥೆಗಳ ಸಂಗ್ರಹ. ಸುಮಾರು 50-60 ವರುಷಗಳ ಹಿಂದಿನ ಹಳ್ಳಿಯ ಬಾಲಕನೊಬ್ಬ ತನ್ನ ಅನುಭವದ ಕಥೆಗಳನ್ನು ರುಚಿ ರುಚಿಯಾಗಿ ಇಲ್ಲಿ ಹೇಳುತ್ತಾರೆ. ಮಕ್ಕಳ ಸಾಹಸ, ತಮಾಷೆ, ಮುಂದಾಳುತ್ವ ಎಲ್ಲವನ್ನೂ ಇಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಹಳ್ಳಿ ಬದುಕಿನ ಅನೇಕ ಚಿತ್ರಣಗಳನ್ನು ಸವಿಯಬಹುದು. ಕಥೆಗಳಿಗೆ ಸರಿಹೊಂದುವ ಚಿತ್ರಗಳೂ ಇವೆ. ಇದನ್ನು ಓದಿದ ಮೇಲೆ ನೀವು ನಿಮ್ಮ ಮನೆಯ ದೊಡ್ಡವರ ಬಳಿ ಅವರ ಬಾಲ್ಯದ ಕಥೆಗಳನ್ನು ಹೇಳಿಸಿಕೊಳ್ಳಿ. ಆ ಕಾಲ ಹೇಗಿತ್ತು, ಈ ಕಾಲ ಹೇಗಿದೆ ಎಂಬುದು ಕೂಡಾ ನಿಮಗೆ ಅರ್ಥವಾಗುತ್ತದೆ. ಓದಿ.. ಖುಷಿ ಪಡಿ. 
ಲೇಖಕರು: ಮತ್ತೂರು ಸುಬ್ಬಣ್ಣ 
ಕಲೆ: ಮೈಸೂರು ಮೋಹನ್ 
ಪ್ರಕಾಶಕರು: ಅನು ಪ್ರಕಾಶನ, ಬೆಂಗಳೂರು  
ಬೆಲೆ: ರೂ 80/
6- 7ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
......................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article