-->
ಮಕ್ಕಳ ಕವನಗಳು : ಸಂಚಿಕೆ - 03  ರಚನೆ : ಶ್ರೇಯಾ ,9ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 03 ರಚನೆ : ಶ್ರೇಯಾ ,9ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 03
ಕವನ ರಚನೆ : ಶ್ರೇಯಾ
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ

          
                
ಶಾಲೆಯಲ್ಲಿ ತಾಯಿಯಂತೆ 
ಸಲುಹಿದವರು ನೀವು
ತಂದೆಯಂತೆ ತಪ್ಪನ್ನು ತಿದ್ದಿದವರು ನೀವು
ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ 
ಬೆಳೆಸಿದವರು ನೀವು
ಪ್ರತಿಯೊಬ್ಬ ಶಿಷ್ಯನ ಸಾಧನೆಗೆ 
ಕಾರಣರಾದವರು ನೀವು

ನೀವು ಕೊಟ್ಟ ಪೆಟ್ಟು 
ಕಣ್ಣಲ್ಲಿ ನೀರು ಸುರಿಸಿತು
ಅದೇ ಪೆಟ್ಟು ನಮ್ಮನ್ನು 
ಬೆಳಕಿನ ದಾರಿಗೆ ಕರೆದೊಯ್ಯಿತು

ಈ ಜಗತ್ತಿನಲ್ಲಿ ಪ್ರೀತಿ ಕಾಳಜಿ 
ವಾತ್ಸಲ್ಯ ಕೊಡುವವರು ತಂದೆ ತಾಯಿ 
ಬಿಟ್ಟರೆ ನೀವು ಮಾತ್ರ
ಕಲಿಕೆಯಲ್ಲಿ ಕುಗ್ಗಿದರೆ ಮೇಲಕ್ಕೆತ್ತುವಿರಿ  
ನಿಸ್ವಾರ್ಥ, ವಿಶಾಲ ನಿಮ್ಮ ಮನಸ್ಸಿನ ಗಾತ್ರ

ಪ್ರತಿಯೊಬ್ಬ ಸಾಧಕನ ಹಿಂದೆ 
ಇದ್ದೆ ಇರುತ್ತಾರೆ ಒಬ್ಬರು ಗುರುಗಳು 
ದೇವರ ರೂಪದಲ್ಲಿರುವ ನಿಮ್ಮನ್ನು 
ಗೌರವಿಸಿ ಸ್ಮರಿಸುತ್ತೆ ನನ್ನ ಕಂಗಳು
.................................................... ಶ್ರೇಯಾ
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
*******************************************


ಬಾನೆಂಬ ಚಪ್ಪರದಲಿ ಮಿನುಗುವ ನಕ್ಷತ್ರ
ನಕ್ಷತ್ರಗಳ ಮನಸ್ಸಿಗೆ ಯಾವಾಗಲು ಹತ್ತಿರ
ತಿಂಗಳ ಬೆಳಕನ್ನು ಸೂಸಿ ಆಗುತ್ತಾನೆ ಮಿತ್ರ
ಅವನೇ ನಮ್ಮ ಬಾನ ಚಂದಿರ

ಯುಗ ಯುಗಗಳು ಕಳೆದರು 
ಮರಳಿ ಬರುತಾನೆ ಅವನು
ದಿನ ದಿನಗಳು ಕಳೆದರು ಮರಳಿ 
ಬರುತಾನೆ ಅವನು
ಅವನೇ ನಮ್ಮ ಬಾನ ಚಂದಿರ

ಮುಸ್ಸಂಜೆಯಾದರೆ ನೈದಿಲೆಯು ತಲೆಯೆತ್ತಿ ನೋಡುವುದು ಅವನನ್ನು
ನೋಡುತ್ತಾ ನಾಚುವುದು 
ಅವನ ಸುಂದರ ನಗುವನ್ನು
ಅವನೆ ನಮ್ಮ ಬಾನ ಚಂದಿರ
.................................................... ಶ್ರೇಯಾ
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************ಕನ್ನಡಿಗರು ಮೆಟ್ಟಿದ ನಾಡು 
ನಮಗೆಲ್ಲ ನೆಲೆಬೀಡು
ಪ್ರೀತಿಗೆ ಇಲ್ಲಿದೆ ಸುಂದರವಾದ ಹಾಡು
ಪ್ರೀತಿಗೆ ಮಿಡಿವ ಭಾಂದವ್ಯದ ರಸಗೂಡು

ವಿಶ್ವಕೆಲ್ಲ ಭಾಷೆಗಳ ರಾಣಿ ನಮ್ಮ ಕನ್ನಡ
ವೀರರ ಚರಿತ್ರೆ ಹೇಳುವ ನಮ್ಮ ಕನ್ನಡ
ಭಾಷೆಯೊಳಗೆಲ್ಲ ಇಂಪು ನಮ್ಮ ಕನ್ನಡ
ಒಗ್ಗಟ್ಟಿದ್ದರೆ ಸುಂದರ ನೋಡ

ಪಂಪ ರನ್ನಾದಿಗಳ ಕಾವ್ಯದ ಗಾಂಭೀರ್ಯ
ಓದಿದರಷ್ಟೇ ಆಗುವುದಾಶ್ಚರ್ಯ 
ಉಳಿಸೋಣ ಮೆರೆಸೋಣ ಕನ್ನಡ ಕನ್ನಡ
ವಿಶ್ವಕ್ಕೆಲ್ಲ ಪಸರಿಸೋಣ ಕನ್ನಡ ಕನ್ನಡ 
.................................................... ಶ್ರೇಯಾ
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************ಬೃಂದಾವನದ ಸಾಮ್ರಾಟ
ಅಲ್ಲಿ ನಿನದೆ ಆರ್ಭಟ
ಕಣ್ಣು ಕುಕ್ಕಿದಂತಿದೆ ನಿನ್ನ ನೋಟ
ಚಿಕ್ಕಂದಿನಿಂದಲೇ ಕೇಳಿದೆವು ನಿನ್ನ ಪಾಠ

ಧರ್ಮ ಅಧರ್ಮದ ವ್ಯತ್ಯಾಸ ತಿಳಿಸಿದೆ
ಜಗಕ್ಕೆಲ್ಲ ನೀನು ಪ್ರೇಮದ ಸಂಕೇತವಾದೆ
ರುಕ್ಮಿಣಿ ಕೇಳಿದಳು ನಿನ್ನ ಮನಸ್ಸಿನ ಮಾತ
ಆದರೆ ನಿನ್ನ ಮನಸ್ಸು ರಾಧೆಗೆ ಸೀಮಿತ

ಜಗಕೆ ಆಧಾರ ನೀನು ಕೃಷ್ಣ
ನಾ ಬಿಟ್ಟು ಇರಲಾರೆ ನಿನ್ನ ಕೃಷ್ಣ
ನಾ ಕಾಯುವೆ ನೀ ಬರುವ ತನಕ
ದೀಪ ಬೆಳಗುವೆ ಬೆಳಕಾಗು ನನ್ನ ಮನಕ
.................................................... ಶ್ರೇಯಾ
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************ತುಳುವನಾಡಿನ ನಾಯಕನು ಇವನು
ಎಂದಿಗೂ ಕೈ ಬಿಡಲಾರ ಇವನು
ಸಹಾಯ ಬೇಡಿ ಬಂದರೆ ಇಲ್ಲಾ ಎನ್ನದವನು
ಅವನೆ ನನ್ನ ಅಜ್ಜಯ್ಯ

ನೀನು ಏನೆ ಶಿಕ್ಷೆ ಕೊಟ್ಟರು ಒಪ್ಪುವೆ
ಅದನ್ನು ಸಹಿಸುವ ಶಕ್ತಿ ನೀಡು ಎಂದು ಕೇಳುವೆ
ನಿನ್ನನ್ನು ನೋಡಬೇಕೆಂಬ ಆಸೆ ಹೆಚ್ಚುತ್ತಿದೆ
ಒಂದಲ್ಲ ಒಂದು ದಿನ ಬರುವೆ ನಿನ್ನ ಸ್ಥಳಕ್ಕೆ ಅಜ್ಜಯ್ಯ...

ನಿನ್ನ ಪವಾಡ ಕೇಳಿದರಾಗುವುದಾಶ್ಚರ್ಯ
ನಿನ್ನ ಕಥೆಯನ್ನು ಕೇಳುತ್ತಲಿರುವೆ ಅಜ್ಜಯ್ಯ..
ನನಗೆ ಗೊತ್ತು ನೀನು ಬಂದಿರುವುದು 
ಧರ್ಮ ಉಳಿಸಲು ಎಂದು
ಆದರೆ ನಾ ಕೇಳುವೆ ಎಲ್ಲರನ್ನು 
ಚೆನ್ನಾಗಿಟ್ಟಿರು ಎಂದು..
.................................................... ಶ್ರೇಯಾ
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************ಶಾಂತ ಸ್ವಭಾವದ ಜನರಿರುವ ನಾಡು
ನಮ್ಮ ಸಂಸ್ಕೃತಿಯ ನೆಲೆಬೀಡು
ಕಟ್ಟುತ್ತೇವೆ ಇಲ್ಲಿ ಒಗ್ಗಟ್ಟಿನ ಗೂಡು
ಅದುವೇ ನಮ್ಮ ತುಳುನಾಡು

ಕಾರಂತರು ಹುಟ್ಟಿದ ನಾಡು
ಸಾಹಿತ್ಯಗಳ ಸುಂದರ ಗೂಡು
ಇಲ್ಲಿರುವ ಸಾಹಿತಿಗಳನ್ನು ಒಮ್ಮೆ ನೋಡು
ಅದುವೇ ನಮ್ಮ ತುಳುನಾಡು

ಯಕ್ಷಗಾನ ಕಲೆಯ ನಾಡು
ಇಲ್ಲಿದೆ ದೈವ ಸಂಸ್ಕೃತಿಯ ಹಾಡು
ಧರ್ಮದ ತವರನ್ನು ನೋಡು
ಅದುವೇ ನಮ್ಮ ತುಳುನಾಡು

ಕುಂದವರ್ಮನು ಹುಟ್ಟಿದ ನಾಡು
ಪರಶುರಾಮ ಸೃಷ್ಟಿಯ ಬೀಡು
ಕೋಟಿ ಚೆನ್ನಯ್ಯನ ನಾಡು
ಅದುವೇ ನಮ್ಮ ತುಳುನಾಡು
.................................................... ಶ್ರೇಯಾ
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************ಭರತ ಭೂಮಿಯ ಸಂಸ್ಕೃತಿಯ ಕಲೆ
ನೋಡಿ ಹೇಳುತ್ತಾರೆ ಭಲೇ ಭಲೇ
ಮನಸೋತು ನಿಂತಿಹರು ನಮ್ಮ ಕಲೆಯ ಕಡೆ
ಕಲೆಯಲ್ಲಿ ಇದೆ ಭಿನ್ನತೆಯ ನೆಲೆ

ಕರಾವಳಿಯ ಯಕ್ಷಗಾನ
ನೋಡಿದರೆ ಮಿಡಿಯುವಂತಿದೆ ಮನ
ಇದರಲ್ಲಿದೆ ಸಂಸ್ಕೃತಿಯ ವಿವಿಧ ಪ್ರಾಕಾರ
ಕರಾವಳಿಗೆ ಇದುವೇ ಆಧಾರ

ಹುಲಿ ಕುಣಿತ, ಸುಗ್ಗಿ ಕುಣಿತ
ನೋಡಿ ಕುಣಿದಾಡಿ ನಲಿಯುತಾ
ಕೋಲಾಟ, ಗೊಂಬೆಯಾಟ
ಇದುವೇ ಜಾನಪದದ ಪಾಠ

ಕಂಬಳದ ಅಬ್ಬರ
ಮೂಡಿದೆ ಹೊಸ ಆಶಾಂಕುರ
ಜಾನಪದದ ಸೊಬಗೆ ಇಂಚರ
ಒಟ್ಟಿನಲ್ಲಿ ಜಾನಪದವೇ ಸುಂದರ
.................................................... ಶ್ರೇಯಾ
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article