-->
ಮಕ್ಕಳ ಕವನಗಳು - ರಚನೆ : ದೀಪ್ತಿ ಕೆ ಸಿ

ಮಕ್ಕಳ ಕವನಗಳು - ರಚನೆ : ದೀಪ್ತಿ ಕೆ ಸಿ

ಮಕ್ಕಳ ಕವನಗಳು
ಕವನ ರಚನೆ : ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ


ಮರೆಯಲಾರೆ ಬಾಲ್ಯದ ದಿನಗಳನ್ನು
ಅಲ್ಲಿಂದಲೇ ಚಿತ್ರಿಸಲು ಆರಂಭಿಸಿದ್ದೆ 
ನನ್ನೆಲ್ಲಾ ಕನಸುಗಳನ್ನು...!

ತಾಯಿಯಿಂದ ಕಲಿತ ಪಾಠಗಳು
ತಂದೆಯ ಕೈ ಹಿಡಿದು ನಡೆದ ಕ್ಷಣಗಳು

ಗೆಳೆಯರೊಂದಿಗೆ ಆಡುತ್ತಿದ್ದ 
ಕಣ್ಣಾಮುಚ್ಚಾಲೆ ಲಗೋರಿ
ಒಂದು ರೀತಿಯ ಸಿಹಿನೆನಪುಗಳ ತಿಜೋರಿ..!

ಜಿಟಿ ಜಿಟಿ ಮಳೆಯೊಂದಿಗಿನ ಆಟ
ಬಾನಲ್ಲಿ ಹಾರಿಸುತ್ತಿದ್ದ 
ಬಣ್ಣ ಬಣ್ಣದ ಗಾಳಿಪಟ

ಗೆಳೆಯರೊಡನೆ ಸೇರಿ ಮಾಡಿದ ತುಂಟಾಟ
ಅಮ್ಮನ ಕೈಯಿಂದ ತಪ್ಪಿಸಿಕೊಳ್ಳಲು ಪರದಾಟ

ಬಾಲ್ಯ ಮರಳಿ ಬರಲು ಸಾಧ್ಯವಿಲ್ಲ
ಆದರೆ ಅಂದಿನ ನೆನಪುಗಳು 
ಮನದಲ್ಲಿ ಅಚ್ಚಾಗಿ ಉಳಿದಿದೆಯಲ್ಲಾ...!
................................................ ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************

        
ಬಾಳು ಕಲಿಸಿದ ಸಲಹೆಗಾರ
ನನ್ನ ಜೀವನದ ಆಧಾರ

ಸಣ್ಣ ತಪ್ಪನ್ನೂ ತಿದ್ದಿ ತೀಡಿರುವೆ
ಇಂದಿಗೂ ನನ್ನನ್ನು ಮಗಳೇ ಎಂದು ಕರೆಯುವೆ.....!

ನಲಿವಲ್ಲೂ ನನ್ನೊಂದಿಗಿರುವೆ
ದುಃಖದಲ್ಲಿ ಕಣ್ಣೀರ ಒರೆಸಿರುವೆ

ನಿನ್ನ ಮಾತುಗಳನ್ನೇ ನಾನು 
ವೇದವಾಕ್ಯವೆಂದು ತಿಳಿದಿರುವೆ
ಏಕೆಂದರೆ ನಾನು ನಿನ್ನನ್ನು ದೇವರಂತೆ ಕಾಣುವೆ

ನೀನು ಪಟ್ಟಿರುವ ಕಷ್ಟವನ್ನೆಲ್ಲಾ 
ನೋಡುತ್ತಾ ಬಂದಿರುವೆ
ಇನ್ನಾದರೂ ನಿನ್ನನ್ನು ಖುಷಿಯಾಗಿಡಬೇಕು 
ಎಂಬ ಕನಸನ್ನು ಹೊತ್ತು ನಾ ಕಾಯುತ್ತಿರುವೆ
................................................ ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************


         
ಗುಬ್ಬಚ್ಚಿಗಳೇ ಎಲ್ಲಿಗೆ ಮರೆಯಾಗಿ ಹೋದಿರಿ..?
ನಿಮ್ಮ ಅವನತಿಗೆ ಕಾರಣವನ್ನಾದರೂ ಹೇಳಿರಿ

ಚೀಂವ್ ಚೀಂವ್ ಎಂದು ಬಾನಂಗಳದಿ
ಹಾರಾಡುತ್ತಿದ್ದ ಹಕ್ಕಿ ಇದು
ಆದರೆ ಇಂದು ಎಲ್ಲಿಯೂ ಕಾಣಸಿಗದು..!

ಪುಟ್ಟ ಆಕಾರದ ಈ ಗುಬ್ಬಚ್ಚಿ
ಅದೆಷ್ಟೋ ದೂರದಿಂದ ಹುಲ್ಲನ್ನು ತರುತ್ತಿತ್ತು 
ತನ್ನ ಮರಿಗಳಿಗಾಗಿ 
ಚಿಕ್ಕ ಗೂಡೊಂದನ್ನುನಿರ್ಮಿಸುತ್ತಿತ್ತು.....!

ಮನೆಯಂಗಳದಲ್ಲೆಲ್ಲಾ ಹಾರಾಡಿ 
ಮನಕೆ ಮುದ ನೀಡುತ್ತಿತ್ತು
ಅದನ್ನು ನೋಡಲು 
ಎರಡು ಕಣ್ಣು ಸಾಲದು ಎಂದೆನಿಸುತ್ತಿತ್ತು..!

ಬಾನಂಗಳದಿ ಹಾರುತ್ತಿತ್ತು ರೆಕ್ಕೆ ಬಿಚ್ಚಿ
ಆದರೆ ಇಂದು ಮರೆಯಾಗುತ್ತಿದೆ ಕಣ್ಣುಮುಚ್ಚಿ..!

ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳ ಸಮೂಹವನ್ನು 
ಕಾಪಾಡಲು ಪಣತೊಡಬೇಕಿದೆ ನಾವಿನ್ನು
................................................ ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************


           
ಚಂದ್ರನ ತೋರಿಸಿ ಕೈತುತ್ತು ತಿನಿಸಿದ್ದೆ
ನಿದ್ರೆ ಬಂದಾಗ ಜೋಗುಳವ ಹಾಡಿದ್ದೆ..!

ಬೇಜಾರಾದಾಗ ಕಥೆ ಹೇಳಿದೆ
ಸಣ್ಣ ತಪ್ಪನ್ನೂ ತಿದ್ದಿ ತೀಡಿದೆ..!

ದಿನನಿತ್ಯವೂ ಕೆಲಸದಲ್ಲಿ ನಿರತಳಾಗಿರುವೆ
ನಮ್ಮ ಖುಷಿಯಲ್ಲೇ ನಿನ್ನ ಖುಷಿಯನ್ನು ಕಾಣುವೆ....!

ನಿನ್ನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇನು..?
ಎಂದಿಗೂ ಹೀಗೇ ಖುಷಿಯಾಗಿರಬೇಕು ನೀನು

ನೀನೇ ನನ್ನ ಮೊದಲ ಗುರುವಾಗಿರುವೆ
ನಿನ್ನಿಂದಲೇ ನಾನು ಎಷ್ಟೊಂದು ವಿಷಯ ಕಲಿತಿರುವೆ..!

ಹೇಗೆ ವರ್ಣಿಸಲಿ ನಿನ್ನನ್ನು 
ನನ್ನ ಪ್ರೀತಿಯ 'ಅಮ್ಮ' ನೀನು
................................................ ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************



ನಿನ್ನೊಂದಿಗೆ ನಾನು ಯಾವಾಗಲೂ
ಜಗಳವಾಡುತ್ತಿರುವೆ
ಆದರೂ ನೀನು ನನ್ನ ನೆಚ್ಚಿನ ಅಕ್ಕನಾಗಿರುವೆ.....!

ನಿನ್ನಿಂದ ನಾನು ಕಲಿತಿರುವೆ ಸುಮಾರು ವಿಷಯ
ನೀನು ನನಗೆ ಯಾವಾಗಲೂ ನೀಡುವೆ ಅಭಯ

ಯಾವುದೇ ವಿಷಯದಲ್ಲೂ ನನಗಿರಲು ಉತ್ಸಾಹ
ಅದಕ್ಕೆ ಕಾರಣವೇ ನಿನ್ನ ಪ್ರೋತ್ಸಾಹ

ನಿನ್ನ ಬಗ್ಗೆ ಎಂದಿಗೂ ಪ್ರೀತಿ ಇರುತ್ತದೆ 
ನನ್ನ ಮನದಲ್ಲಿ
ಅದನ್ನು ಯಾವತ್ತೂ ತೋರಿಸಿಕೊಂಡಿಲ್ಲ 
ನಿನ್ನ ಎದುರಲ್ಲಿ.....!

ನಾನು ನಿನ್ನೊಂದಿಗೆ ಕಳೆಯುವ ಪ್ರತೀ ಕ್ಷಣವೂ
ಎಂದಿಗೂ ಮರೆಯಲಾಗದ ಅನುಭವವು.....!

ಯಾವತ್ತೂ ಹೀಗೇ ನಗು ನಗುತ್ತಿರಬೇಕು ನೀನು
ಅದನ್ನು ನೋಡುತ್ತಾ ಖುಷಿಪಡುವೆ ನಾನು
................................................ ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************



ಪ್ರಕೃತಿಯೇ ಮಾನವನ ಜೀವನ
ಚಿಲಿಪಿಲಿ ಹಕ್ಕಿಗಳಿಗೆ ಇದೇ ಆಶ್ರಯ ತಾಣ

ಕೋಗಿಲೆಯ ಸುಮಧುರ ಗಾನ
ಅದನ್ನು ಕೇಳುತ್ತಾ ಕಳೆದುಹೋಯ್ತು 
ನನ್ನೀ ಮನ.....!

ನವಿಲಿನ ನೃತ್ಯಕ್ಕೆ ತಲೆಬಾಗುವ ಗಿಡಮರಗಳು
ತಣ್ಣನೆ ಬೀಸಿದ ತಂಗಾಳಿಗೆ ನಾಚಿದ ಮುಂಗುರುಳು.....!

ಆಹಾ... ಅದೆಂಥಾ ಸೊಗಸು
ಸ್ವರ್ಗವೇ ಭೂಮಿಗೆ ಇಳಿದಿದೆಯಾ 
ಎಂಬಂತೆ ಭಾಸವಾಯ್ತು...!

ಸೂರ್ಯನ ಮರೆಮಾಡಿದ ಮೋಡಗಳು
ಇಳೆಗೆ ಮೆಲ್ಲನೆ ಜಾರಿದ ಮಳೆಹನಿಗಳು

ಪ್ರಕೃತಿಗೆ ಬಂದಿದೆ ಅದೇನೋ ಕಳೆ
ಏಕೆಂದರೆ ಶುರುವಾಗಿದೆ ಮುಂಗಾರು ಮಳೆ
................................................ ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************


          
ನಗುವೆಂಬುದು ಒಂದು ಮಾಯೆ..
ಅದು ಬಂದಾಕ್ಷಣ ಕಳೆಯುವುದು 
ನೋವೆಂಬ ಛಾಯೆ!!

ಮಕ್ಕಳ ತುಂಟ ನಗೆಯ ಸೊಬಗು
ಅಮ್ಮನ ಕಂಗಳಲ್ಲಿ ಆನಂದದ ಮೆರುಗು....!

ಮಗಳ ಸಾಧನೆಯ ಕಂಡರೆ
ಅಪ್ಪನ ಮೊಗದಲ್ಲಿ ಸಂತೃಪ್ತಿಯ ಚಹರೆ!

ಶಿಷ್ಯನ ಸಾಧನೆಯೇ ಸಾಕು
ಗುರುವಿಗೆ ಸಂತಸ ಪಡಲು ಇನ್ನೇನು ಬೇಕು..?

ಮಳೆ ಬಂದು ತಂಪಾದ ಧರೆಯ ಕಂಡರೆ
ರೈತನ ಕಂಗಳಲ್ಲಿ ಆನಂದ ಧಾರೆ..!

ಬಾಲ್ಯವ ನೆನೆದಾಕ್ಷಣ
ಮೊಗದಲ್ಲಿ ಕಿರುನಗೆಯ ನರ್ತನ!!

ನಗುವೆಂಬ ಮಾಣಿಕ್ಯ ಧರಿಸಿರಿ..
ಎಲ್ಲರ ಮನದಲ್ಲೂ ಶಾಶ್ವತವಾಗಿರಿ..
................................................ ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************



ಮನದಿ ತುಂಬಿದೆ ನೂರಾರು ಪ್ರಶ್ನೆಗಳು
ರಾತ್ರಿಯೆಲ್ಲಾ ನಿದ್ರೆಯಲ್ಲಿ ಅದೆಷ್ಟೋ ಕನಸುಗಳು..!

ಬೇಸರದ ದಿನವೆಲ್ಲಾ ಕಳೆದು ಹೋಗಲಿ
ಸಂತಸದ ಮೆರುಗು ಇನ್ನಷ್ಟು ಬರಲಿ.....!

ಆಕಾಶದಂತೆ ನಮ್ಮ ಜೀವನವೂ...
ಕೆಲವೊಮ್ಮೆ ಪೂರ್ತಿಯಾಗಿ ಆವರಿಸಿಬಿಡುತ್ತದೆ 
'ಸೋಲು' ಎಂಬ ಕಾರ್ಮೋಡವು...!

ಗೆಲುವಿನ ಹಾದಿಯ ಸೇರುವುದು ಹೇಗೆ...?
ಎಲ್ಲರಿಗೂ ತಿಳಿದಿದೆ ಈ ಪ್ರಶ್ನೆಗೆ 
ಉತ್ತರ ಹುಡುಕುವ ಬಗೆ....!

ಇವನ್ನೆಲ್ಲಾ ದಾಟಿ ಮುಂದೆ ಸಾಗುವುದು 
ನಮ್ಮ ಕೈಯಲ್ಲಿದೆ
ಏಕೆಂದರೆ ಪ್ರಯತ್ನದಿಂದ 
ಸಾಧಿಸಲಾಗದ ಕೆಲಸ ಯಾವುದಿದೆ..?

ಮೊದಲು ಆಸಕ್ತಿ ತೋರಬೇಕಿದೆ ನಮ್ಮ ಮನ
ಆಗ ಇನ್ನಷ್ಟು ಚಿತ್ತಾರಮಯವಾಗುವುದು
ಜೀವನ.....!
................................................ ದೀಪ್ತಿ ಕೆ ಸಿ
10ನೇ ತರಗತಿ
ಕೆ ಪಿ ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************



Ads on article

Advertise in articles 1

advertising articles 2

Advertise under the article