ನವರಾತ್ರಿ ಹಬ್ಬದ ವಿಶೇಷ - 2023 : ಮಕ್ಕಳ ಕವನಗಳು
Monday, October 23, 2023
Edit
ಮಕ್ಕಳ ಜಗಲಿಯಲ್ಲಿ
ನವರಾತ್ರಿ ಹಬ್ಬದ ವಿಶೇಷ - 2023
ಮಕ್ಕಳ ಕವನಗಳು
ಕನ್ನಡಿಗರಿಗೆ ಸಂತಸದ ಹಬ್ಬ...
ಹೆಣ್ಣಿಗೆ ನವರಾತ್ರಿ ಹಬ್ಬ..
ಅದುವೇ ದಸರಾ ಹಬ್ಬ..
ನವರಾತ್ರಿಯಲಿ ದೇವತೆ ಮಿನುಗುವವಳು...
ಪೂಜಿಸಿದರೆ ಆನಂದಿಸುವವಳು...
ಕರುನಾಡಿಗೆ ಹಾರೈಸುವವಳು...
ಅವಳೇ ದುರ್ಗಮಾತೆಯವಳು..
ದುರ್ಗಾ ಮಾತೆಯಲಿ ತಾಳ್ಮೆಯಂತೆ...
ಕಾಳಿಕಾಂಬೆಯಲಿ ಕೋಪವಂತೆ...
ಚಾಮುಂಡಿಯಲಿ ಆನಂದವಂತೆ...
ಅದುವೇ ನವರಾತ್ರಿ ಮಾತೆಯ ಲಕ್ಷಣವಂತೆ...
ಪ್ರಕೃತಿಗೆ ಹಸಿರು ಚಂದ...
ಹೆಣ್ಣಿಗೆ ಸೌಂದರ್ಯ ಚಂದ...
ನವಿಲಿಗೆ ಬಣ್ಣ ಚಂದ...
ಮೈಸೂರಿಗೆ ದಸರಾ ಹಬ್ಬ ಚಂದ....
10 ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
******************************************
ಹಂಚುವ ಬನ್ನಿಯ..
ಸ್ನೇಹ ಬಿಗಿಯಾಗಲೆಂದು
ಹಂಚುವ ಬನ್ನಿಯ....
ರಾಮನೋರ್ವ ಪೂಜೆಯ ಮಾಡಿದ ಬನ್ನಿಯ..
ಲಂಕೆಯ ವಿಜಯಕ್ಕಾಗಿ ಸ್ಮರಿಸಿದ ಬನ್ನಿಯ..
ಗೆದ್ದನು ಲಂಕೆಯ ರಾಮನು..
ತಂದನು ನೆನಪಿಗೇ ಬನ್ನಿಯ..
ದಸರಾ ಸಮಯದಿ ಹಂಚಿದ ರಾಮ ಬನ್ನಿಯ..
ಮಾಡಿದ ಪೂಜೆಯ ಶಮೀಯ..
ಪಾಂಡವರೆಲ್ಲ ನಮಿಸಿದರು ಬನ್ನಿಯ..
ಮುಚ್ಚಿಟ್ಟರು ಶಮೀಯ ಕೆಳಗಡೆ ಶಸ್ತ್ರವ..
ಮಹಾಋಷಿ ವರ್ತಂತರೂ ಕೇಳಿದರು
ಹದಿನಾಲ್ಕು ಕೋಟಿ ಚಿನ್ನದ ನಾಣ್ಯವ ..
ರಾಮನು ಹಾಕಿದ ಯೋಜನೆಯ
ದೇವಲೋಕದ ಮೇಲೆ ಆಕ್ರಮಣವ..
ತಿಳಿದನು ಇಂದ್ರ ತಡಿದನು ಆಕ್ರಮಣವ..
ಕೊಟ್ಟನು ಶಮೀಯಿಂದ ಕೇಳಿದ ಹಣವನ್ನು..
ಬಂಗಾರದ ಬದಲಿಗೇ ನೀಡುವ ಬನ್ನಿಯ..
ಚಿರಕಾಲ ಉಳಿಯಲಿ ನಮ್ಮಿ ಸಂಬಂಧವ..
ದ್ವಿತೀಯ ಪಿಯುಸಿ
ಸ. ಪ. ಪೂ. ಕಾಲೇಜು ನರಗುಂದ
ಗದಗ ಜಿಲ್ಲೆ
******************************************
ಎಲ್ಲರಿಗೂ ಆನಂದ ಪಡಿಸುವ ಕ್ಷಣ
ಅಂಬಾರಿ ನೋಡುವ ಕಣ್ಣ
ಮನಸು ಬಯಸಿದೆ ಇನ್ನ
ಒಂಬತ್ತು ದಿನದ ಪೂಜೆ
ನೋಡಲು ನಮಗೆಲ್ಲರಿಗೂ ರಜೆ
ನಗುವನ್ನು ಹೊಲಿಯುವ ದರ್ಜೆ
ನಾವು ಹಾಕಬೇಕು ಮೈಸೂರು ಕಡೆ ಹೆಜ್ಜೆ
ಅರಮನೆ ಸಡಗರ ಕಾಣೋದಕ್ಕ
ಅಂಬಾರಿ ಜೊತೆ ಸವಾರಿ ಮಾಡಕ
ಕೋಟಿ ಜನರ ನಡುವೆ ಒಂದಾಗಾಕ
ಜಗತ್ತೇ ಬರತೈತಿ ಮೈಸೂರು ನೋಡಾಕ
ಚಾಮುಂಡಿ ದೇವಿನ ಕಣ್ತುಂಬ ನೋಡಿ
ಆನೆ ಜೊತೆಗೆ ಮೆರವಣಿಗೆ ಮಾಡಿ
ಆರಕ್ಷಕರು ನಿಂತರು ನೋಡಲು ಕಿಡಗೇಡಿ
ದಸರಾ ಮುಗಿದ ಮೇಲೆ
ಮರಳಿದೆವು ಮತ್ತೊಮ್ಮೆ ನಮಸ್ಕಾರ ಮಾಡಿ.
ದ್ವಿತೀಯ ಪಿಯುಸಿ
ಎಸ್ ಕೆ ಕಾಲೇಜು ಸವದತ್ತಿ
ತಾಲೂಕು : ಸವದತ್ತಿ, ಜಿಲ್ಲೆ: ಬೆಳಗಾವಿ
******************************************
ಮದುವಣಗಿತ್ತಿಯಂತೆ ಆಗಿದೆ ಸಿಂಗಾರ
ವಿಜಯ ಹಬ್ಬದ ದೀಪಗಳ ಅಲಂಕಾರ
ರಾಜಬೀದಿಯಲ್ಲಿ ನೋಡಿ ಆನೆಗಳ ದರ್ಬಾರ
ಜಗನ್ಮೋಹನ ಅರಮನೆಯ
ವೈಭೋಗ ಭವ್ಯ ಮನೋಹರ
ಮೈಸೂರಿಗೆ ಹರಿದು ಬಂದಿದೆ ಜನಸಾಗರ
ಕಣ್ಣತುಂಬಿಕೊಳಲು ಪಟ್ಟದ ಗೊಂಬೆಗಳ ಸಿಂಗಾರ
ಮನಸಿಗೆ ತಂಪುಕೊಡಲು ಫಲ ಪುಷ್ಪ ಪ್ರದರ್ಶನ
ಹೊಟ್ಟೆಗೆ ತಂಪೆನಿಸಲು ವಿವಿಧ ಬಗೆಯ
ಆಹಾರ ಮೇಳ
ಕಣ್ಣಿಗೆ ತಂಪೆನಿಸಲು ಯುವ ದಸರಾ
ಮತ್ತಷ್ಟು ಮಗದಷ್ಟು ಹೇಳಿದಷ್ಟು ಮುಗಿಯದ
ಕಾರ್ಯಕ್ರಮಗಳ ಆಗರ
ಮೈಸೂರಿನಲ್ಲಿ ನೆಲಿಸಿಹಳು ತಾಯಿ
ಚಾಮುಂಡೇಶ್ವರಿ
ನೋಡುವುದೇ ಭಾಗ್ಯ
ಆಕೆಯನ್ನು ಹೊತ್ತ ಜಂಬುಸವಾರಿ
ಮನೆಮನಗಳಲ್ಲಿ ಸಡಗರ
ತಂದಿರುವ ದಸರಾಹಬ್ಬ
ಗಂಧದ ನಾಡಿನ ಇತಿಹಾಸ
ಸಾರುವ ನಾಡಹಬ್ಬ
ನವರಾತ್ರಿಯ ಸಂತಸ ತಂದಿದೆ
ನಾಡಿಗೆಲ್ಲ ಸಂಭ್ರಮದ ಹಬ್ಬ
ನವದಿನಗಳ ಚಾಮುಂಡೇಶ್ವರಿಯ
ನವರೂಪ ಸಾರುವ ಸಾಂಪ್ರದಾಯಿಕ ಹಬ್ಬ
ದ್ವಿತೀಯ ಪಿಯುಸಿ
ಕರ್ನಾಟಕ ಕಲಾ ಮಹಾವಿದ್ಯಾಲಯ
ಧಾರವಾಡ ಜಿಲ್ಲೆ
**********************************************