ಪ್ರೀತಿಯ ಪುಸ್ತಕ : ಸಂಚಿಕೆ - 77
Friday, September 22, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 77
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಆನೆ ಮಕ್ಕಳಿಗೆ ಒಂದು ಅಚ್ಚರಿಯ ಪ್ರಾಣಿ. ಅಲ್ಲವೇ. ಇದು ಮೂರ್ತಿ ಎಂಬ ಮದುಮಲೈ ವನ್ಯಧಾಮದಲ್ಲಿರುವ ಹಳೆಯ ತೆಪ್ಪಕಾಡು ಆನೆ ಪಾಳಯದಲ್ಲಿ. ಮಖ್ನಗಳೆಂದರೆ ದಂತವಿಲ್ಲದ ಗಂಡಾನೆಗಳು. ಸಾಮಾನ್ಯವಾಗಿ ಇಂತಹ ಆನೆಗಳು ಬಹಳ ಜೋರು ಇರುತ್ತವಂತೆ. ಈ ಮಖ್ನ ಮಾತ್ರ ಬಹಳ ಮೃದು ಸ್ವಭಾವದವನು. ಆದರೆ ಅವನು ಮಹಾಕ್ರೂರಿ ಎಂದು ಜನ ಅವನ ಬಗ್ಗೆ ಏನೇನೋ ಕಥೆ ಕಟ್ಟಿದ್ದರು. ಗಿರಿಜನರಿಗೆ ಈ ಆನೆ ಅಂದರೆ ಬಹಳ ಪ್ರೀತಿ. ಅನೇಕ ಮನೆಗಳಲ್ಲಿ ಅವನ ಫೋಟೋ ಕೂಡಾ ಹಾಕಿಕೊಂಡಿದ್ದರು. ಯಾಕೆಂದರೆ ಕಾಡಿನಲ್ಲಿ ಹಣ್ಣು, ಮೇವು ಸಂಗ್ರಹಿಸುವ ಗಿರಿಜನರಿಗೆ ಅದು ತೊಂದರೆ ಕೊಡುತ್ತಿರಲಿಲ್ಲ. ಇಂತಹ ಆನೆಯನ್ನು ಹಿಡಿಯಬೇಕು ಎಂದು ಅರಣ್ಯ ಇಲಾಖೆ ಆಜ್ಞೆ ಮಾಡಿತು. ಅವರು ಹೇಗೆ ಅವನನ್ನು ಹಿಡಿದರು, ಎಂದು ಓದಿ ತಿಳಿದುಕೊಳ್ಳಿ. ಚಿತ್ರಗಳು ಪುಟ ತುಂಬಾ ಹರಡಿಕೊಂಡು ಸುಂದರವಾಗಿವೆ.
ಲೇಖಕರು: ಅರವಿಂದ ಕ್ರಿಷ್ ಬಾಲ
ಅನುವಾದ: ಎಸ್.ಸಿವಾಕರ್
ಚಿತ್ರಗಳು: ಸಂದೀಪ್ ಕೆ. ಲೂಯಿಸ್
ಪ್ರಕಾಶಕರು: ತುಲಿಕಾ
ಬೆಲೆ: ರೂ.150
ಈ ಪುಸ್ತಕ 6+ ವಯಸ್ಸಿವರಿಗಾಗಿ ಇದೆ. ದೊಡ್ಡ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************