ಕವನ ರಚನೆ : ಪ್ರಿಯ , ಪ್ರಥಮ ಪಿ.ಯು.ಸಿ
Wednesday, July 26, 2023
Edit
ಕವನ ರಚನೆ : ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಭಾರತ ಮಾತೆ
ನೀ ನಮ್ಮೆಲ್ಲರ ಜನ್ಮ ದಾತೆ....
ಅಂಧಕಾರದ ಬಾನಂಗಳದಲ್ಲಿ
ಧ್ಯುತಿಯಾಗಿ ಚಿಮ್ಮುತಿದೆ
ಚುಕ್ಕಿ ತಾರೆಗಳ ಹೊಳಪಿನ ವೈವಿಧ್ಯತೆ.
ಪೃಥ್ವಿಯಲಿ ವಸಂತನಾಗಮನದ
ಚಿತ್ತಾರದ ಸೊಬಗಿಗೆ
ವಿ-ಜಾತಿ ಖಗಗಳ ಸುಮಧುರ ಸ್ವರಗೀತೆ.
ಕುರು ಸಮರದ ಸೇನೆಯಂತೆ
ಪೂರ್ಣಚಂದ್ರರ ಲೇಖನಿಯಲಿ
ಸಿಹಿಯೋಧರ ಸೇನೆಯ ಸಂಹಿತೆ.
ನೇಗಿಲಯೋಗಿಯೇ ದೇಶದ
ಭಾಗ್ಯದ ಹಣತೆ....
ಅವನಿಲ್ಲದಿರಲು ಜಗದ ಪಾಡು
ಅಗ್ನಿಯಲಿ ಉರಿಯುವ ಚಿತೆ.
ಶಾಂತಿ, ಸ್ನೇಹ, ಸೌಹಾರ್ಧ ತುಂಬಿದ
ಭವ್ಯ ಭಾರತ.
ಸೌಹಾರ್ದತೆಯನರಿಯದ ಜನತೆಗೆ
ಏತಕ್ಕಾಗಿ ಇಲ್ಲಿದೆ ಮತ....
ಜಾತಿ, ಕುಲ, ಮತ, ಪಂಥಗಳ
ತಾನೇ ನಿರ್ಮಿಸಿದ ಮಾನವ.
ಮಾನವ ಸೌಹಾರ್ದದಲಿ
ಯಾಕಾಗುವನು ದಾನವ.
ಹರಿವ ಜಲ ಏಕೆ ಕೇಳದು ನಮ್ಮ ಕುಲ.
ಇದರಿಂದಲೇ ತಿಳಿಯುವುದು
ಮಾನವ ನಿರ್ಮಿತ ಸ್ವಾರ್ಥದ ಸಂಕುಲ.
ಕಲ್ಮಶವಿಲ್ಲದೆ ನಿಸ್ವಾರ್ಥತೆಯಿಂದ
ಹಾಲೆರೆವಳು ಗೋಮಾತೆ.
ಕೆಡುಕು ಮನದ ಮನುಜ
ಮಾಡುವನು ಸ್ವಾರ್ಥದ ಗಾಥೆ.
ಅಸಮಾನತೆ ಮೆಟ್ಟಿ
ಸಮಾನತೆ ಬೆಳಗಲಿ ವಿವಿದೆಡೆ.
ಜನತೆಯ ಮನ ತಿರುಗಲಿ
ಸೌಹಾರ್ದದ ಕಡೆ.
ಕಪ್ಪು - ಬಿಳುಪು ಕಪ್ಪು ಚುಕ್ಕೆಯಾಗಿವೆ
ಈ ಜಗದಲಿ
ಅಡೆತಡೆಗಳ ಮೆಟ್ಟಿ ಮುನ್ನಡೆಯಬೇಕು
ನಾವು ಭರದಲಿ.
ಅಸಮಾನತೆಯ ಕೆಡುವಲ್ಲಿ
ನಮ್ಮೆಲ್ಲರ ಆದ್ಯತೆ.
ಸರ್ವ ಮತ ಒಮ್ಮತದಿಂದ
ಎಲ್ಲರ ಮನದಲಿ ಮೂಡಲಿ
ಶಾಂತಿಯ ಸೌಹಾರ್ದತೆ.
................................................ ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಭೂಮಿಯೊಡಲ ತಲುಪಿತು ಮಳೆ...
ಗುಡುಗು - ಮಿಂಚೆಂಬ
ಪಟಾಕಿ ಹಬ್ಬದ ಭಾವದ ಸೆಳೆ...
ಮೊದ - ಮೊದಲ ಹನಿ - ಹನಿ ಮಳೆ...
ಇಳೆಯಾಯ್ತು ಹಚ್ಚ ಹಸುರಿನ ರಂಗಿನ ಮಾಲೆ...
ಇಳೆಯ ತುಂಬೆಲ್ಲ ಹಸುರಿನ ಚಿಗುರು...
ಹಕ್ಕಿಗಳ ಚಿಲಿಪಿಲಿ ನಾದಕೆ
ಬರುತಿದೆ ಮುಂಗಾರು...
ಪಚ್ಚೆ - ಪಚ್ಚೆಯ ಗದ್ದೆಯ ಬಯಲು...
ನೋಡುತಿರೆ ನನ್ನ ಕಣ್ಣಾಯ್ತು ಮರುಳು...
ಆಗಸದಲ್ಲಿ ನೀಲಿ ಮೋಡಗಳ ಸರದಿ...
ಹರಿಯುತಿದೆ ಸ್ವಚ್ಛಂದ ನದಿ
ಜುಳು - ಜುಳು ನಾದದಿ...
ಇದು ಗದ್ದೆಯ ಬೆಳೆ ಬಿತ್ತನೆಯ ಸೌಖ್ಯ ಕಾಲ...
ಹೊರೆಯಾಗದಿರಲಿ ರೈತನಿಗೆ ದುಡ್ಡಿನ ಸಾಲ...
ಗದ್ದೆಯ ಬಯಲ ನಡುವೆ ನಿಂತಿದೆ
ಬೆದರು ಗೊಂಬೆ...
ನಾಚಬೇಕು ಶ್ರಮದ ಬೆಲೆ ಅರಿಯದ
ನಾಡ ಗೊಂಬೆ....!!
ಬೆಳೆಯು ಚಿಗುರಿ ತೆನೆಯು ಬಂದಿತು...
ರೈತನ ಮುಖದಿ ಸಂತೋಷವ ತಂದಿತು...
ರೈತರು ಮಾಡಿದರು
ಭತ್ತದ ಕೊಯ್ಲಿನ ಕಟಾವು...
ರೈತರ ಮನೆಯಲಿ ಸಂಭ್ರಮದ
ಸುಂದರ ಔತಣ ಕೂಟವು...!!
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************