ಬರಹದ ಕೈಚಳಕ - ಕಥೆ ರಚನೆ : ಕಾವ್ಯ ಕಡೇಮನಿ, ಪ್ರಥಮ ಪಿಯುಸಿ
Tuesday, June 13, 2023
Edit
ಕಥೆ ರಚನೆ : ಕಾವ್ಯ ಕಡೇಮನಿ
ಪ್ರಥಮ ಪಿಯುಸಿ
ಎಸ್ ವಿ ಟಿ ವನಿತಾ ಪದವಿ ಪೂರ್ವ
ಕಾಲೇಜು ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ನಾನು ಗೀತಾ.... ನಮ್ಮ ಮನೇಲಿ ನಾಲ್ಕು ಜನ. ಅಪ್ಪ, ಅಮ್ಮ, ತಮ್ಮ, ನಾನು. ಒಂದಿನ ನಾನು ಮತ್ತು ಮನೆಯವರು ಎಲ್ಲರು ಹೋಗುವಾಗ ನಮ್ಮ ಪಕ್ಕದ ಮನೆಗೆ ಬಾಡಿಗೆಗೆ ಅಂಥ ಮೂರು ಜನ ಬಂದಿದ್ರು. ಒಬ್ಬಳು ಅಂಟಿ ಅವರ ಮಗು ಮತ್ತು ಅವರ ಗಂಡ. ಒಂದಿನ ಅವರ ಮನೇಲಿ ದೊಡ್ಡ ಗಲಾಟೆ ಜಗಳ. ಅವರ ಗಂಡ ಕುಡಿದು ಬಂದು ಅವರ ಸಣ್ಣ ಮಗು ಮತ್ತು ಆಂಟಿನ ಹೊಡೆದು ಬಡಿದು ಮಾಡ್ತಿದ್ರು. ದಿನಾಲೂ ಹೀಗೆ ಆಗುತ್ತಿತ್ತು. ಒಂದಿನ ನಾನು ಅಮ್ಮನ ಹತ್ತಿರ ಕೇಳಿದೆ..... "ಅಮ್ಮ ಅಂಕಲ್ ಹೀಗೆ ಮಾಡೋದನ್ನ ನಿಲ್ಲಿಸೋಕೆ ಆಗಲ್ವಾ...?" ಅದಕ್ಕೆ ಅಮ್ಮ.... "ನಿನಗೆ ಯಾಕೆ....? ಅದೆಲ್ಲಾ.... ನೀನು ಇನ್ನೂ ಚಿಕ್ಕವಳು" ಅಂಥ ಸುಮ್ಮನಿರಿಸಿದ್ರು. ಆದ್ರೆ ಅವರ ಆ ದಿನ ಮಾಡ್ತಿದ್ದ ಗಲಾಟೆ ನೋಡಿ ಮರುದಿನ ಆಂಟಿ ಹತ್ರ ನಾನು ಕೇಳಿದೆ.... "ನೀವು ಯಾಕೆ ಅವರ ಕುಡಿತ ಬಿಡಿಸಬಾರದು." ಅದಕ್ಕೆ ಅವರು ಹೇಳಿದ್ರು, "ಈ ಹಿಂದೆ ತುಂಬಾ ಪ್ರಯತ್ನ ಮಾಡಿದೆ ಆದ್ರೂ ಆಗಲಿಲ್ಲ. ಯಾರ ಮಾತು ಕೇಳಲ್ಲಾ. ಕುಡಿತದ ಅಮಲು ಚಟವಾಗಿ ಬಿಡುತ್ತೆ" ಅಂದ್ರು. ಅದನ್ನ ಬಿಡಿಸೋದು ತುಂಬಾನೆ ಕಷ್ಟ ಅಂದ್ರು. ಮನೆಗೆ ಬಂದು ಕೂತು ತುಂಬಾ ಹೊತ್ತು ಯೋಚನೆ ಮಾಡಿದೆ. ನಾನೇನಾದ್ರು ಕುಡಿತಾನ ಬಿಡಿಸೋಕೆ ಸಾಧ್ಯನಾ ಅಂತ....? ಆದ್ರೆ ನಾ ಹೇಗೆ ಸಾಧ್ಯ....? ಈ ಚಿಕ್ಕ ಹುಡುಗಿ ಕೈಯಲ್ಲಿ ಏನು ಸಾಧ್ಯ ಅಂಥ ನನ್ನ ಮಾತನ್ನು ಯಾರು ಕಿವಿಗೆ ಹಾಕೋತಾರೆ...? ಆದ್ರೆ ಯಾರಿಂದನೂ ಬಿಡಿಸಲಾಗದ ಚಟವನ್ನು ನನ್ನ ಈ ಪುಟ್ಟ ಪ್ರಯತ್ನದಿಂದ ಬಿಡಿಸೋಕೆ ಅಗುತ್ತೆ ಅಂದ್ರೆ ಯಾಕೆ ಒಂದು ಪ್ರಯತ್ನ ಮಾಡಬಾರದು ಅಂದುಕೊಂಡೆ. ನನ್ನಿಂದ ಈ ಕುಟುಂಬದ ಜೀವನ ಸರಿ ಹೋಗುತ್ತೆ ಅಂದ ಮೇಲೆ ಒಂದು ಪ್ರಯತ್ನ ಮಾಡಿ ನೋಡೋಣ ಅನಿಸಿತ್ತು. ಅಂಟಿಗೆ ಕೇಳಿದೆ.... "ಅಂಕಲ್ ಗೆ ಕನ್ನಡ ಓದೋಕೆ ಬರುತ್ತಾ" ಅವರು ಬರುತ್ತೆ ಅಂದ್ರು. ಇವಳು ಯಾಕೆ ಹೀಗೆಲ್ಲ ಕೇಳ್ತಾ ಇದ್ದಾಳೆ ಅಂದು ಕೊಂಡರು. ನಾನು ವಿಷಯ ವನ್ನು ಹೇಳಿದೆ. ಅದಕ್ಕೆ ಅವರು..... "ನಿನ್ನ ಪ್ರಯತ್ನ ಮಾಡು ಅದು ಫಲ ಕೊಟ್ಟರೆ ನಿನಗೆ ಋಣಿ ನಾನು" ಅಂದ್ರು. ಹೌದು ನಾನು ಏನು ಯೋಚನೆ ಮಾಡಿದೆ ಅಂದ್ರೆ.... ನಾನು ಯಾಕೆ ಅವರಿಗೆ ಒಂದು ಕಥೆ ಬರೆದು ಕೊಡಬಾರದು ಅಂದುಕೊಂಡೆ. ಅದು ನಾನೆ ಬರೆದಿದ್ದು ಅದು ಸ್ಫೂರ್ತಿದಾಯಕವಾದ ಅಜ್ಜಿ ಮೊಮ್ಮಗನ ಕಥೆ. ಅಂದು ಎಂದಿನ ಹಾಗೇ ಅಂಕಲ್ ಮನೆಗೆ ಬಂದ್ರು. ಧೈರ್ಯ ಮಾಡಿ ಅವರ ಬಳಿ ಹೋಗಿ ಕಥೆಕೊಟ್ಟು ಓದಿ ಅಂದೆ.
ಅವರು ಅದನ್ನ ನೋಡಲು, ಇಲ್ಲ ನಾನೇ ಅದನ್ನ ಓದಿ ಅವರ ಮುಂದೆ ಹೇಳಲು ಶುರು ಮಾಡಿದೆ. ಕಥೆ ಪ್ರಾರಂಭಿಸಿದೆ. ಅವರ ಕಣ್ಣಲ್ಲಿ ನೀರು ತುಂಬಿತ್ತು. ಅವರೇ ಮತ್ತೆ ಆ ಕಥೆನಾ ಪೂರ್ತಿ ಓದಿದ್ರು. ನಂಬೋಕಾಗಲ್ಲ, ಅನ್ನೋ ರೀತಿಯಲ್ಲಿ ಅವರು ಆ ಕ್ಷಣದಿಂದ ಬದಲಾದರು. ಕುಡಿತಾನ ಕಡಿಮೆ ಮಾಡಿ ನಿಯತ್ತಿನಿಂದ ದುಡಿದರು. ಕೆಲಸ ಮಾಡಿ ಎಲ್ಲರನ್ನು ಚೆನ್ನಾಗಿ ನೋಡಿಕೊಂಡರು. ಆ ವರ್ಷದಲ್ಲಿ ಒಂದು ಮನೆ ಕಟ್ಟಿ ಗೃಹ ಪ್ರವೇಶಕ್ಕೆ ನಮ್ಮನ್ನು ಕರೆದ್ರು. ಬಂದಾಗ ಅವರು ಹೇಳಿದ್ರು.... "ಕೈಗೆ ಗನ್ ಕೊಟ್ರೆ ಟೆರರಿಸ್ಟ್ ಆಗಬಹುದು. ಅದೇ ಪೆನ್ ಕೊಟ್ರೆ ಇತಿಹಾಸ ಬರಿಬಹುದು. ಒಂದು ಬರಹ ಒಬ್ಬ ಮನುಷ್ಯನ ವ್ಯಕ್ತಿತ್ವ, ಗುಣ, ಸ್ವಭಾವ, ಭಾವನೆ ಗಳನ್ನು ಬದಲಾಯಿಸುತ್ತದೆ ಮತ್ತು ಬೆಳೆಸುತ್ತದೆ. ಅಕ್ಷರದಿಂದ ಏನು ಸಾಧ್ಯ... ಅನ್ನೋರಿಗೆ ಇದೆಲ್ಲಾ ಒಂದು ಮಾದರಿ. ಅಕ್ಷರದಿಂದ ನಮ್ಮ ಕನ್ನಡ ಭಾಷೆಯಲ್ಲಿ ಸುಂದವಾದ ಪದ ಬಳಸಿ ಕಥೆಗಳನ್ನು ಬರಿ ಬಹುದು. ಅವು ಖಾಲಿ ಹಾಳೆ ತುಂಬಿಸೋಕೆ ಅಲ್ಲ, ಮನುಷ್ಯನ ಬದುಕನ್ನ ರೂಪಿಸೋದಿಕ್ಕೆ" ಅಂಥ ಹೇಳಿದಾಗ.... "ನಾವು ಎಷ್ಟೋ ದೇವಸ್ಥಾನ ಅಸ್ಪತ್ರೆಗೆ ಹೋಗಿದ್ವಿ. ಅಲ್ಲಿ ಸರಿ ಮಾಡೋಕಾಗದ ಕಾಯಿಲೆಯನ್ನು ನಿನ್ನ ಆ ಒಂದು ಲೇಖನಿಯಲ್ಲಿ ಹೊರ ಬಂದ ಬರಹ ಮುದ್ದಾಗಿ ಅದರ ಫಲ ಕೊಟ್ಟಿತು. ಎಷ್ಟು ಚೆನ್ನಾಗಿದೆ" ಎಂದು ಆಂಟಿ ಹೇಳಿದ್ರು.
ಕೆಲವೊಮ್ಮೆಎಲ್ಲಾ ರೋಗಗಳಿಗೆ ಔಷಧಿನೇ ಮದ್ದಾಗಿರಲ್ಲ. ನಮ್ಮೊಳಗೆ ತಯಾರಾಗೋ ಔಷಧಿ ಕೂಡ ಪರಿಹಾರವಾಗಿರುತ್ತದೆ. ಆದ್ರೆ ಔಷಧಿ ಸರಿಯಾದ ರೀತಿಯಲ್ಲಿ ತೊಗೊ ಬೇಕು ಅಷ್ಟೆ. ಬರಹಗಳಿಗೆ ಅಕ್ಷರಕ್ಕೆ ಶಕ್ತಿ ನಾವು ತುಂಬಿಸಿದಾಗ ಅವುಗಳು ನಮ್ಮನ್ನು ಕೆಟ್ಟ ಕಾಯಿಲೆಗಳಿಂದ, ಕಾರ್ಯಗಳಿಂದ ಬಿಡಿಸುತ್ತದೆ. ಇದಕ್ಕೆ ಹೇಳೋದು ಯಾರಲ್ಲಿ ಎಂಥ ಪ್ರತಿಭೆ ಅಡಗಿರುತ್ತದೊ ಅದನ್ನು ಸರಿಯಾಗಿ ಗುರುತಿಸಬೇಕು ಅಷ್ಟೆ. ಅದಕ್ಕೆ ಉದಾಹರಣೆ ಈ ಗೀತಾ ಅನ್ನೋ ಹುಡುಗಿ.
ಧನ್ಯವಾದಗಳು ನಿಮ್ಮ ಅಮೂಲ್ಯವಾದ ಸಮಯವನ್ನು ನನ್ನ ಕಥೆ ಓದಲು ನೀಡಿದಕ್ಕೆ. ಹೀಗೆ ಪ್ರೊತ್ಸಾಹಿಸುತ್ತಿರಿ. ಅವಕಾಶಗಳನ್ನು ನೀಡಿ ಎಂದು ವಿನಂತಿಸಿಕೊಳ್ಳುತ್ತೇನೆ..... ಪ್ರೀತಿಯಿರಲಿ.....
ಪ್ರಥಮ ಪಿಯುಸಿ
ಎಸ್ ವಿ ಟಿ ವನಿತಾ ಪದವಿ ಪೂರ್ವ
ಕಾಲೇಜು ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ