ಪ್ರೀತಿಯ ಪುಸ್ತಕ : ಸಂಚಿಕೆ - 64
Friday, June 23, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 64
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಕೆನಡಾದಲ್ಲಿ ಶಾಲೆಗೆ ಹೋಗುವ ರಮ್ಯಾಳಿಗೆ ಅದೇ ಊರು ಚಂದ. ಅಲ್ಲಿ ಹಿಮ ಬೀಳುವ ಚಂದವನ್ನು ಅವಳು ವಿವರಿಸುವಾಗ ಅವಳ ಅಮ್ಮ ತಾನು ಹುಟ್ಟಿ ಬೆಳೆದ ಊರನ್ನು ನೆನಪಿಸಿಕೊಳ್ಳುತ್ತಾಳೆ. ಮಗಳಿಗೆ ತನ್ನ ಬಾಲ್ಯದ ಕತೆ ಹೇಳುತ್ತಾಳೆ. ಅದೇ ಅಮ್ಮನ ಊರಿನ ಕಥೆ. ಲವಲವಿಕೆಯ ಚಿತ್ರಗಳು ಅಮ್ಮನ ಊರಿನ ಚಿತ್ರಣವನ್ನು ಚೆನ್ನಾಗಿ ನೀಡುತ್ತವೆ. ಶೃಂಗೇರಿಯ ಹುಲ್ಸೆ ಅಮ್ಮನ ಊರು. ಅಮ್ಮ ಶಾಲೆಗೆ ಹೋಗಲು ಬೇಸರ ಪಡುತ್ತಿದ್ದುದು, ಆಡುತ್ತಿದ್ದ ಆಟಗಳು ಎಲ್ಲವನ್ನೂ ಅಮ್ಮ ರಸವತ್ತಾಗಿ ವಿವರಿಸುತ್ತಾರೆ. ಎಲ್ಲರಿಗೂ ಅವರವರ ಊರಿನ ಅನುಭವಗಳು, ಆಟಗಳು, ಊಟಗಳು ಎಲ್ಲವೂ ನೆನಪುಗಳು. ಈ ಪುಸ್ತಕ ಓದಿದ ಮೇಲೆ ನೀವೂ ನಿಮ್ಮ ಅಮ್ಮನ ಹತ್ತಿರ ಅಪ್ಪನ ಹತ್ತಿರ ಅಜ್ಜಿ, ಅಜ್ಜನ ಹತ್ತಿರ ಅವರ ಊರಿನ ಕಥೆ ಕೇಳಿಸಿಕೊಳ್ಳಿ. ಅದುವೇ ಒಂದು ಪುಸ್ತಕ ಆಗಬಹುದು.
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಲೇಖಕರು: ಶರಧಿ ಹುಲ್ಸೆ
ಚಿತ್ರಗಳು: ಹರಿಶ್ಚಂದ್ರ ಶೆಟ್ಟಿ (ಹರಿಣಿ)
ಬೆಲೆ: ರೂ.60/-
ನಾಲ್ಕನೇ ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************