-->
ಮುರಿದ ಕನ್ನಡಿಯೇ ನಿಜವಾದ ಮನಸ್ಸುಗಳು....!!

ಮುರಿದ ಕನ್ನಡಿಯೇ ನಿಜವಾದ ಮನಸ್ಸುಗಳು....!!

ಲೇಖನ : ಪವಿತ್ರಾ ಶಿವಾನಂದ್
10ನೇ ತರಗತಿ
ನಂದೊಳ್ಳಿ, ಯಲ್ಲಾಪುರ
ಉತ್ತರ ಕನ್ನಡ - 581 359
                                    
                 
     ಆಶಯ: ಕನ್ನಡಿ ಅಪಾರದರ್ಶಕ ವಸ್ತು ಆದರೆ ಅದು ಪಾರದರ್ಶಕವಾಗಿದೆ. ನಮ್ಮ ಹಾಗೆ ಹೋಲುತ್ತದೆ. ಜಗತ್ತಿನಲ್ಲಿ ಏಳು ಮನುಷ್ಯರು ಒಬ್ಬರ ಹಾಗೆ ಇರುತ್ತಾರೆ ಎಂಬುದು ನನ್ನ ಪ್ರಕಾರ ಸುಳ್ಳು. ಇನ್ನೂ ಅದರ ಬಗ್ಗೆ ವಿಜ್ಞಾನ ಸಂಶೋಧಿಸಿ ಪರಿಕ್ಷಿಸಿಲ್ಲ. ಇನ್ನೊಂದು ಕಡೆ ಒಬ್ಬ ಮನುಷ್ಯನಿಗೆ ಒಂದು ವಸ್ತು ಬಹಳ ಪ್ರಿಯವಾಗಬಹುದು ಅಥವಾ ವ್ಯಕ್ತಿಗಳಾಗಿರಬಹುದು. ಮನುಷ್ಯನ ಹಲವಾರು ಮುಖಗಳು ಕಂಡುಬರುವುದು ಆತನ ನಡತೆಯಲ್ಲಿ. ಅಂತಹ ಮುಖ ಕಾಣುವುದು ಮನಸಿನ ಕನ್ನಡಿಗಳಲ್ಲಿ ಇಲ್ಲಿ ಕನ್ನಡಿಯು ಮನಸ್ಸಿಗೆ ಹೋಲಿಸಲ್ಪಟ್ಟಿದೆ.
              "ಕನ್ನಡಿ" ಎಂದರೆ ನೆನಪಾಗುವುದೇ ಪ್ರತಿಬಿಂಬದ ಸೂಚಕ. ಶುಭಕಾರ್ಯಗಳಲ್ಲಿ ಇದನ್ನು ಬಳಸುವರು. ಆದರೆ ಇದು ಒಡೆದರೆ ಅಪಶಕುನ ಎಂದು ಬಿಂಬಿಸುವರು. ಕನ್ನಡಿಯು ಗಾಜಿನಿಂದ ತಯಾರಿಸಲ್ಪಟ್ಟ ವಸ್ತುವಾಗಿದೆ. ಇದರಿಂದ ನಾವೇನೇ ನೋಡಿದರೂ ಕೂಡ ಅದರ ಪ್ರತಿಬಿಂಬ ಚಿತ್ರ ನೋಡಬಹುದು.
           ಕನ್ನಡಿಯಲ್ಲಿ ಮುಖ ದರ್ಶನವಾಗುತ್ತದೆ ಎಂದರೆ ನಮ್ಮ ಪ್ರತಿಬಿಂಬವನ್ನು ನೋಡಬಹುದು. ಅದೇ ಕನ್ನಡಿ ಒಡೆದರೆ ಅಪಶಕುನ. ಎಂತಹಾ.....!! ದುರ್ವಿಧಿ...!! ಒಂದು ಪೂರ್ಣ ಕನ್ನಡಿ ಮುಖದ ಮನಸ್ಸಾಗಿರುತ್ತದೆ. ಇದು ಸ್ವಚ್ಚ ಪ್ರತಿಬಿಂಬ ಗೋಚರಿಸುತ್ತದೆ. ಅದೇ ಒಡೆದ ಕನ್ನಡಿಗಳನ್ನೆಲ್ಲಾ ಒಂದೆಡೆ ಸೇರಿಸಿ ಮುಖ ನೋಡಿದರೆ ಒಂದೊಂದರಲ್ಲಿ ಒಂದೊಂದು ಮುಖ. ಅದೆಷ್ಟು ಚೂರಾಗಿರುತ್ತದೆಯೋ ಅಷ್ಟು ನಮ್ಮ ಮುಖಗಳು. ಅಂದರೆ... ನಮ್ಮಿಡೀ ಜೀವನದಲ್ಲಿ ಒಬ್ಬರಿಗೆ ಒಂದು ಮುಖ ಹಾಕಿದರೆ; ಇನ್ನೊಬ್ಬರಿಗೆ ಇನ್ನೊಂದು ಮುಖ; ಮತ್ತೊಬ್ಬರಿಗೆ ಮತ್ತೊಂದು ಮುಖ... ಅಲ್ಲವೇ...??!! ಎಲ್ಲರಿಗೂ ಒಂದೇ ರೀತಿಯ ಮುಖ ತೋರಿಸಬೇಕಾದರೆ ಅದು ಕಷ್ಟಕರ....!!
             ಕನ್ನಡಿ ಎಂದರೆ ಹೆಂಗಳೆಯರಿಗೆ ಬಲು ಮೆಚ್ಚಿನ ವಸ್ತು.... ಹಾಗೆಯೇ.. ಗಂಡು ಮಕ್ಕಳೇನು ಕಡಿಮೆ ಇಲ್ಲ...! ಕನ್ನಡಿ ಮುಂದೆ ನಿಂತರೆ ಸಾಕು ನನ್ನಂತ ಸುಂದರ ಅಥವಾ ಸುಂದರಿ ಜಗದಲಿಲ್ಲವೆಂದುಕೊಳ್ಳುತ್ತಾರೆ. ನನಗೆ ಕನ್ನಡಿ ಎಂದರೆ ಬಹಳ ಪ್ರಿಯವಾದುದು.. ಕಾರಣ ಇಷ್ಟೇ ನನ್ನ ಹಾಗೆ ಹೋಲುತ್ತದೆ. ನಾನು ಅತ್ತಾಗ ಅಳುತ್ತದೆ. ನಕ್ಕಾಗ ನಗುತ್ತದೆ. ನಾನು ಅಳಲನ್ನು ಅದರ ಮುಂದೆ ತೋಡಿಕೊಂಡಾಗ ಮನಸ್ಸಿಗೇನೋ ಸಮಾಧಾನ. ಕನ್ನಡಿಯು ಜೀವವಿಲ್ಲದ ಆತ್ಮಸ್ನೇಹಿತೆ ಎಂದರೆ ತಪ್ಪೇನಿಲ್ಲ. ನನ್ನ ಕಣ್ಣೀರಿಗೆ ಕಣ್ಣೀರಾಗಿ ಅತ್ತಿದೆ. ನನ್ನ ನಗುವಿಗೆ ನಗುವಾಗಿ ನಕ್ಕಿದೆ. ಅದು ನನ್ನ ಜೊತೆ ಇದೆ..
            ಕನ್ನಡಿ ಮನಸ್ಸಿನ ಮುಖವಾಗಿದೆ. ನಮಗೆ ನಮ್ಮ ಮನಸ್ಸು ಕಾಣುದಿಲ್ಲ. ಆದರೆ ನಮ್ಮ ಹತ್ತಿರ ನಮ್ಮ ಮನಸ್ಸು ಇದೆ. ಅದೇ ಕನ್ನಡಿ... ಕನ್ನಡಿ ನಮ್ಮ ಜೀವನದ ಮನಸ್ಸಾಗಿದೆ. ಅದಕ್ಕಾಗಿ ಮುರಿದ ಕನ್ನಡಿಯೇ ನಿಜವಾದ ಮನಸ್ಸುಗಳು........!!!!!!                                              ..................................... ಪವಿತ್ರಾ ಶಿವಾನಂದ್
10ನೇ ತರಗತಿ
ನಂದೊಳ್ಳಿ, ಯಲ್ಲಾಪುರ
ಉತ್ತರ ಕನ್ನಡ - 581 359
******************************************

Ads on article

Advertise in articles 1

advertising articles 2

Advertise under the article