ಪ್ರೀತಿಯ ಪುಸ್ತಕಸ : ಸಂಚಿಕೆ - 27
Friday, October 7, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 27
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಬೆಲೂನ್ ಅಂದರೆ ನಿಮಗೆ ಇಷ್ಟ ತಾನೇ? ಬೆಲೂನ್ ಊದಿ ಅದರ ಜೊತೆ ಆಟ ಆಡೋದು ಬಹಳ ಖುಷಿ ಕೊಡುತ್ತದೆ. ಆಮೇಲೆ ಅದು ಟಪ್ಪಂತ ಒಡೆದು ಹೋದಾಗ, ಹೋ ಅಂತ ಅಳುವ ಹಾಗೆ ಆಗುತ್ತದೆ. ಸಮಾಧಾನ ಆದ ಮೇಲೆ ಆ ತುಂಡಾದ ಬೆಲೂನ್ ಗಳ ಜೊತೆಗೂ ಆಟ ಮುಂದುವರಿಯುತ್ತದೆ. ಅಂತಹುದೇ ಒಂದು ಕಥೆ ಇಲ್ಲಿ ಇದೆ. ಒಂದು ಪುಟದಲ್ಲಿ ಒಂದೆರಡು ವಾಕ್ಯ ಕಥೆ ಇದೆ. ಪುಟ ತುಂಬಾ ಚಂದ ಚಂದದ ಚಿತ್ರಗಳು ಇವೆ. ಚಿತ್ರಗಳೇ ಕಥೆ ಹೇಳುವ ಹಾಗೆ ಇದೆ. ಪುಟ್ಟ ಹುಡುಗನೊಬ್ಬ ಬೆಲೂನ್ ಜೊತೆಗೆ ಬೇರೆ ಬೇರೆ ರೀತಿಯಲ್ಲಿ ಆಟ ಆಡುತ್ತಾನೆ. ಬೆಲೂನನ್ನು ಹೇಗೆ ಹೇಗೆ ಉಪಯೋಗಿಸುತ್ತಾನೆ? ಆಗ ಏನಾಗುತ್ತದೆ? ತಿಳಿದುಕೊಳ್ಳುವ ಆಸಕ್ತಿ ಇದೆಯಲ್ಲಾ? ಹಾಗಾದರೆ ಪುಸ್ತಕ ನೋಡಿ ತಿಳಿದುಕೊಳ್ಳಿ. ಎಷ್ಟೊಂದು ಮಂದಿ ಪುಟ್ಟ ಮಕ್ಕಳು ಈ ಪುಸ್ತಕವನ್ನು ಇಷ್ಟ ಪಟ್ಡಿದ್ದಾರೆ ಗೊತ್ತಾ? ನನಗೂ ಮಕ್ಕಳಿಗೆ ಈ ಪುಸ್ತಕ ಓದಿಸುವುದೆಂದರೆ ಬಹಳ ಇಷ್ಟ. ಲೇಖಕರು: ನವೀನ್ ಮೆನನ್
ಅನುವಾದ: ಎಸ್. ಸೇತೂರಾವ್
ಚಿತ್ರಗಳು: ವಿಕೀ ಆರ್ಯ
ಪ್ರಕಾಶಕರು: ಚಿಲ್ಡ್ರನ್ಸ್ ಬುಕ್ ಟ್ರಸ್ಟ್
ಬೆಲೆ: ರೂ 20/
ಮೂರು, ನಾಲ್ಕನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************