-->
ಅಕ್ಕನ ಪತ್ರ - 28 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 28 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 28 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


     ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ  ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ  ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ  ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ  ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ  ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........  




             ನಮಸ್ತೆ ಅಕ್ಕಾ... ನಾನು ಧೀರಜ್. ಕೆ ಆರ್ . ಪತ್ರ ಓದಿ ಸಂತೋಷವು ಆಯಿತು, ಜೊತೆಗೆ ಕಣ್ಣೀರು ಬಂತು. ಒಂದೊಳ್ಳೆ ಕಥೆಯನ್ನು ನಮಗೆ ಓದುವಂತೆ ಮಾಡಿದ್ದೀರಿ. ಹೌದು ಅಪ್ಪ ಅಮ್ಮನ ಮಾತನ್ನು  ತಾಳ್ಮೆಯಿಂದ ಕೇಳುವ ಪ್ರವೃತ್ತಿ ಯನ್ನು ಬೆಳೆಸಿಕೊಳ್ಳಬೇಕು. ಯಾವತ್ತೋ ಒಂದು ದಿನ  ಅರಿವಿಗೆ ಬರುತ್ತದೆ. ಆಗ ಅನಿಸುತ್ತದೆ ನಾವು ತಪ್ಪು ಮಾಡಿಬಿಟ್ಟೆವೆಂದು. ಈಗಿನ ಕಾಲದ ನಮ್ಮಂತಹ ಮಕ್ಕಳಿಗೆ ಈ ಕಥೆಯು ಸ್ಫೂರ್ತಿಯಾಗುತ್ತದೆ. ನಮಗೋಸ್ಕರ ಈ ಸ್ಫೂರ್ತಿದಾಯಕ ಕಥೆಯನ್ನು ಹೇಳಿದ್ದಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕಾ...
.......................................... ಧೀರಜ್. ಕೆ ಆರ್ 
10ನೇ ತರಗತಿ  
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ. 
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



        ಮಕ್ಕಳ ಜಗಲಿಯ ಎಲ್ಲಾ ಪ್ರೀತಿ - ಪಾತ್ರರಿಗೂ ಆತ್ಮೀಯ ಶುಭ ನಮನಗಳು.......ನಾನು ಪ್ರಿಯ...
ನಾವು ಚೆನ್ನಾಗಿದ್ದೇವೆ... ನೀವು ಹೇಗಿದ್ದೀರಿ ಅಕ್ಕ...?
ಎಂದಿನಂತೆ ಪ್ರೀತಿ, ಕಾಳಜಿ, ಮೌಲ್ಯ ತುಂಬಿದ ನಿಮ್ಮ ಪತ್ರಗಳಲ್ಲಿ , ಇಂದಿನ ಪತ್ರ ಓದುವಾಗ... ಇದೇನಿದು...!! ಬೈಗುಳಗಳ ಪಟ್ಟಿ..!! ಎಂದು ಯೋಚಿಸಿದೆ... ಆದರೆ ಪತ್ರವನ್ನು ಪೂರ್ತಿ ಓದಿ ಅರಿತಾಗ ತಿಳಿಯಿತು... ಇವು ಬೈಗುಳಗಳಲ್ಲ... ಅಪ್ಪ - ಅಮ್ಮನವರ ಪ್ರೀತಿ, ಕಾಳಜಿ ತುಂಬಿದ ಸವಿನುಡಿಗಳೆಂದು.... ಹೌದು ಅಕ್ಕ ನಿಮ್ಮ ಮಾತು ನಿಜ ನಾವು ಅಪ್ಪ - ಅಮ್ಮ ಏನೇ ಹೇಳಿದರೂ ನಾವು ಕೆಲವೊಮ್ಮೆ ಸಿಟ್ಟು, ಹಾಗೂ ಗದ್ಗದಿತ ಧ್ವನಿಯಲ್ಲಿ  ಅವರ ಮೇಲೆ  ಸಿಡುಕಿ ಬಿಡುತ್ತೇವೆ... ಆಗ ಪಾಪ... ಅವರ ಮನಸ್ಸಿಗೆ ಎಷ್ಟು ನೋವಾಗಿರಬಹುದು....? ಅವರು ನಮ್ಮ ಮೇಲೆ ತೋರಿರುವ ಪ್ರೀತಿಯ ಮುಂದೆ  ನಮ್ಮ ಇಂತಹ ಕೆಲವು ಕೆಟ್ಟ ನಡವಳಿಕೆಗಳು  ನಾಚಿಕೆ ಉಂಟು  ಮಾಡುತ್ತದೆ.... ನಾನೇನಾದರೂ ಅಮ್ಮನಿಗೆ ಬೇಸರ ಮಾಡಿದ್ದರೆ ಈ ಸಂಧರ್ಭದಲ್ಲಿ "ಕ್ಷಮೆ" ಬೇಡುತ್ತಿದ್ದೇನೆ... ಸ್ವಾರಿ ಮಾ... ನಿಮ್ಮ ಇಂದಿನ ಪತ್ರ ನನಗೆ ಕೆಲವು ತಪ್ಪುಗಳ  ಅರಿವು ಮೂಡಿಸಿತು... ಇಂತಹ ಒಳ್ಳೆಯ ಸಂದೇಶವನ್ನು ಒಳಗೊಂಡ ಪತ್ರವನ್ನು ನಮ್ಮ ಜೊತೆ ಹಂಚಿಕೊಂಡ ನಿಮಗೆ... ವಂದನೆಗಳು ...................................................... ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



          ನಮಸ್ತೆ ಅಕ್ಕ.... ನಾನು ಶ್ರಾವ್ಯ.  ನಾವು ಚೆನ್ನಾಗಿದ್ದೇವೆ. ಮಳೆಯ ಕಾರಣದಿಂದ ರಜೆ ಸಿಕ್ಕಿದ್ದು 2 - 3 ದಿನಕ್ಕೆ ಖುಷಿ ಆಗಿತ್ತು. ಆದರೂ ಆ ಮಳೆಯಲ್ಲಿ ಒದ್ದೆಯಾಗುತ್ತಾ ಮಳೆಗೆ ಬಯ್ಯುತ್ತ ಶಾಲೆಗೆ ಹೋಗೋದರ ಖುಷಿ ಮಿಸ್ ಆಯ್ತು. ನೀವು ಈ ಬಾರಿ ಪತ್ರದಲ್ಲಿ ತಂದೆಯ ಪ್ರೀತಿಯ ಬಗ್ಗೆ ವಿಚಾರ ಮಾಡಿರುವಿರಿ. ತಂದೆಯ ಪ್ರೀತಿ ಅದು ನಿಶ್ಕಲ್ಮಶ. ಸದಾ ದುಡಿಯುತ್ತಿರುವ ಶ್ರಮಜೀವಿ ಅವರು. ಸದಾ ನಮ್ಮ ಖುಷಿ, ನಮ್ಮ ಬೇಡಿಕೆ ಈಡೇರಿಸುವ ಬಗ್ಗೆಯೇ ಯೋಚಿಸುತ್ತಾರೆ. ತನಗಾಗಿ ಏನನ್ನೂ ಬಯಸುವುದಿಲ್ಲ. ತಂದೆ-ತಾಯಿ ಇವರಿಬ್ಬರ ಪ್ರೀತಿಯನ್ನು ಪಡೆಯುತ್ತಿರುವ ನಾವು ಪುಣ್ಯವಂತರು. ಅವರು ನಮಗೆ ತೋರುವ ಕಾಳಜಿ-ಪ್ರೀತಿಗೆ ಬದಲಾಗಿ ನಮ್ಮಿಂದ ಪ್ರೀತಿಯನ್ನೇ ಬಯಸುತ್ತಾರೆ ಹೊರತು ಬೇರೇನಲ್ಲ. ಅವರ ಪ್ರೀತಿಗೆ ನಾವು ಗೌರವ ಸೂಚಿಸುವುದು ನಮ್ಮ ಕರ್ತವ್ಯ. ನಮಗಾಗಿ ಮಿಡಿಯುವ ಆ ಹೃದಯಕ್ಕೆ ನಾವು ಪ್ರೀತಿ ನೀಡುವ. ಧನ್ಯವಾದ
....................................................... ಶ್ರಾವ್ಯ 
ದ್ವಿತೀಯ ಪಿಯುಸಿ 
ಶ್ರೀರಾಮ ವಿದ್ಯಾಕೇಂದ್ರ  ಕಲ್ಲಡ್ಕ 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
********************************************


    ಪ್ರೀತಿಯ ಅಕ್ಕನಿಗೆ ಸಾನ್ವಿ ಮಾಡುವ ವಂದನೆಗಳು. ನಾನು ಚೆನ್ನಾಗಿದ್ದೇನೆ. ನನಗೆ ಈ ಪತ್ರ ತುಂಬಾ ಇಷ್ಟವಾಯಿತು. ಹಿರಿಯರು ಹೇಳುವಾಗ ನಮಗೆ ಕೋಪಬರುತ್ತದೆ. ಆದರೆ ಅವರು ನಮ್ಮ ಒಳಿತಿಗಾಗಿಯೇ ಹೇಳುತ್ತಾರೆ. ಈ ಕಥೆಯಿಂದ ನಮಗೆ ತಿಳಿಯುವುದೇನೆಂದರೆ ಹಿರಿಯರು ನಾವು ಕೇಳಿದ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸುತ್ತಾರೆ. ಆದರೆ ನಮಗೆ ಅವರು ಏನು ಕೇಳಿದರೂ ಕೋಪಬರುತ್ತದೆ. ಆದರೂ ಅವರು ನಾವು ತಪ್ಪು ಮಾಡಿದರೆ ಕ್ಷಮಿಸಿ ತಿದ್ದುತ್ತಾರೆ. ನಮಗೆ ಎಂದೆಂದಿಗೂ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ನಾವು ಹಿರಿಯರನ್ನು ಗೌರವಿಸೋಣ. ಈ ಪತ್ರದ ಮೂಲಕ ನನಗೆ ಈ ಎಲ್ಲಾ ವಿಷಯಗಳನ್ನೂ ತಿಳಿಸಿದ್ದಕ್ಕೆ ಧನ್ಯವಾದಗಳು.
.......................................... ಸಾನ್ವಿ ಸಿ ಎಸ್ 
5ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
********************************************



       ಹರಿ ಓಂ ಅಕ್ಕ......  ನಾನು ಸ್ರಾನ್ವಿ ಶೆಟ್ಟಿ. ನಾನು ಚೆನ್ನಾಗಿದ್ದೇನೆ. ನಿಮ್ಮ ಪತ್ರ ಓದಿದೆ ಅಕ್ಕ. ನಿಮ್ಮ ಪತ್ರದಲ್ಲಿ ಇರುವ ಹಾಗೆ ನಮ್ಮಮ್ಮ ಅದೇ ರೀತಿ ಹೇಳುತ್ತಿರುತ್ತಾರೆ, ಶಾಲೆಗೆ ರಜೆ ಇದ್ದಾಗ ದಿಟ್ಟೋ ಅದೇ ರೀತಿ ಇರುತ್ತೆ ಬ್ಯೆಗುಳ. ಅಪ್ಪ ಬ್ಷೆಯುವುದು ಕಡಿಮೆ, ನಾವು ಕೂಡ ಸಣ್ಣವರಿರುವಾಗ ಅಪ್ಪ ಅಮ್ಮನನ್ನು ಎಷ್ಟೊಂದು  ಗೋಳು ಹೊಯ್ಕೊಂಡಿರುತ್ತೇವೆ, ಈಗ  ಇದನ್ನು ಓದುವಾಗ ನಾವು ಕೂಡ ದೊಡ್ಡವಾರಾದ  ಮೇಲೆ ನಮ್ಮ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನಿಸುತ್ತಿದೆ, ಧನ್ಯವಾದ ಅಕ್ಕ
.................................................. ಸ್ರಾನ್ವಿ ಶೆಟ್ಟಿ 
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



      ನಮಸ್ತೇ..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. ನಿಮ್ಮ ಪತ್ರವನ್ನು ಓದಿದೆನು. ನಿಮ್ಮ ಪತ್ರದಿಂದ ನಮಗೆ ಒಳ್ಳೆಯ ವಿಷಯವು ತಿಳಿಯಲು ತುಂಬಾ ಸಹಾಯವಾಗುತ್ತದೆ. 
"ಪ್ರೀತಿ ಇದ್ದ ಕಡೆ ಕೋಪ" ಎನ್ನುವಂತೆ  "ಅಮ್ಮ ಅಪ್ಪ" ಯಾವಾಗಲೂ ನಮ್ಮನ್ನು ಪ್ರೀತಿಯಿಂದ ಜೋರು ಮಾಡುತ್ತಾರೆ ಹೊರತು ಕೋಪದಿಂದ ಅಲ್ಲ ಎಂದು ನಾವು ಅರ್ಥ ಮಾಡಿಕೊಂಡು ಅವರು ಹೇಳಿದಂತೆ ಕೇಳಿದರೆ ನಮಗೆ ಯಾವ ತೊಂದರೆಯೂ ಬರುವುದಿಲ್ಲ. ನಮ್ಮ ತಪ್ಪನ್ನು ತಿದ್ದಿ ನಮ್ಮನ್ನು ಒಳ್ಳೆಯದಾರಿಯಲ್ಲಿ ನಡೆಯುವಂತೆ ಮಾಡಲು ಅವರ ಮಾತು ನಮಗೆ ಸಹಾಯವಾಗುತ್ತದೆ. ನಾವು ಚಿಕ್ಕವರು ತಾನೇ, ನಾವು ಒಮ್ಮೆ ಮಳೆಗೆ ಹೋಗಲು ಬಿಟ್ಟರೆ ಮತ್ತೂ ಮತ್ತೂ ಅದನ್ನೇ ಮಾಡುತ್ತೇವೆ. ಅದಕ್ಕೆ ನಾವು ಮಳೆಗೆ ಹೋಗಲು ಹೊರಟಾಗಲೇ ನಮ್ಮನ್ನು ಜೋರು ಮಾಡಿ ಕೂರಿಸುತ್ತಾರೆ. ಜ್ವರ ,ಶೀತ ಆದರೆ ಎಂಬ ಭಯ ಅಮ್ಮಂದಿರಿಗೆ ಶುರುವಾಗುತ್ತದೆ. ಮಕ್ಕಳ ಮೇಲಿನ ಪ್ರೀತಿ ಮತ್ತು ಕಾಳಜಿಯು ಇದಕ್ಕೆ ಕಾರಣವಾಗಿದೆ. ಧನ್ಯವಾದಗಳು ಅಕ್ಕಾ......
......................................... ಸಾತ್ವಿಕ್ ಗಣೇಶ್ 
8ನೇ ತರಗತಿ
ಸರಕಾರಿ ಪ್ರೌಢ ಶಾಲೆ ವೇಣೂರು
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
         


       ಮಕ್ಕಳ ಜಗಲಿಯ ವೃಂದಕ್ಕೆ ಆತ್ಮೀಯ ಶುಭ ನಮನಗಳು.... ನಾನು ಪೂರ್ತಿ....
        ಪ್ರೀತಿಯ ಅಕ್ಕನಿಗೆ ನನ್ನ ನಮನಗಳು.... ನಿಮ್ಮ  ಪತ್ರವನ್ನು  ಮನೆಯಲ್ಲಿ ಎಲ್ಲಾರೂ ಒಟ್ಟಾಗಿ ಕುಳಿತು ಓದಿದೆವು... ನನಗೆ ನಿಮ್ಮ ಇಂದಿನ  ಪತ್ರ ತುಂಬಾ ಇಷ್ಟವಾಯ್ತು.... ನಾವು ಗೊತ್ತಿದ್ದೂ, ಗೊತ್ತಿಲ್ಲದೆಯೂ ಮಾಡುವ ತಪ್ಪುಗಳ ಬಗ್ಗೆ ನೀವು  ಈ ಪತ್ರದಲ್ಲಿ ತಿಳಿಸಿದ್ದೀರಿ......  ನಾವು , ಅಪ್ಪ ಅಮ್ಮ ನಮಗೆ ಸ್ವಲ್ಪ ಬೈದರೆ ಮುನಿಸಿಕೊಳ್ಳುತ್ತೇವೆ... ಆದರೆ ನಾವು ಅಪ್ಪ ಅಮ್ಮನ ಮಾತು ಕೇಳದಿದ್ದರೆ ಅವರಿಗೆ ಎಷ್ಟು ಬೇಸರವಾಗಬಹುದು.... ಎಂಬುವುದನ್ನು ಮರೆತು ಬಿಡುತ್ತೇವೆ. ಈ ಪತ್ರದ ಮೂಲಕ ಅದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು ಅಕ್ಕ..... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಧನ್ಯವಾದಗಳು..
......................................................... ಪೂರ್ತಿ 
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
 


     ಪ್ರೀತಿಯ ಅಕ್ಕನಿಗೆ ಹಿತಶ್ರೀ  ಮಾಡುವ ನಮನಗಳು. ಅಕ್ಕಾ ನೀವು ಬರೆದ ಪತ್ರವನ್ನು ಓದಿದೆ. ಈ ಪತ್ರದ ಮೂಲಕ , ನಾವು ಯಾವತ್ತು ತಂದೆ ತಾಯಿಯರನ್ನು  ನಿರ್ಲಕ್ಷ್ಯ  ಮಾಡಬಾರದು ಮತ್ತು ನಾವು ಈಗ ತಂದೆ ತಾಯಿಯರನ್ನು  ಬೈಯ್ಯಬಾರದು. ನಮಗೆ ಈಗ ತಿಳಿಯುವುದು ಇಲ್ಲ.   ದೊಡ್ಡವರಾದ ನಂತರ  ನಮಗೆ ನಮ್ಮ ತಪ್ಪು ತಿಳಿಯುತ್ತದೆ. ಆ  ಕಾರಣಕ್ಕಾಗಿ ಅಪ್ಪ ಅಮ್ಮನನ್ನು ನಾವು ಪ್ರೀತಿಸಬೇಕು. ಎಂದು ತಿಳಿದು ಕೊಂಡಿದ್ದೇನೆ.
............................................... ಹಿತಶ್ರೀ.ಪಿ.
7 ನೇ ತರಗತಿ
ಶ್ರೀ ವೇಣುಗೋಪಾಲ ಅ. ಹಿ. ಪ್ರಾ. ಶಾಲೆ 
ಪಕಳಕುಂಜ ಮಾಣಿಲ
ಬಂಟ್ಟಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
********************************************



         ನಮಸ್ಕಾರ ಅಕ್ಕ... ನಾನು ಶುಬಿಕ್ಷಾ. ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ...? ನನಗೆ ಕೂಡ ಮೊದಲು ಅಪ್ಪ ಬಯ್ಯುತ್ತಿದ್ದಾಗ ತುಂಬಾನೇ ಬೇಜಾರು ಆಗುತ್ತಿತ್ತು. ಆದರೆ ಈಗ ನನಗೆ ಅರ್ಥವಾಯ್ತು ಅವರು ಏಕೆ ಬಯ್ಯುತ್ತಿದ್ದರೆಂದು.. ತಾಯಿಯ ಪ್ರೀತಿ, ಆರೈಕೆ ನಮಗೆ ಬೇಗನೆ ಗೊತ್ತಾಗುತ್ತದೆ, ಆದರೆ ತಂದೆ ಹಾಗಲ್ಲ ಮಕ್ಕಳ ಮೇಲಿನ ತಮ್ಮ ಪ್ರೀತಿಯನ್ನು ಗೊತ್ತು ಮಾಡುವುದಿಲ್ಲ. ಅವರ ಒಂದೊಂದು ಬೈಗುಳ  ಅನುಭವದ ಮಾತು. ತನ್ನ ಮಗು ಉತ್ತಮ ಪ್ರಜೆ ಆಗಬೇಕು ಎಂಬುದಾಗಿರುತ್ತದೆ. ನೀವು  ಹೇಳಿದ ಈ ಕಥೆ ಎಲ್ಲರ ಮನಮುಟ್ಟುವಂತಿದೆ. ಪ್ರತಿ ಸಲವೂ ನೀವು ಉತ್ತಮ ಮಾಹಿತಿಗಳನ್ನು ನೀಡುತ್ತಾ ಬಂದಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದಗಳು... ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ..
...................................................... ಶುಬಿಕ್ಷಾ, 
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಡ್ಮಾಣ್ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



      ನಮಸ್ತೆ ಅಕ್ಕಾ..... ನಾನು ನಿಭಾ.....  ನಿಮ್ಮ ಪತ್ರಕ್ಕಾಗಿ ಕಾಯುತ್ತಿದ್ದೆ. ನೀವು ಹೇಳಿದ ಕಥೆ ಅದ್ಭುತವಾಗಿತ್ತು. ನೀವು ಹೇಳಿದ್ದು ನಿಜ. ಅಪ್ಪ- ಅಮ್ಮ ಎಷ್ಟೇ ಬೈದರೂ ನಮ್ಮ ಒಳ್ಳೆಯದಕ್ಕೆ ಆಗಿರುತ್ತದೆ. ನಮ್ಮ ಮನೆಯಲ್ಲಿಯೂ ಅಷ್ಟೇ ನೀವು ಹೇಳಿದ ಆ  ಬೈಗುಳಗಳನ್ನೇ ಬಯ್ಯುತ್ತಿರುತ್ತಾರೆ. ನಾನಂತೂ ಅಮ್ಮ ಅಪ್ಪನಿಗಿಂತ ಜಾಸ್ತಿ ಅಜ್ಜಿಯ ಜೊತೆ ಹೆಚ್ಚು ಒಲುಮೆಯಲ್ಲಿರುತ್ತೇನೆ. ಅಜ್ಜಿಯ ಬೈಗುಳಗಳು ಅಷ್ಟೇ ನಮ್ಮ ಒಳ್ಳೆಯದಕ್ಕೆ ಆಗಿರುತ್ತದೆ. ಹಾಗೇ ನೀವು ಹೇಳಿದ ಆ ಕಥೆಯನ್ನು ನಾನೂ  ಒಮ್ಮೆ ಓದಿದ್ದೆ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಧನ್ಯವಾದಗಳು.....
.................................................. ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು 
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು , ದ ಕ ಜಿಲ್ಲೆ
********************************************



ಮಕ್ಕಳ ಜಗಲಿ... ಅಕ್ಕನ ಪತ್ರ-28
    ಪ್ರೀತಿಯ ಅಕ್ಕ ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು. ಪತ್ರ ಬರೆಯುವಾಗ ಸ್ವಲ್ಪ ತಡೆವಾಯಿತು ಕ್ಷಮಿಸಿ ಅಕ್ಕ.... ಇವತ್ತಿನ ನಿಮ್ಮ ಪತ್ರ ಓದಿ ನಾನು ತುಂಬಾ ಭಾವುಕಳಾದೆ. ನಿಜ ಅಕ್ಕ... ನಮ್ಮ ಅಪ್ಪ ಮತ್ತು ಅಮ್ಮ ಎಲ್ಲಾ ಸಂದರ್ಭದಲ್ಲಿ ತಾಳ್ಮೆಯಿಂದ ನಮ್ಮ ಮಾತನ್ನು ಕೇಳುತ್ತಾರೆ ಮತ್ತು ಉತ್ತರಿಸುತ್ತಾರೆ... ಕೆಲವೊಂದು ಸಲ ನಾನು ಕೋಪಿಸಿಕೊಂಡು ಅವರಲ್ಲಿ ಜೋರಾಗಿ ಮಾತನಾಡಿದ್ದು ಇದೆ... ನಿಮ್ಮ ಪತ್ರದಲ್ಲಿ ಇದ್ದ ಕಥೆ ಕೇಳಿ ನಾನು ತಪ್ಪು ಮಾಡಿದ್ದೇನೆ ಎಂದು ನನಗೆ ಅನಿಸಿತು... ನನ್ನ ತಪ್ಪಿನ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು ಅಕ್ಕ.... ಸಾಧ್ಯವಾದರೆ" ಅಪ್ಪ ಅಂದರೆ ಆಕಾಶ "ಎನ್ನುವ ಪುಸ್ತಕವನ್ನು ಓದುತ್ತೇನೆ... ಇದೇ ರೀತಿ ಒಳ್ಳೊಳ್ಳೆ ಕಥೆಗಳೊಂದಿಗೆ ಬರುತ್ತಾ ಇರಿ ಅಕ್ಕ... ನಿಮ್ಮ ಮುಂದಿನ ಪತ್ರಕ್ಕೆ ನಾನು ಕಾಯುತ್ತಿರುತ್ತೇನೆ... ಇಂತಿ ನಿಮ್ಮ ಪ್ರೀತಿಯ
................................................ಲಹರಿಜಿ.ಕೆ.
7ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article