-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 34

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 34

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 34

ಜಗದೆತ್ತರದ ದೇಹದೊಳಗೆ ಹೋದಂತೆ ಏಳು ಅಂತಸ್ತಿನೊಳಗೆ ನೀವು ನಿಮ್ಮೊಳಗೆ ಅವನಿಲ್ಲವೇ...
-------------------------------------
      ಪ್ರಥಮ ಉಪ ಪ್ರಧಾನಿ
      ಪ್ರಥಮ ಗೃಹ ಸಚಿವ
      ಹಿರಿಯ ನೇತಾರ
ಭಾವೈಕ್ಯತೆಯ ಸರದಾರ
ಗುಜರಾತಿನ ಖೇಡಾದಲ್ಲಿ ಜನನ
ಯಶಸ್ವಿ ನ್ಯಾಯವಾದಿ
ರೈತ ಸಂಘಟಕ
ನಿರಾಶ್ರಿತ ಆಶ್ರಯದಾತ
ಶಾಂತಿ ಸ್ಥಾಪಕ
ರಾಷ್ಟ್ರ ನಿರ್ಮಾಣ ನಿಷ್ಠ
ಏಕತೆಯ ರಾಷ್ಟ್ರಕ್ಕಾಗಿ
ರಾಜಿ ಮಾಡದೆ
ರಾಜರುಗಳನ್ನು ಪ್ರಜಾತಂತ್ರದ
ಏಕ ಛತ್ರದಡಿ
ತಂದ ಉಕ್ಕಿನ ಮನುಷ್ಯ
ಅಖಿಲ ಭಾರತ ನಾಗರಿಕ ಸೇವೆಯ ಸಂತ
ಜಾವೀದ್ ಭಾಯಿ ಪಟೇಲ್
ಹಾಗೂ ಲಡ್ಬಾ ದಂಪತಿಗೆ
ಹುಟ್ಟಿದ ಕೂಸು
         ಸಂಯಮ ಅನುದ್ವೇಗಗಳ 
         ಗುಣ ಸಿರಿ ಬೆಳೆಸಿಕೊಂಡ
         22 ನೇ ವಯಸ್ಸಿಗೆ ಮೆಟ್ರಿಕ್ ನಲ್ಲಿ     
         ಉತ್ತೀರ್ಣ
         ಮಹತ್ವಾಕಾಂಕ್ಷೆಯಿಲ್ಲದ ಸಾಮಾನ್ಯ ಎಂದು
         ಹೆತ್ತವರಿಂದ ತೀರ್ಮಾನ
         ಇಂಗ್ಲೆಂಡಿಗೆ ಹೋಗಿ
         ಎರಡು ವರ್ಷದಲ್ಲಿ ಬ್ಯಾರಿಸ್ಟರ್
         ಗೋಧ್ರಾದಲ್ಲಿ ಪ್ರಾಕ್ಟೀಸ್
         ಅಡ್ವಕೇಟ್ ಕುಶಾಗ್ರಮತಿಯ ನ್ಯಾಯವಾದಿ
         ಎಂಬ ಖ್ಯಾತಿ
         ಪತ್ನಿ ಕ್ಯಾನ್ಸರ್ ನಿಂದ
         ಇಹ ತ್ಯಜಿಸಿದಾಗ
         ಕೋರ್ಟಿನಲ್ಲಿ ವಾದ ಮುಂದುವರಿಸಿದ      
         ಕಾಯಕ ನಿಷ್ಠ
         ಸ್ವರಾಜ್ಯ ಚಳವಳಿಗೆ
         ಸಹಿ ಸಂಗ್ರಹಕ್ಕಾಗಿ
         ಅಭೂತಪೂರ್ವ ಭಾಷಣ
         ರಾಷ್ಟ್ರೀಯ ಕಾಂಗ್ರೆಸ್
         ಗುಜರಾತ್ ಶಾಖೆಯ
         ಕಾರ್ಯದರ್ಶಿ
         ಪ್ಲೇಗ್ ವಿರುದ್ಧ ಸಮರ
         ರಾಷ್ಟ್ರಕ್ಕಾಗಿ ವೈಯಕ್ತಿಕ ಆಸೆ-ಆಕಾಂಕ್ಷೆ      
         ಬಯಕೆ ಅಭೀಪ್ಸೆ ಗಳ
         ತ್ಯಾಗ, ಭೌತಿಕ ಭೋಗಲಾಲಸೆ ಗಳಿಂದ     
         ದೂರ ದೂರ
         ಹಳ್ಳಿ ಹಳ್ಳಿ ಸಂಚಾರ
         ತೆರಿಗೆಗೆ ಬಹಿಷ್ಕಾರ
         ಜನರಿಗೆ ಸ್ವರಕ್ಷಣೆಯ ತರಬೇತಿ
         ಬಂಧನ ಸೆರೆಮನೆವಾಸ
         ಕೊನೆಗೂ ಪಟೇಲರಿಗೆ ಗೆಲುವು
         ತೆರಿಗೆ ವಿನಾಯತಿ
         ಪಟೇಲ ಹೀರೋ
ಅಸಹಕಾರ ಚಳವಳಿಗೆ
ಮೂರು ಲಕ್ಷ ಜನರ ಸಂಘಟನೆ
7.5 ಮಿಲಿಯ ಫಂಡ್ ಸಂಗ್ರಹ
ಇಂಗ್ಲಿಷ್ ಕೋಟಿನಿಂದ ಖಾದಿಗೆ
ಸಮಾಜಘಾತುಕ ಆಚರಣೆಗಳ ವಿರುದ್ಧ ಧ್ವನಿ
ಮುನ್ಸಿಪಲ್ ಅಧ್ಯಕ್ಷರಾಗಿ
ಆರೋಗ್ಯ ಶಿಕ್ಷಣ ಸುಧಾರಣೆ
ಗಾಂಧಿ ಸೆರೆಯಲ್ಲಿ ಇದ್ದಾಗ
ಸತ್ಯಾಗ್ರಹದ ಮುನ್ನಡೆ
ಸಮುದಾಯಗಳ ನಡುವೆ ಸಾಮರಸ್ಯದ ಸೇತು
ದೇಶದಾದ್ಯಂತ
ಸ್ವಯಂಸೇವಕರ ಜಾಲ
ರಾಷ್ಟ್ರಮಟ್ಟದಲ್ಲಿ ತೆರಿಗೆ ನಿಷೇಧ ಸೆರೆಮನೆಯಲ್ಲಿ ಗಾಂಧಿಯೊಂದಿಗೆ ಆಪ್ತತೆ
ಭಿನ್ನಾಭಿಪ್ರಾಯಗಳ ನಡುವೆಯೂ
ಗಾಂಧಿಯ ನಾಯಕತ್ವಕ್ಕೆ ಪ್ರವೃತ್ತಿಗೆ ಗೌರವ
ಚುನಾವಣೆಗೆ ಧನಸಂಗ್ರಹ
ಅಭ್ಯರ್ಥಿಗಳ ಆಯ್ಕೆ
ಪ್ರತಿಭಟನೆಗಳಲ್ಲಿ ದೃಢ ಸೂಕ್ತ ನಿಲುವು ಕಾಂಗ್ರೆಸ್ಸಿನಲ್ಲಿ ಇವರದೇ.
ರಾಷ್ಟ್ರೀಯತೆ ಕಿಚ್ಚು ಹಚ್ಚಲು ಇವರ ಭಾಷಣಗಳೇ ಅಸ್ತ್ರ ಉಪಕರಣ
ಅಪ್ರತಿಮ ಸಂಘಟಕ
ಭಾರತದಾದ್ಯಂತ
ಸ್ವಾತಂತ್ರ್ಯದ ದಂಗೆ
ಯಶಸ್ವಿಗೆ ಕಾರಣಪುರುಷ
ಬಾಂಗ್ಲಾ ವಿಭಜನೆಯ ಸಂದರ್ಭ
ವೈಯಕ್ತಿಕ ನಿಲುವು ಭಿನ್ನವಾಗಿದ್ದರೂ
ನಿರಾಶ್ರಿತರ ಸಮಸ್ಯೆಗಳನ್ನು
ಅರ್ಥಮಾಡಿಕೊಂಡು
ಪರಿಹಾರ ನೀಡಿದ ಮಾನವೀಯ ಮೂರ್ತಿ
ರಾಜ್ಯಗಳ ಸಮಸ್ಯೆಯನ್ನು ಒಬ್ಬರೇ ಪರಿಹರಿಸಲು ಅಸಾಧ್ಯ
ಎಂದರು ಗಾಂಧಿ
ಪ್ರಾಯೋಗಿಕ ಕುಶಾಗ್ರಮತಿ ಯಿಂದ ಅವಿಸ್ಮರಣೀಯ ನಿರ್ಧಾರ
ಸೂಕ್ಷ್ಮ ರಾಜತಂತ್ರ ಗಳ ಬಳಕೆಯಿಂದ 565 ರಾಜರುಗಳನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿಸಿದ
ಅಪ್ರತಿಮ ಸಂಘಟಕ ಚತುರಮತಿ ಚಾಣಾಕ್ಷ
ಗಟ್ಟಿಗ ಮೇಧಾವಿ
ಯುದ್ಧದಸಂದರ್ಭ
ಶ್ರೀನಗರದಿಂದಪಠಾಣಕೋಟ್ಗೆ
ಆರು ತಿಂಗಳಲ್ಲಿ ಪ್ರಮುಖ
ರಸ್ತೆ ನಿರ್ಮಾಣ
ಭಾರತೀಯ ಆಡಳಿತ ಸೇವೆಯ ಚುಕ್ಕಾಣಿ
          ಜೀವನ ಸಂಧ್ಯಾಕಾಲದಲ್ಲಿ
          ಪ್ರತಿಷ್ಠಿತ
          ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್    
           ಗೌರವ
           ದೆಹಲಿ ಜಯಪುರ ವಿಮಾನಯಾನದಲ್ಲಿ
           ಅದೃಷ್ಟವಶಾತ್ ದುರಂತದಿಂದ     
           ಪಾರಾದಾಗ ಪಾರ್ಲಿಮೆಂಟಲ್ಲಿ
           ಅದ್ಭುತ ಸ್ವಾಗತ ಅರ್ಧಗಂಟೆ ಕಲಾಪ    
           ನಿಲ್ಲಿಸಿ ಎದ್ದು ನಿಂತು ಕರತಾಡನದ ಗೌರವ
           ರಾಷ್ಟ್ರ ಕಲ್ಯಾಣಕ್ಕಾಗಿ ಅತ್ಯದ್ಭುತವಾಗಿ     
           ತನ್ನ ಇಡೀ ಜೀವನವನ್ನು ಸಮರ್ಪಿಸಿದ
           ಮುಂಚೂಣಿಯ ಯೋಧ
           ಅಗ್ರಗಣ್ಯ ನಾಯಕ ಶಿರೋಮಣಿಗೆ    
           ಭಾರತರತ್ನ ಮುಕುಟಮಣಿ.
           ಪ್ರಪಂಚದಲ್ಲಿಯೇ ಅತಿ ಎತ್ತರದ    
           ಐಕ್ಯತೆಯ ವಿಗ್ರಹ ಸ್ಥಾಪನೆ
           ವಿಶ್ವಮಾನ್ಯ ಘಟನೆ
           ಭಕ್ತಿ ಗೌರವದ ನಿವೇದನೆ
ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************

Ads on article

Advertise in articles 1

advertising articles 2

Advertise under the article