
ಮಕ್ಕಳ ಕವನಗಳು : ಸಂಚಿಕೆ - 3
Saturday, March 26, 2022
Edit
ಮಕ್ಕಳ ಕವನಗಳು
ಸಂಚಿಕೆ - 3
ಕೊರೋನ
------------------
ಮಹಾಮಾರಿ ಕೊರೋನದಿಂದ
ಕತ್ತಲಾಯಿತು ನಮ್ಮ ಬದುಕು
ಮನೆಯಿಂದ ಹೊರ ಕಾಲಿಟ್ಟರೆ
ಕಾದಿದೆ ಸಂಕಟ
ಕೆಲಸವಿಲ್ಲದೆ ಜೀವನ
ನಡೆಸಲು ಬಲು ಕಷ್ಟ
ಶಾಲೆಯಿಲ್ಲದೆ ಮಕ್ಕಳ
ಭವಿಷ್ಯವೇ ವ್ಯರ್ಥ
ಓ... ಮಹಾಮಾರಿ ಕೊರೋನವೇ ನಮ್ಮ
ದೇಶವನ್ನು ಬಿಟ್ಟು ತೊಲಗು
.................................................. ಶ್ರೇಯ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನಮ್ಮ ಮನೆ
-------------------
ಸುಂದರವಾದ ನಮ್ಮ ಮನೆ
ಅಕ್ಕ ತಂಗಿಯರು ಕೂಡಿ
ಆಟ ಆಡೋ ಮನೆ
ರಕ್ಷಣೆ ಆಶ್ರಯ ನೀಡೋ ಮನೆ
ಸಂಸ್ಕೃತಿ ಸಂಪ್ರದಾಯ
ಕಲಿಸೋ ಮನೆ
ಕುಟುಂಬದ ಸದಸ್ಯರೆಲ್ಲರೂ
ಕೂಡಿ ಬಾಳೋ ಮನೆ
ಮನೆ ಮನೆ ನಮ್ಮ ಮನೆ
ಸುಂದರವಾದ ನಮ್ಮ ಮನೆ
.................................................. ಶ್ರೇಯ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಮಾನವ
------------------
ರೈತನು ಬೆವರು ಸುರಿಸಿ
ಕಷ್ಟ ಪಟ್ಟು ದುಡಿದು
ನಮಗಾಗಿ ಭತ್ತ ಬೆಳೆಸಿ
ಕೊಡುವನು
ಆದರೆ
ಹಸಿವಾಗದ ಮನುಜನು
ಅನ್ನವ ಬಿಸಾಡಿ
ರೈತನ ಶ್ರಮವನ್ನು
ಅರ್ಥವ ಮಾಡದೆ
ಅವಮಾನ ಮಾಡುವನು...!!
.................................................. ಶ್ರೇಯ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಹಬ್ಬ
---------
ಹಬ್ಬಗಳಲ್ಲಿ ಹಲವು ತರ
ಆಚರಿಸುವೆವು ಎಲ್ಲಾ
ನಾನಾ ತರ
ಕಷ್ಟಗಳನ್ನು ತೊರೆದು
ಸಂತಸವನ್ನು ಮೆರೆದು
ಎಲ್ಲಾ ಧರ್ಮಗಳ ಹಬ್ಬ
ಭೇದವಿಲ್ಲದೆ ಹರುಷ ತುಂಬಿ
ಸೇರಿ ಕುಣಿಯುವ ಹಬ್ಬ
ಹೊಸ ಹೊಸ
ಉಡುಗೆಯ ತೊಟ್ಟು
ಆಡುವೆವು ಸಂತಸ ಪಟ್ಟು
ಸಿಹಿ ತಿನಿಸುಗಳ ಮಾಡುವೆವು
ಊರಿಗೆಲ್ಲಾ ಹಂಚುವೆವು
.................................................. ಶ್ರೇಯ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಹಕ್ಕಿ
---------
ಹಕ್ಕಿ ಹಕ್ಕಿ ಬಣ್ಣದ ಹಕ್ಕಿ
ಸುಂದರ ರೆಕ್ಕೆಯ ಹೊಂದಿರುವೆ
ಮುಂಜಾನೆ ಬಂದು ಕೂಗುವೆ
ಆಕಾಶದ ಎತ್ತರದಿ ಹಾರುವೆ
ತಿನ್ನಲು ಆಹಾರ ಹುಡುಕುವೆ
ಚಿಲಿಪಿಲಿ ಎಂದು ಹಾಡುವೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಅಮ್ಮ
---------
ತ್ಯಾಗ ,ಪ್ರೀತಿ, ಕರುಣೆ,
ವಾತ್ಸಲ್ಯಗಳ ಭಂಡಾರಕ್ಕೆ
ಒಂದೇ ಹೆಸರು ಹೇಳಲೇನು ?
'ಅಮ್ಮ' ನಲ್ಲದೆ ಆ ಸ್ಥಾನವ
ತುಂಬುವ ಯೋಗ್ಯತೆ
ಜಗದಲುಂಟೇನು?
ಬಸಿರೊಳಗೆ ನವಮಾಸ ಹೊತ್ತು,
ಮರಣ ವೇದನೆ ಸಹಿಸಿ ಶಿಶುವನು
ಹೆತ್ತು , ತನ್ನೊಳಗಿನ
ನವ ಜೀವಕೆ ಜನ್ಮವ ನೀಡಿ
ನಗುನಗುತಾ ತಾ
ಮರು ಜನ್ಮವ ಪಡೆವ ಕಲೆಗೆ
'ಅಮ್ಮ' ನಲ್ಲದೇ ಬೇರಾವ ಹೆಸರು
ಸೂಕ್ತವೇನು?
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು
ಬೈಲೂರು , ಉಡುಪಿ
ಉಡುಪಿ ಜಿಲ್ಲೆ.
*******************************************
ಮನವಿ
------------
ದೇಶ-ವಿದೇಶ ಸುತ್ತಿ ಬರುತ್ತಿರುವೆ
ಟಿವಿ ತುಂಬಾ ನಿನ್ನದೇ ಕೇಳುತ್ತಿರುವೆ,
ಜನರಿಗೆಲ್ಲಾ ನೆಮ್ಮದಿ ಕೆಡಿಸಿರುವೆ
ಕೊರೊನಾ ಯಾಕೆ ಹೀಗೆ ಕಾಡುತ್ತಿರುವೆ..?
ಆಟ ಪಾಠ ಗೆಳೆಯರು ಇಲ್ಲ
ಝೂಮ್ ತರಗತಿ ನೆಟ್ಟೇ ಇಲ್ಲ
ಮೊಬೈಲ್ ಅಮ್ಮ ಕೊಡುತ್ತಾ ಇಲ್ಲ,
ಮಕ್ಕಳ ಹಕ್ಕು ರಕ್ಷಣೆ ಇಲ್ಲ..
ಉಸಿರು ಕಟ್ಟಿಸಿದೆ ಮುಖಗವಸು,
ಅಜ್ಜಿ ಊರಿಗೆ ಹೋಗೋದು ಕನಸು.
ಸವಿರುಚಿ ಅಡಿಗೆ ಮಾಡಲು ಕಲಿತೆ,
ಹಾಡು ಕಥೆ ಕೇಳುತಾ ಬರೆಯೆ
ಬೇಸರ ಮರೆತೆ.....!!
ಅಪ್ಪ ಅಮ್ಮ ಮಾತಿಗೆ ಕಿವಿಯಿರಲಿ
ಗಿಡ ನೆಡಿ ಪರಿಸರ ಉಳಿಯಲಿ
ವೈರಸ್ ದಿಕ್ಕೆಟ್ಟು ಬೇಗ ಸಾಯಲಿ
....................................... ಮಿಹಿರ್.ಯು.ಟಿ.
೬ ನೇ ತರಗತಿ
ವಿಷನ್ ಅಂತಾರಾಷ್ಟ್ರೀಯ ಶಾಲೆ
C/o ಪರ್ವೇಜ್ ಕಾಟೇಜ್
೩ಮುಖ್ಯಾ ರಸ್ತೆ,೧೪ ಅಡ್ಡರಸ್ತೆ
ವಿನೋಬಾ ನಗರ , ದಾವಣಗೆರೆ
*******************************************
ಪುಟಾಣಿ ಮಕ್ಕಳೇ .
-----------------------
ಮಕ್ಕಳೇ, ಮಕ್ಕಳೇ
ಪುಟಾಣಿ ಮಕ್ಕಳೇ .
ನಾವು ಶಾಲೆಗೆ ಹೋಗೋಣ,
ನಾವು ಶಾಲೆಯಲ್ಲಿ ಬರೆಯೋಣ
ನಾವು ಶಾಲೆಯಲ್ಲಿ ಆಟ - ಆಡೋಣ
ಮಕ್ಕಳೇ, ಮಕ್ಕಳೇ
ಪುಟಾಣಿ ಮಕ್ಕಳೇ .
ನಮ್ಮ ಶಾಲೆ ದೇವರು
ನಮ್ಮ ಶಾಲೆ ಹೆಸರನ್ನು ಉಳಿಸೋಣ
ನಮ್ಮ ಶಾಲೆ ಸುಂದರ....!!
ಮಕ್ಕಳೇ ಮಕ್ಕಳೇ
ಪುಟಾಣಿ ಮಕ್ಕಳೇ .
ನಾವು ಶಾಲೆಯಲ್ಲಿ ಎಲ್ಲರೊಂದಿಗೆ
ಆಟ ಆಡೋಣ
ಪಾಠವನ್ನು ಕೇಳಿ ತಿಳಿಯೋಣ
ಗುರುಗಳಿಗೆ ಗೌರವವನ್ನು ನೀಡೋಣ..!!
8ನೇ ತರಗತಿ
ಸ.ಹಿ.ಪ್ರಾ.ಶಾಲೆ ಅಂಡಾರು .
ಹೆಬ್ರಿ ತಾಲೂಕು , ಉಡುಪಿ ಜಿಲ್ಲೆ
*******************************************
ಕರ್ನಾಟಕ ರಾಜ್ಯೋತ್ಸವ
-------------------------------
ಸಿರಿಗನ್ನಡ , ಸವಿಗನ್ನಡ , ಕಸ್ತೂರಿ ಕನ್ನಡ.....
ಎರಡು ಸಾವಿರ ವರ್ಷ ಇತಿಹಾಸ
ಹೊಂದಿರುವ ಭಾಷೆ ಕನ್ನಡ !
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ
ಕೀರ್ತಿ ಭಾಷೆ ಕನ್ನಡ..!!
ಕನ್ನಡ ಕೇವಲ ನುಡಿಯಲ್ಲ
ಮಾತೃಭಾಷೆ ನಮಗೆಲ್ಲಾ......
ಸಂತರು, ಶ್ರೇಷ್ಠರು,
ಗಾಯಕರು, ಲೇಖಕರು......
ನಾಡಿಗೆ ಕೀರ್ತಿಯ ತಂದರು
ಹಲವು ಸಾಧಕರು
ಮೆರೆಯುತ ನಾಡಿದು
ಪ್ರಜ್ವಲಿಸಿದೆ ಜಗದ ಎದುರು
ಬೇಲೂರು, ಬಾದಾಮಿ, ಬಿಜಾಪುರ
ಈ ಶಿಲ್ಪಕಲೆಗಳೆಂದೆಂದಿಗೂ ಅಮರ
ನೋಡುವ ಕಣ್ಣಿಗೆ ದಿನವೂ ಸುಂದರ
ತೆರೆದಿದೆ ಲೋಕಕೆ ಕನ್ನಡ ಮಂದಿರ
10ನೇ ತರಗತಿ
ವ್ಯಾಲೆಂಟೈನ್ ಮಾಡೆಲ್ ಸ್ಕೂಲ್
ಇಟ್ಟುಮಡು , ಮಾರುತಿ ನಗರ , ಬೆಂಗಳೂರು
*******************************************
ಮನೆಯಲ್ಲೇ ಇದ್ದು ಸಾಕಾಗಿತ್ತು
ಶಾಲೆ ತೆರೆಯಲು ಮನವು ಕಾದಿತ್ತು
ಕೊರೋನಾ ಬಡ ಶ್ರೀಮಂತರೆನ್ನದೆ
ಒಂದೇ ಸವನೆ ಒಕ್ಕರಿಸುತ್ತಿತ್ತು
ಇಡೀ ಪ್ರಪಂಚಕ್ಕೆ ಭಯ ಹುಟ್ಟಿಸುತ್ತಿತ್ತು
ವಿದ್ಯಾರ್ಥಿಗಳಿಗಂತು ಶಿಕ್ಷಕರನ್ನು ನೋಡಲಾಗದ
ಅವರ ತಮಾಷೆಯನ್ನು ಕೇಳಲಾಗದ
ನಿತ್ಯ ಒತ್ತಡದಲ್ಲಿ....!!!
ಈ ಕೊರೋನಾ ಜಗದ ಮಾರಿಯಾಗಿ
ನಿರ್ಬಂಧವಿತ್ತು ಸ್ವಾತಂತ್ರ್ಯದಲ್ಲಿ ...!!
ತುಂಬಾ ನೆನಪಾಗುತ್ತಿತ್ತು ಶಾಲೆಯ ದಿನಗಳು
ಆಪತ್ತಿನಲ್ಲಿತ್ತು ನಮ್ಮೆಲ್ಲರ ಪ್ರಾಣ
ಕಾಯಿಲೆ ಬರುವುದಕ್ಕೂ ಮುನ್ನ ಎಚ್ಚರವಹಿಸೋಣ
ಕಷ್ಟದ ಸಮಯದಲ್ಲಿ ಎಲ್ಲರೂ
ಮನೆಯಲ್ಲೇ ಇರೋಣ
ನಮ್ಮ ಶಾಲಾ ಕಲಿಕೆಯನ್ನು ಮುಂದುವರೆಸೋಣ
ಕೊರೋನಾದಿಂದ ನಮ್ಮನ್ನು ರಕ್ಷಿಸಿದ
ಎಲ್ಲಾ ವಾರಿಯರ್ಸ್ ಗಳಿಗೆ ನನ್ನ ಈ ನಮನ
10ನೇ ತರಗತಿ
ವ್ಯಾಲೆಂಟೈನ್ ಮಾಡೆಲ್ ಸ್ಕೂಲ್
ಇಟ್ಟುಮಡು , ಮಾರುತಿ ನಗರ , ಬೆಂಗಳೂರು
*******************************************
ಗಿಳಿ
-------------
ನನಗೆ ಗಿಳಿ ಎಂದರೆ
ತುಂಬಾ ಇಷ್ಟ
ಅದರ ಕೂಗು ನನಗೆ
ತುಂಬಾ ಇಷ್ಟ
ಗಿಳಿಗೆ ಕೆಂಪು
ಕೊಕ್ಕು ಚಂದ
ನನಗೆ ಅದರ
ಬಣ್ಣ ಚಂದ
ಗಿಳಿಯ ಬಣ್ಣ
ಹಸಿರು
ಮರಗಿಡ ಬಳ್ಳಿಗಳ
ಬಣ್ಣವೂ ಹಸಿರು
8ನೇ ತರಗತಿ :
ಸ.ಉ. ಪ್ರಾ. ಶಾಲೆ ಕುವೆಟ್ಟು
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************