-->
ಮಕ್ಕಳ ತುಂಟ ಮನಸು : ಸಂಚಿಕೆ - 1

ಮಕ್ಕಳ ತುಂಟ ಮನಸು : ಸಂಚಿಕೆ - 1

     ಮಕ್ಕಳ 
ತುಂಟ ಮನಸು 
ಸಂಚಿಕೆ - 1              ಹೋಮ್ ವರ್ಕ್ ಮಾಡದೆ ಬಂದ 
                          ಹೊಟ್ಟೆ ನೋವು!
          ಅದೊಂದು ದಿನ ನಾನು ಬೆಳಗ್ಗೆ ಬೇಗನೆ ಎದ್ದು ಶಾಲೆಗೆ ಹೊರಟು ಇನ್ನೇನು ಬ್ಯಾಗ್ ತುಂಬಿಸಬೇಕು ಅನ್ನುಷ್ಟರಲ್ಲಿ ಹಿಂದಿನ ದಿನ ಟೀಚರ್ ಕೊಟ್ಟ ಹೋಂ ವರ್ಕ್ ನೆನಪಾಯ್ತು.... ಛೇ... ನಾನು ಹೋಂ ವರ್ಕ್ ಬೇರೆ ಬರ್ದಿಲ್ಲ. ಇವಾಗ ಸ್ಕೂಲಿಗೆ ಹೋದ್ರೆ ಟೀಚರ್ ಕೈಯಿಂದ ಪೆಟ್ಟು ಬೀಳೋದಂತು ಗ್ಯಾರೆಂಟಿ.. ಏನಪ್ಪಾ ಮಾಡೋದು ಅಂತ ಯೋಚಿಸ್ತಾ ಇದ್ದಾಗ...... ಆ ಕಡೆಯಿಂದ ಅಮ್ಮ ಚಪಾತಿ ಮತ್ತು ಆಲೂಗಡ್ಡೆ ಪಲ್ಯ ಹಾಕ್ಕೊಂಡು ಬಂದು "ಬೇಗ ತಿಂಡಿ ತಿಂದು ಸ್ಕೂಲ್ ಗೆ ಹೋಗು" ಅಂತ ಹೇಳಿದ್ಲು. ನಾನು ಚಪಾತಿ ತಿಂತಾ ಇದ್ದಾಗ ನಂಗೊಂದು ಥಟ್ ಅಂತ ಐಡಿಯಾ ಬಂತು. ಈ ಆಲೂಗಡ್ಡೆ ಪಲ್ಯ ತಿಂದ್ರೆ ಗ್ಯಾಸ್ಟ್ರಿಕ್ ಆಗುತ್ತೆ ಅಂತ ಅಜ್ಜಿ ಹೇಳ್ತಾ ಇದ್ದದ್ದು ನೆನಪಾಯ್ತು.. ಇದನ್ನೇ ನೆಪ ಮಾಡ್ಕೊಂಡು ಹೊಟ್ಟೆ ನೋವು ಅಂತ ಅಮ್ಮನ ಬಳಿ ಹೇಳಿದ್ರೆ ಸ್ಕೂಲ್ ಗೆ ಹೋಗೋದು ತಪ್ಪುತ್ತೆ ಅಂತ ಅಂದ್ಕೊಂಡೆ....!! ಅಲ್ಲಿಗೆ ಶುರುವಾಯ್ತು ನೋಡಿ ನನ್ನ ಡ್ರಾಮಾ...... "ಅಮ್ಮ ಅಮ್ಮ ನನ್ಗೆ ಜೋರು ಹೊಟ್ಟೆ ನೋವಾಗ್ತಾ ಇದೆ.. ಬಹುಶಃ ಆಲೂಗಡ್ಡೆ ಪಲ್ಯ ತಿಂದು ಹೀಗೆ ಆಗಿರ್ಬೇಕು.. ನಾನಿವತ್ತು ಸ್ಕೂಲ್ ಗೆ ಹೋಗಲ್ಲ" ಅಂತ ಅಂದಿದ್ದೇ ತಡ.. ಆ ಕಡೆಯಿಂದ ಅಮ್ಮ ನನ್ನ ಹೋಮ್ ವರ್ಕ್ ಬುಕ್ ಕೈಯಲ್ಲಿ ಹಿಡ್ಕೊಂಡು ನನ್ನನ್ನೇ ನೋಡ್ತಾ ಇದ್ಲು.. ಆವಾಗ ಗೊತ್ತಾಯ್ತು ನನ್ನ ಪ್ಲಾನ್ ಅಮ್ಮನ ಮುಂದೆ ನಡಿಯಲ್ಲ ಅಂತ...... ಪಕ್ಕದಲ್ಲೇ ಇದ್ದ ಲಟ್ಟಣಿಗೆ ಹಿಡ್ಕೊಂಡು ಅಮ್ಮ ಬಂದಾಗ ನಾನು ಸ್ಕೂಲ್ ವ್ಯಾನ್ ಹತ್ತಿ ಹೋದವಳು ಮತ್ತೆ ಯಾವತ್ತೂ ಹೊಟ್ಟೆ ನೋವಿನ ನಾಟಕ ಮಾಡಿಲ್ಲ...!! ಹೋಮ್ ವರ್ಕ್ ಮಾಡದೆ ಸ್ಕೂಲಿಗೂ ಹೋಗಿಲ್ಲ.
.............................................. ರಮ್ಯ. ಎಮ್
ಅಂತಿಮ ಬಿ.ಎ (ಮನ:ಶಾಸ್ತ್ರ ವಿದ್ಯಾರ್ಥಿನಿ)
ಡಾ. ಪಿ. ದಯಾನಂದ ಪೈ - ಪಿ.ಸತೀಶ ಪೈ, 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, 
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************Ads on article

Advertise in articles 1

advertising articles 2

Advertise under the article