ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 21
Friday, December 10, 2021
Edit
ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 21
ಭರತಭೂಮಿಯ ವೀರರ ಕಥೆಯ ಸಾರಿ ಹೇಳುವೆನು
ಮೌರ್ಯ ವಂಶರವಿತೇಜನ ಪರಾಕ್ರಮ ಪಾಡುವೆನು
ಸರ್ವಾರ್ಥಸಿದ್ಧಿ ಮುರ ದಂಪತಿಗೆ ಪಾಟಲಿಪುತ್ರದಲ್ಲಿ ಹುಟ್ಟಿದ
ಅಖಂಡ ಭಾರತಕ್ಕೆ ಒಬ್ಬನೇ ಒಬ್ಬ ಪ್ರಸಿದ್ಧ
ಚಿಕ್ಕವನಿರುವಾಗ ವಾರಿಗಿ ಹುಡುಗರೊಳಗೆ ರಾಜನ ಆಟವಾಡುತ್ತಿದ್ದ
ಇದನ್ನು ಕಂಡ ದಾರ್ಶನಿಕ ಕೌಟಿಲ್ಯನ ಕೃಪೆಗೆ ಬಿದ್ದ
ಛಲ ತೊಟ್ಟರೆ ಸೋಲದೆ ಗೆಲ್ಲುವ ಎದೆಗಾರ
ಕೋಲ್ಮಿಂಚಿನಂತೆ ಧ್ವನಿ ನಡತೆಯಲ್ಲಿ ಗಂಭೀರ
ಕುದಿಗೊಂಡ ಅನ್ನದಂತೆ ತರುಣನ ರಕ್ತ ಉಕ್ಕೇರಿ
ಜನ್ಮಭೂಮಿಗಾಗಿ ಪಣತೊಟ್ಟು ಬಲು ತಯಾರಿ
ದೂರದ ತಕ್ಷಿಲದಿ ಗುಪ್ತ ಜಾಗದಿ ಸೈನ್ಯ ಸನ್ನದ್ಧ
ಕನಸು ನನಸಿಗೆ ಸರ್ವ ವಿದ್ಯಾ ಪಾರಂಗತ ದೀಕ್ಷಾ ಬದ್ಧ
ಕೌಟಿಲ್ಯನ ತರಬೇತಿ ಸ್ವಜನ ಬಂಧು ಪ್ರೀತಿಯಲ್ಲಿ
ಅಂತಸ್ತು ಪ್ರತಿಭೆಗೆ ಸಾಣೆ ಹಿಡಿದ ಗುರುವಂದ್ಯ
ಯುದ್ಧ ರಾಜಕೀಯ ನೀತಿ ಮತ್ತೆ
ಚಪ್ಪನ್ನ ಅರುವತ್ತು ವಿದ್ಯೆ
ತಂತ್ರಗಾರಿಕೆ ಬೇಹುಗಾರಿಕೆ ಒಡೆದು
ಆಳುವ ನೀತಿ
ನಿಷ್ಠರನ್ನು ಉಳಿಸಿ ದುಷ್ಟರನ್ನು ಅಟ್ಟಿ
ಹುಟ್ಟಿಸಿದ ಭೀತಿ
ನಂದನ ನಿಗ್ರಹಿಸಿ ಅಮಾತ್ಯನನ್ನು ದೆಸೆಗೆಡಿಸಿ
ಮಗಧದಿ ಕೇಂದ್ರೀಕೃತ ಆಡಳಿತ ನಡೆಸಲು ಯೋಚಿಸಿದ
ಇದರಿಂದ ದೇಶದ ಅಖಂಡತೆಗೆ ಭಂಗವಿರದು
ಮಗಧ ರಾಜ್ಯದಲ್ಲಿ ಬಲಾಡ್ಯ ಬೃಹತ್ ಸೈನ್ಯ ವಿಹುದು
ವಿದೇಶಿ ಮೆಕ್ ಡೊನಿಯನ್ ಯುದ್ಧತಂತ್ರ ಪ್ರವೀಣ
ಹೆಜ್ಜೆ ಮೇಲೆ ಹೆಜ್ಜೆಯಿಡುತ ಯಶಸ್ಸಿನೆಡೆಗೆ ಪಯಣ
ಪಂಜಾಬದಿಂದ ಬಿಹಾರದ ಹಿಂದೂಕುಶ್ ತನಕ
ಅಲೆಗ್ಸಾಂಡರ್ ಸೆಲ್ಯೂಕಸ್ ಶತ್ರುಗಳನ್ನು ಸೋಲಿಸಿ
ಸಿಂಧುವನೆಲೆ ಮಾಡಿ ಅಂಬಿ ಪೊರಸನನ್ನು ಗೆಲಿದು
ನಂದನನ್ನು ಬಗ್ಗುಬಡಿದು ಹೊಸ ಸಾಮ್ರಾಜ್ಯ ಸಿದ್ಧ
ಅಖಂಡ ಭಾರತವ ಪುನರಪಿ ಕಟ್ಟಲು ಮರು ರೂಪಿಸಲು ಕಟಿಬದ್ಧ
ಆಕ್ರಮಣಕಾರಿಗಳ ದೂರವಿಟ್ಟ ಶಾಂತಿ ವೀರ ಧೀರೋಧಾತ್ತ
ಸುಸ್ಥಿರ ಮಗಧಕ್ಕಾಗಿ ಚತುರಂಗಬಲ ಆಟವಿಕ ಆದಿವಾಸಿ ಸೈನ್ಯ
ದೇಶ ಸಂರಕ್ಷಣೆಗಾಗಿ ಯುದ್ಧಸಾಮಗ್ರಿ ತಯಾರಿಕೆ ಮಾನ್ಯ
ಆತ್ಮರಕ್ಷಣೆಗಾಗಿ ಮಹಿಳಾ ಮಣಿಗಳ ಸೈನ್ಯ ವಿಷಕನ್ಯಾ
ಜನರಿಗೆ ಸೈನಿಕರಿಗೆ ಆಹಾರ ಸರಬರಾಜು ಸುಸೂತ್ರ
ಸಾವಿರ ಮೈಲುದ್ದದ ರಾಜಮಾರ್ಗ ಪಾಟಲಿಪುತ್ರ ಕೇಂದ್ರ
ನಾಲ್ಕು ದಿಕ್ಕಿಗೂ ಕ್ಷಿಪ್ರ ಸಂಚಾರಕ್ಕೆ ಅನುಕೂಲ
ಕೃಷಿ ಗಣಿಗಾರಿಕೆ ಜಲ ನೀತಿಯಿಂದ ಆರ್ಥಿಕತೆ ಪ್ರಬಲ
ಗ್ರಾಮನಗರ ಸೈನ್ಯ ತ್ರಿವಲಯ ಅಭಿವೃದ್ಧಿ ಮಂತ್ರ
ಆಡಳಿತಕೆ ರಕ್ಷಣೆಗೆ ಆಪ್ತ ವಿಷ್ಣುಗುಪ್ತನ ಬೌದ್ಧಿಕ ಕೂಸು ಅರ್ಥಶಾಸ್ತ್ರ
ಪರಧರ್ಮ ಸಹಿಷ್ಣು ಶ್ರೀಮಂತ ನಮ್ಮರಸ ಪರಿಶುದ್ಧ ಅಂತರಂಗ-ಬಹಿರಂಗ
ಗುಪ್ತರ ಕಾಲದಿ ಭಾರತ ಕಂಡ ಸುವರ್ಣಯುಗ ಉತ್ತುಂಗ
ಆಚಾರ-ವಿಚಾರ ಚಾಣಕ್ಯನೀತಿ ಪ್ರತೀತಿ
ಧರ್ಮ-ಸಂಸ್ಕೃತಿ ಬಹುತ್ವ
ಜನಪ್ರಿಯ ಜನಾನುರಾಗಿ ಛಲದಂಕಮಲ್ಲ
ಲುಪ್ತ ಲೋಭಿ ಗುಪ್ತ ಶೋಭಿತ ಮಹಾ ಸಾಮ್ರಾಟ ಬಹುಪರಾಕ್ ಬಹುಪರಾಕ್
ಇಂಥವರು ನಿಮ್ಮೊಳಗಿಲ್ಲವೇ .................?
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
Mob: +91 99016 38372
*******************************************