ಅಕ್ಕನ ಪತ್ರ - 7 ಕ್ಕೆ ಮಕ್ಕಳ ಉತ್ತರ (ಸಂಚಿಕೆ -1)
Saturday, October 2, 2021
Edit
ಜಗಲಿಯ ಮಕ್ಕಳಿಗೆ
ಅಕ್ಕ ಬರೆದ
ಪತ್ರ - 7ಕ್ಕೆ
ಮಕ್ಕಳು ಬರೆದ ಉತ್ತರ (ಸಂಚಿಕೆ - 1)
ನಮಸ್ತೆ ಅಕ್ಕ
ನಿಮ್ಮ ಪತ್ರವನ್ನು ನಾನು ಓದಿದ್ದೇನೆ.....
ನಿಮ್ಮ ಪತ್ರ ಓದುವ ಕುತೂಹಲ ಬರೆಯುವ ಆಸಕ್ತಿ ಹೊಸದೊಂದು ಭರವಸೆಯನ್ನು ಮೂಡಿಸಿತ್ತು. ಪತ್ರಓದಿದೆ... ನಿಮ್ಮ ಖುಷಿಯ ಜೊತೆ ನಾನೂ ಸಂಭ್ರಮಿಸಿದೆ. ನಾನು ನಿಮಗೊಂದು ಘಟನೆಯನ್ನು ಹೇಳಬೇಕು...... ಸಾಮಾನ್ಯವಾಗಿ ನಡೆಯುತ್ತಿರುವ ವಿಚಾರ ಆದರೆ ನನಗೆ ಬಹಳವಾಗಿ ಕಾಡುವ ಅಂಶಗಳಿವು. ಬಸ್ಸು ಜನಸಂದಣಿಯಿಂದ ತುಂಬಿತ್ತು. ನಾನು ವಿಟ್ಲದಿಂದ ಬರುವಾಗ ಬಸ್ಸಿನಲ್ಲಿ ಬಂದಿದ್ದೆ
ಒಬ್ಬಳು ಅಜ್ಜಿ ತುಂಬಾ ವಯಸ್ಸಾದದವರು ನಿಂತಿದ್ದರು. ಅವರಿಗೆ ಸೀಟನ್ನು ಯಾರೂ ಕೂಡ ಕೊಡಲಿಲ್ಲ. ನಾನು ಕೂಡ ನಿಂತಿದ್ದೆ. ಒಬ್ಬರು ಕೂಡ ಅವರಿಗೆ ಜಾಗವನ್ನು ಬಿಟ್ಟುಕೊಡಲಿಲ್ಲ ಆಗ ಕಂಡೆಕ್ಟರ್ ಹೇಳಿದರು ಅಜ್ಜಿಗೆ ಯಾರಾದರೂ ಸೀಟು ಬಿಟ್ಟು ಕೊಡಿ ಎಂದು ಹೇಳಿದರು. ಆದರೂ ಸಹಾ ಸೀಟು ಬಿಟ್ಟುಕೊಡಲಿಲ್ಲ. ಆಗ ಒಂದು ಸೀಟಿನಲ್ಲಿ ಕುಳಿತಿದ್ದ ಗಂಡಸಿನ ಹತ್ತಿರ ಕಂಡಕ್ಟರು " ನೀವು ಆ ವಯಸ್ಸಾದ ಅಜ್ಜಿಗೆ ಸೀಟು ಬಿಟ್ಟು ಕೊಡಿ " ಅಂತ ಹೇಳಿದರು. ಇನ್ನೊಂದು ಬದಿಯಲ್ಲಿ ಒಂದು ತಾಯಿ ಮಕ್ಕಳು ಸೀಟಲ್ಲಿ ಕುಳಿತಿದ್ದರು. ಅವರ ಹತ್ತಿರವೂ ಹೇಳಿದರು. ಆಗ ಮಹಿಳೆ ಆ ಮಕ್ಕಳನ್ನು ಎಬ್ಬಿಸಿ ಸೀಟು ಕೊಡುವ ಬದಲಿಗೆ ಕಂಡಕ್ಟರ ನಲ್ಲಿ " ನಾನು ಮಕ್ಕಳಿಗೆ ಟಿಕೆಟ್ ಮಾಡಿಸಿದ್ದೇನೆ ". ಎಂದರು. ಹಾಗಾದರೆ, ಈ ಸಮುದಾಯದಲ್ಲಿ ಹಣಕ್ಕಿಂತ ಮಿಗಿಲಾದದ್ದು ಏನಿಲ್ಲವೇ ಮನುಷ್ಯ ಮನುಷ್ಯನ ಮೇಲೆ ಕರುಣೆ ಇಲ್ಲವೇ....... ವಯಸ್ಸಾದವರನ್ನು ಕರುಣೆಯಿಂದ ನೋಡಬೇಕು. ಇನ್ನು ಮುಂದೆ ಯಾರಾದರೂ ವಯಸ್ಸಾದವರು , ಗರ್ಭಿಣಿಯರು, ಅಂಗವಿಕಲರು ಅಥವಾ ರೋಗಿಗಳು ಬಸ್ಸಿನಲ್ಲಿ ನಿಂತಿದ್ದರೆ ನಾವು ಜಾಗವನ್ನು ಬಸ್ಸಿನಲ್ಲಿ ಬಿಟ್ಟುಕೊಡಬೇಕು. ನಿಮ್ಮ ಪತ್ರವನ್ನು ಓದಿ ನನಗೆ ಇದು ನೆನಪಾಯಿತು. ಮಕ್ಕಳ ಜಗಲಿಯ ಅಕ್ಕ ನಿಮಗೂ ಹಾಗೂ ನನ್ನ ಎಲ್ಲಾ ಶಿಕ್ಷಕರಿಗೂ ನನ್ನ ತುಂಬು ಹೃದಯದ ವಂದನೆಗಳು.
.........................................ಫಾತಿಮತ್ ಶಿಫಾನ
9ನೇ ತರಗತಿ
ಸರಕಾರಿ ಪ್ರೌಢ ಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮಸ್ತೇ,
ನನ್ನ ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶನು ಮಾಡುವ ನಮಸ್ಕಾರಗಳು.
ನಾನು ನಿಮ್ಮ ಪತ್ರ ಓದಿ ಕಡಿಮೆ ಸ್ಥಳದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವ ಜಪಾನಿನ ಮಿಯಾವಾಕಿ ಎನ್ನುವ ವಿಜ್ಞಾನಿಯವರ ಬಗ್ಗೆ ತಿಳಿದುಕೊಂಡೆನು. ಹಾಗೆಯೇ ನಾವೂ ಗಿಡಗಳನ್ನು ನೆಟ್ಟು ಬೆಳೆಸಬೇಕು.
ದುರ್ಗಾಸಿಂಗ್ ರಜಪೂತ್ ಅವರಂತೆ ಇರುವ ಜನರು ಎಲ್ಲಾ ಊರಿನಲ್ಲಿಯೂ ಇರಬೇಕು. ಇವರ ಪರಿಸರ ಪ್ರೇಮವನ್ನು ಕೇಳಿ ತುಂಬಾ ಸಂತೋಷವಾಯ್ತು. ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಪ್ರಾಣಿ ಪಕ್ಷಿಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು.
ಹಾಗೆಯೇ ನಾವೂ ಹಿರಿಯರನ್ನು ಕಂಡಾಗ ಎಲ್ಲಿಯೇ ಆಗಲಿ ಅವರಿಗೆ ಅಲ್ಲಿ ಗೌರವ ಕೊಡಬೇಕು. ನಾವು ನಮ್ಮಿಂದ ಆದ ಸಹಾಯವನ್ನು ಕಷ್ಟದಲ್ಲಿರುವವರಿಗೆ ಯಾವಾಗಲೂ ಮಾಡುತ್ತಿರಬೇಕು.
........................................... ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************
ನನ್ನ ಪ್ರೀತಿಯ ಅಕ್ಕನಿಗೆ
ರಕ್ಷಿತ್ ಕೆ ಮಾಡುವ ನಮಸ್ಕಾರಗಳು.........
ನಿಮ್ಮ ಪತ್ರದಿಂದ ನನಗೆ ಓದುವ ಕುತೂಹಲ ಮತ್ತು ಬರೆಯುವ ಆಸಕ್ತಿ ಮೂಡಿತು. ಅಕ್ಕ ನಿಮ್ಮ ಪತ್ರ -7 ರ ಮಾತು ನೂರಕ್ಕೆನೂರು ಸತ್ಯ ಎಂದು ನನ್ನ ಅಮ್ಮ ನನಗೆ ತಿಳಿಸಿಕೊಟ್ಟರು. ನಾವು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಎಷ್ಟೋ ಹಿರಿಯರು , ಗರ್ಭಿಣಿ ಮಹಿಳೆಯರು ಮತ್ತು ಅಂಗವಿಕಲರು ಬಸ್ಸಿನಲ್ಲಿ ನಿಂತುಕೊಂಡೆ ಪ್ರಯಾಣಿಸುವುದನ್ನು ನಾನು ನೋಡಿದ್ದೇನೆ. ಅಂಥವರಿಗೆ ನಾನು ಬಸ್ನಲ್ಲಿ ಎದ್ದು ನಿಂತು ಸೀಟು ಬಿಟ್ಟು ಕೊಡುತ್ತೇನೆ. ಅಕ್ಕ ನಿಮ್ಮ ಪತ್ರದಿಂದ ಹಿರಿಯರನ್ನು ಗೌರವಿಸಬೇಕು ಎನ್ನವುದನ್ನು ಅರಿತುಕೊಂಡೆ. ಹಾಗೆಯೇ ನಮ್ಮ ಕಣ್ಣ ಮುಂದೆ ಏನಾದರೂ ಘಟನೆ ಅಥವಾ ಅಪಘಾತಗಳು ಸಂಭವಿಸಿದರೆ ಅವರನ್ನು ಮೊದಲು ಕಷ್ಟದಿಂದ ರಕ್ಷಿಸಬೇಕು. ನಾವು ಫೋಟೋ ತೆಗೆದು ಕೊಂಡು ಕಾಲ ಕಳೆಯಬಾರದು ಎನ್ನುವುದನ್ನು ತಿಳಿದುಕೊಂಡೆ. ನಾವು ಇನ್ನೊಬ್ಬರ ಕಷ್ಟವನ್ನು ನೋವನ್ನು ಅರ್ಥಮಾಡಿ ಕೊಳ್ಳಬೇಕು. ಅವರಿಗೆ ಸಹಕರಿಸಬೇಕು , ಎನ್ನುವುದನ್ನು ಕಲಿತು ಕೊಂಡೆ. ಹೌದು ಅಪಾಯದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ಹಾಗೆಯೇ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ನಾವು ಒಂದು ಮರ ಕಡಿದರೆ ಒಂದು ಗಿಡವನ್ನಾದರು ನೆಡಬೇಕು. ಇಲ್ಲದಿದ್ದರೆ ನಾವು ಪರಿಸರದಲ್ಲಿ ಜೀವಿಸಲು ಕಷ್ಟವಾಗುತ್ತದೆ. ಹಾಗೆಯೇ ಪ್ರಾಣಿ ಪಕ್ಷಿಗಳು ನಾಶವಾಗುತ್ತವೆ. ಪರಿಸರ ಸ್ನೇಹಿಯಾದ ಲೈನ್ ಮ್ಯಾನ್ ರವರ ಕಾಳಜಿ ನನಗೆ ತುಂಬಾ ಇಷ್ಟವಾಯಿತು. ಅವರಂತೆಯೇ ನಾನು ಬೆಳೆಯಬೇಕು. ಏನನ್ನಾದರೂ ಸಾಧಿಸಬೇಕು ಎನ್ನುವುದು ನನ್ನ ಕನಸು. ಅಕ್ಕ ನಿಮ್ಮ ಆಶೀರ್ವಾದದಿಂದ ನನ್ನ ಕನಸು ನನಸಾಗಲಿ ಎಂದು ಬೇಡುತ್ತಾ ಮುಂದಿನ ನಿಮ್ಮ ಪತ್ರಕ್ಕಾಗಿ ಕಾಣುತ್ತೇನೆ.
.....................................................ರಕ್ಷಿತ್ ಕೆ.
7ನೇ ತರಗತಿ
ದ.ಕ.ಜಿ ಪಂ .ಉ.ಹಿ.ಪ್ರಾ ಶಾಲೆ ಗೋಳಿತ್ತೊಟ್ಟು ಪುತ್ತೂರು ತಾಲ್ಲೂಕು , ದ.ಕ.ಜಿಲ್ಲೆ
****************************************
ನಮಸ್ತೇ ಅಕ್ಕ,
ನಿಮ್ಮ ಪತ್ರ ಓದಿದ ನಂತರ ತಿಳಿಯಿತು, ಹೌದಲ್ಲ, ನಾನು ಬಸ್ಸಿನಲ್ಲಿ ಹೋಗುವಾಗ ಅಮ್ಮನ ತೊಡೆಯ ಮೇಲೆ ಕುಳಿತುಕೊಳ್ಳುತ್ತೇನೆ, ಇದು ಸರಿ..... ಒಂದು ದಿನ ಪಾಪ, ಅಜ್ಜಿಯ ಕೈಯಲ್ಲಿದ್ದ ಸಾಮಾನು ball ನಂತೆ ಹೋಯಿತು, ನಾನು ಓಡಿ ಹೋಗಿ ನನ್ನ ಪುಟ್ಟ ಕೈಗಳಿಂದ ಎತ್ತಿದೆ, ನಂತರ ಬೇರೆಯವರು ಸಹಾಯ ಮಾಡಿದರು.
Driver "ತುಲೆಯೇ ಬಾಲೆನ್ ತೂದ್ ಕಲ್ಪುಲೆ" ಎಂದರು, ನನಗೆ ಸಂತೋಷವಾಯಿತು.....
ಅಮ್ಮ .....ಮುತ್ತಿಕ್ಕಿದರು
............................................ಪ್ರಣವ್ ದೇವ್
ತರಗತಿ -೧
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಶಾಲೆ ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
*******************************************