-->
ಜಗಲಿಯ ಮಕ್ಕಳ ಮನದಾಳದ ಮಾತು ಸಂಚಿಕೆ - 6

ಜಗಲಿಯ ಮಕ್ಕಳ ಮನದಾಳದ ಮಾತು ಸಂಚಿಕೆ - 6

ಜಗಲಿಯ ಮಕ್ಕಳ 
ಮನದಾಳದ ಮಾತು 
ಸಂಚಿಕೆ - 6



             ನನ್ನ ಪ್ರೀತಿಯ ಟೀಚರ್ : ತ್ರಿಶಾ ಎಸ್
         ನನ್ನ ಜೀವನದ ಅತೀ ದೊಡ್ಡ ಸ್ಪೂರ್ತಿ ಎಂದರೆ ಶ್ರೀಮತಿ ರೇಖಾ ಟೀಚರ್. ಇವರನ್ನು ನಾನು ಎಲ್ಲೇ ಹೋದರೂ ಮರೆಯಾಲಾಗದು.. ಇದ್ದರೆ ಇವರಂತೆ ಇರಬೇಕು ನಡೆದರೆ ಇವರಂತೆ ನಡೆಯ ಬೇಕು ಎನ್ನುವಷ್ಟು ಸ್ಪೂರ್ತಿ ನನ್ನ ಟೀಚರ್..
       ಇವರು ನನ್ನ ಜೀವನದ ಮೇಲೆ ಕೇವಲ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿಲ್ಲ, ಪ್ರತಿಯೊಂದು ವಿಷಯದ ಮೇಲೂ ಪ್ರಭಾವ ಬೀರಿದವರು.. 
      ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಲಿಗೇರಿ ಯ ಶಿಕ್ಷಕಿಯಾಗಿದ್ದು ನನಗೆ ಒಂದರಿಂದ ಏಳನೇ ತರಗತಿಯವರೆಗೆ ಪಾಠ ಮಾಡಿದ್ದಾರೆ.. ಇವರು ನನಗೆ ಕೇವಲ ಪುಸ್ತಕದ ಜ್ಞಾನ ಹೇಳಿಕೊಟ್ಟಿಲ್ಲ ತನ್ನ ಜೀವನ ಜ್ಞಾನವನ್ನು ಹೇಳಿಕೊಟ್ಟಿದ್ದಾರೆ...ಜೀವನದಲ್ಲಿ ಹೇಗಿರಬೇಕೆಂಬ ನಡತೆಗಳನ್ನು ಹೇಳಿಕೊಟ್ಟಿದ್ದಾರೆ.
 2014 -15ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕೊರತೆಯನ್ನು ಕಂಡ ಇವರು ಒಂದನೇ ತರಗತಿಯಲ್ಲಿ ಬರುವ ಮಕ್ಕಳಿಗೆ ಒಂದು ಸಾವಿರ ರೂಪಾಯಿಗಳ ಬಾಂಡನ್ನು ಕೊಡುತ್ತಾರೆ. ಕ್ರಮೇಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಲಿಗ್ಗೇರಿಯಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಲೇ ಹೋಯಿತು. ಕ್ರಮೇಣ ಈ ವಿಷಯ ರಾಜ್ಯದೆಲ್ಲೆಡೆ ಹರಡಿತು ಶಿಕ್ಷಣ ಸಚಿವರಿಂದ ಮೆಚ್ಚುಗೆ ವ್ಯಕ್ತವಾಯಿತು. ಈಗ ನಾನು ಎಲ್ಲೇ ಹೋದರು ರೇಖಾ ಟೀಚರ್ ಎಂಬುವವರು ನಿಮ್ಮ ಟೀಚರ್ ಅಲ್ಲವೇ ಎಷ್ಟೊಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನನ್ನ ಬಳಿ ಹೇಳುತ್ತಾರೆ.. ಇಷ್ಟು ಸಾಕಲ್ಲವೇ ಒಬ್ಬ ವಿದ್ಯಾರ್ಥಿನಿಯಾಗಿ ಇವರ ಬಗ್ಗೆ ಹೆಮ್ಮೆ ಪಡಲು... ಇವರಲ್ಲಿರುವ ಒಂದು ವಿಶೇಷ ಗುಣ ಅಥವಾ ನನಗೆ ಇಷ್ಟವಾದ ಗುಣವೆಂದರೆ ನಿರೂಪಣೆ ಅಷ್ಟೊಂದು ಸುಂದರವಾದ ಇಂಪಾದ ಧ್ವನಿ ನಮ್ಮಟೀಚರ್ದು. ಇಂತಹ ಗುಣವಿರುವ ಯಾರು ಜೀವನಕ್ಕೆ ಸ್ಫೂರ್ತಿ ಆಗುವುದಿಲ್ಲ ಹೇಳಿ. ನಾನು ಮತ್ತೊಮ್ಮೆ ಹೇಳುವೆ ಇವರು ನನ್ನ ಜೀವನದ ಅತಿ ದೊಡ್ಡ ಸ್ಫೂರ್ತಿ. ತುಂಬ ತುಂಬಾನೆ ಧನ್ಯವಾದಗಳು ಟೀಚರ್ ನಿಮ್ಮ ಈ ಪ್ರೀತಿ ನಂಬಿಕೆಗೆ . ನೀವು ಹೀಗೆ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಿ ಇನ್ನಷ್ಟು ಒಳ್ಳೆ ಕೆಲಸ ಮಾಡುವಂತಾಗಲಿ ಮತ್ತೊಮ್ಮೆ ಧನ್ಯವಾದಗಳು  
............................................... ತ್ರಿಶಾ ಎಸ್
ಸರಕಾರಿ ಪ್ರೌಢಶಾಲೆ ನಗರ 
ಹೊಸನಗರ ತಾಲೂಕು , ಶಿವಮೊಗ್ಗ ಜಿಲ್ಲೆ     
********************************************   
                


ನಮಸ್ತೆ ......
ನನ್ನ ಹೆಸರು ಮಾಣಿಕ್ಯ. ನಾನು ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಪುತ್ತೂರು ತಾಲೂಕು ಇಲ್ಲಿ ಓದುತ್ತಿದ್ದೇನೆ.
          ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೆ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಅದು ಶಿಕ್ಷಕರು. ವಿದ್ಯೆ, ಜ್ಞಾನ, ಮಾಹಿತಿ ಪಡೆಯುವುದು ಈಗ ಸುಲಭವಾದರೂ, ಅದರಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳಲು ಗುರುವೊಬ್ಬರ ಅಗತ್ಯ ಇದ್ದೇ ಇದೆ.   ನನ್ನ ಎಲ್ಲಾ ಶಿಕ್ಷಕರು ನನಗೆ ಪ್ರಿಯರೆ. ಅದರಲ್ಲೂ ನಾನು ಮೆಚ್ಚಿದ ಶಿಕ್ಷಕರು ಎಂದರೆ ಶ್ರೀ ಜಗನ್ನಾಥ್ ಸರ್ ಹಾಗೂ ಶ್ರೀ ವಿವೇಕ್ ಸರ್ 
ನನಗೆ ಚಿತ್ರಕಲೆಯನ್ನು ಶ್ರೀ ಜಗನ್ನಾಥ್ ಸರ್ ಹಾಗೂ ಕೊಳಲು ನುಡಿಸುವುದನ್ನು ಶ್ರೀ ವಿವೇಕ್ ಸರ್ ಕಲಿಸಿಕೊಡುತ್ತಿದ್ದಾರೆ. ಶ್ರೀ ಜಗನ್ನಾಥ್ ಸರ್, ನಾನು ಮಾಡಿದ ಚಿತ್ರಗಳು ಮಕ್ಕಳ ಜಗಲಿ ಪತ್ರಿಕೆಯಲ್ಲಿ ಪ್ರಕಟವಾಗಲು ಕಾರಣರಾಗಿರುತ್ತಾರೆ. ಇದು ನನಗಿದ್ದ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಸರಳತೆ, ತಾಳ್ಮೆ , ಸಹನೆಯಿಂದ ಹೇಳಿಕೊಡುವ ಈ ಇಬ್ಬರೂ ಶಿಕ್ಷಕರು ನನಗೆ ಅಚ್ಚುಮೆಚ್ಚು. ನನ್ನಲ್ಲಿನ ಸರಿ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿಕೊಡುವ ರೀತಿ, ವಿದ್ಯಾರ್ಥಿ ಜೊತೆ ಬೆರೆತು ಪ್ರೀತಿಯಿಂದ ಹೇಳಿಕೊಡುವ ಗುರುಗಳಾಗಿದ್ದಾರೆ. ಇವರೆಂದರೆ ನನಗೆ ಬಲು ಪ್ರೀತಿ. ನನ್ನ ಯೋಚನೆಗೆ ಸರಿಯಾದ ದಿಕ್ಕನ್ನು ತೋರಿಸಿದ, ನನ್ನ ಕನಸುಗಳಿಗೆ ಇನ್ನಷ್ಟು ಬಣ್ಣ ಹಚ್ಚಿ, ನನಗೆ ಸ್ಪೂರ್ತಿ ನೀಡುತ್ತಿರುವ ಶಿಕ್ಷಕರಾಗಿ ಈ ಇಬ್ಬರೂ ನನ್ನ ಮನಃಪಟಲದಲ್ಲಿ ಉಳಿದಿದ್ದಾರೆ ಇನ್ನು ಮುಂದೆಯೂ ಉಳಿದಿರುತ್ತಾರೆ.
             ನನ್ನ ಎಲ್ಲಾ ಶಿಕ್ಷಕರಿಗೂ ಹಾಗೂ ನಾನು ಮೆಚ್ಚಿದ ಈ ಇಬ್ಬರೂ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆ ಶುಭಾಶಯಗಳನ್ನು ಕೋರುತ್ತಾ ನನ್ನ ಮನದಾಳದ ಮಾತುಗಳಿಗೆ ಪೂರ್ಣವಿರಾಮ ಹಾಕುತ್ತೇನೆ.
................................................... ಮಾಣಿಕ್ಯ. 
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಪುತ್ತೂರು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



     ನನ್ನ ನೆಚ್ಚಿನ ಶಿಕ್ಷಕರ ಬಗ್ಗೆ ಮನದಾಳದ ಮಾತು
ನಮಸ್ಕಾರ ನಾನು ನಿಮ್ಮೆಲ್ಲರ ಪ್ರೀತಿಯ : ಎಚ್ ಅನುಶ್ರೀ ಕೋಟ್ಯಾನ್
         ನನ್ನ ಈ ವಿದ್ಯಾರ್ಥಿ ಜೀವನದಲ್ಲಿ ನಾನು ಸಾಕಷ್ಟು ಶಿಕ್ಷಕರನ್ನು ನೋಡಿದ್ದೇನೆ. ನನಗೆ ಸಿಕ್ಕಿರುವ ಶಿಕ್ಷಕರೆಲ್ಲರೂ ನನಗೆ ತುಂಬಾ ಚೆನ್ನಾಗಿ ವಿದ್ಯೆ ಕಲಿಸಿದ್ದಾರೆ. ನಾನು ನನ್ನ ಎಲ್ಲಾ ಶಿಕ್ಷಕರಿಗೆ ಚಿರಋಣಿ ಆಗಿರುವೆ. ನನ್ನ ನೆಚ್ಚಿನ ಶಿಕ್ಷಕಿಯಾಗಿರುವ ಆಶಾಲತಾ ಟೀಚರ್. 
   ಇವರು ನಾವು ಹತ್ತನೇ ತರಗತಿಯಲ್ಲಿರುವಾಗ ನಮ್ಮ ಶಾಲೆಗೆ ಬಂದರು. ಇವರಿಗೆ ಎಲ್ಲವೂ ಗೊತ್ತಿತ್ತು. ಹಾಡು ಹೇಳುವುದು, ಕಥೆ ಹೇಳುವುದು, ಮುಂತಾದವು. ನಮಗೆ ಇಂಗ್ಲಿಷ್ ಪಾಠವನ್ನು ಚೆನ್ನಾಗಿ ಮಾಡುತ್ತಿದ್ದರು. ಇವರು ಇಂಗ್ಲೀಷ್ ಗ್ರಾಮರ್ ಅನ್ನು ಪಾಯಿಂಟ್ ಪಾಯಿಂಟ್ ಆಗಿ ಹೇಳಿಕೊಡುತ್ತಿದ್ದರು. ಇವರು ಎಲ್ಲಾ ಮಕ್ಕಳೊಂದಿಗೆ ಪ್ರೀತಿ ವಾತ್ಸಲ್ಯದಿಂದ ಮಾತನಾಡುತ್ತಾರೆ. ನಾವು ಹತ್ತನೇ ತರಗತಿಯಲ್ಲಿರುವಾಗ ಗ್ರಾಮರ್ ಪಾಯಿಂಟುಗಳನ್ನು ಮತ್ತು ಪಾಠಗಳನ್ನು ಅದರಲ್ಲಿ ಬರುವ ಪ್ರಶ್ನೆಗಳನ್ನು ಅರ್ಥಮಾಡಿ ಹೇಳಿಕೊಡುತ್ತಿದ್ದರು. ಎಸೆಸೆಲ್ಸಿಯಲ್ಲಿ ಅಂಕ ಬರಬೇಕೆಂದು ಎಲ್ಲಾ ಶಿಕ್ಷಕರು ತುಂಬಾ ಕಷ್ಟ ಪಟ್ಟಿದ್ದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳೊಡನೆ ಮಕ್ಕಳಂತೆ ಇರುತ್ತಿದ್ದರು. ಜೀವನದಲ್ಲಿ ವಿದ್ಯೆ ಕಲಿತು ಏನಾದರೂ ಸಾಧಿಸಬೇಕೆಂದು ಹೇಳಿಕೊಡುತ್ತಿದ್ದರು. ನನಗೆ ವಿದ್ಯೆ ಕಲಿಸಿದ ಎಲ್ಲಾ ಶಿಕ್ಷಕರಿಗೆ ಧನ್ಯವಾದಗಳು.
ನನ್ನ ಪ್ರೀತಿಯ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು...
............................ಎಚ್ ಅನುಶ್ರೀ ಕೋಟ್ಯಾನ್
ಪ್ರಥಮ ಪಿಯುಸಿ
ಪದವಿ ಪೂರ್ವ ಕಾಲೇಜು ಕೊಕ್ರಾಡಿ
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************



           ಶಿಕ್ಷಕರ ದಿನಾಚರಣೆಯ
    ಶುಭಾಶಯಗಳು : ಫಾತಿಮತ್ ಸಿಫಾನ 
ಮಕ್ಕಳ ಜಗಲಿಯ ಮೂಲಕ ನನ್ನ ಕಿರು ನೆನಪು... ಜೀವ ಕೊಟ್ಟವರು ಹೆತ್ತವರಾದರು. ಜೀವನದ ಪಾಠ ಹೇಳಿ ಕೊಟ್ಟವರು ಶಿಕ್ಷಕರು. ತಪ್ಪು ದಾರಿ ತಡೆದು ಸರಿ ದಾರಿ ಕಲಿಸಿ ಕೊಟ್ಟು ಪೋಷಕರಂತೆ ಪ್ರೀತಿ ಸ್ನೇಹಿತರಂತೆ ಜೊತೆಗೂಡಿ ಸೋಲು ಗೆಲುವಿಗೆ ಧೈರ್ಯ ತುಂಬಿದ ನನ್ನ ಗುರುಗಳಿಗೆ ನಮನ. ಪ್ರತಿಬಾ ಕಾರಂಜಿ ಇನ್ನಿತರ ಸ್ಪರ್ಧೆಗಳಿಗೆ ಭಾಗವಹಿಸುವಂತೆ ನನ್ನನ್ನು ಪ್ರೋತ್ಸಾಯಿಸಿ ನಾನು ಭಾಗವಯಿಸಿ ನಾನು ಪ್ರಥಮ ದ್ವಿತಿಯ ಸ್ಥಾನ ಪಡೆದಾಗ ಸಂತೋಷ ಕೊಟ್ಟಂತಹ ಸಂಧರ್ಭಗಳನ್ನು ಮರೆಯಲಾಗುತ್ತಿಲ್ಲ. ಶಾಲೆಯಿಂದ ಪ್ರವಾಸಕ್ಕೆ ಶಿಕ್ಷಕರ ಜೊತೆ ಹೋದಂತಹ ನೆನಪುಗಳೆಲ್ಲ ಅಲ್ಲಿ ಪಡೆದಂತಹ ಸಂತೋಷ ಕೆಲವು ಅನುಭವಗಳು ಮಕ್ಕಳ ಜಗಲಿಯಿಂದ ಮರು ನೆನಪಾಯಿತು. ನಾನು ಒಂದನೇ ತರಗತಿಯಿಂದ ಏಳನೇ ತರಗತಿಯವರಗೂ ಇದ್ದಂತಹ, ಕೀರ್ತಿ ಟೀಚರವರು ಪ್ರಸಾದ್ ಸರ್. ನಾಲ್ಕನೇ ತರಗತಿಯಿಂದ ದಾಮೋದರ್ ಸರ್ ಹಾಗೂ ಸವಿತಾ ಟೀಚರ್ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಪೈಮರಿ ಸ್ಕೂಲ್ ಕಳೆದು ಹೈಸ್ಕೂಲು ಮೆಟ್ಟಿಲು ಹತ್ತಿದಾಗ ಅಲ್ಲಿ ಸಹ ತುಂಬಾ ಪ್ರೀತಿಯಿಂದ ಶಿಕ್ಷಕರು ಬರ ಮಾಡಿಕೊಂಡರು. ಶಿಕ್ಷಕರು ನನ್ನ ಕಲಿಕೆಗೆ ಇನ್ನು ಪ್ರೊತ್ಸಾಯಿಸಿದರು. ಕಳೆದೆರಡು ವರ್ಷಗಳಿಂದ ಕೊರೊನಾ ಎಂಬ ರೋಗದಿಂದ ಶಾಲೆಗಳು ತೆರೆಯದಿದ್ದರು ಮಕ್ಕಳ ಜಗಲಿಯನ್ನು ನನಗೆ ಪರಿಚಯಿಸಿದ ಪ್ರೋತ್ಸಾಹಿಸುವ ನನ್ನ ಭಾರತಿ ಟೀಚರ್ ಗೆ ಹಾಗೂ ಎಲ್ಲಾ ಶಿಕ್ಷಕರಿಗೂ ನಮನಗಳು ಶಿಕ್ಷಕರ ದಿನಾಚರಣೆಯ ಶುಭಾಶಯಗಳು ......
..................................... ಫಾತಿಮತ್ ಸಿಫಾನ 
9 ನೇ ತರಗತಿ 
ಸರಕಾರಿ ಪ್ರೌಢಶಾಲೆಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************




               ಶಿಕ್ಷಕರ ದಿನಾಚರಣೆ : ಸಾಕ್ಷ ಶೆಟ್ಟಿ 
           ------------------------------------ 
          ಮನೆಯಲ್ಲಿ ಹೆತ್ತವರು ನಮ್ಮನ್ನು ಸಾಕುವರು.
ಶಾಲೆಯಲ್ಲಿ ಗುರುಗಳು ವಿದ್ಯೆನೀಡಿ ಸಲಹುವರು.
ಜೀವನದ ಹಾದಿಯ ತೋರುವರು ತಪ್ಪುಗಳ ತಿದ್ದಿ ಸರಿಯಾದ ಪಾಠ ಕಲಿಸುವರು ನಮ್ಮ ಶಿಕ್ಷಕರು.
        ನನ್ನೆಲ್ಲಾ ಶಿಕ್ಷಕರಿಗೆ ಹಾರ್ದಿಕ ಶುಭಾಶಯಗಳು
ಹೆಸರು : ಸಾಕ್ಷ ಶೆಟ್ಟಿ 
ತರಗತಿ : ಏಂಟನೇ ತರಗತಿ
ಶಾಲೆ : ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ - 574211
*********************************************



              ಶಿಕ್ಷಕರ ದಿನಾಚರಣೆ : ನಿಭಾ
ನಾವು ನಮ್ಮ ಶಾಲೆಯ ಶಿಕ್ಷಕರಿಗೆ ಶ್ರದ್ಧೆಯಿಂದ ನಮಿಸುತ್ತೇವೆ. ಹಾಗೆಯೇ ಅವರು ಕೂಡ ನಮ್ಮನ್ನು ತುಂಬಾ ಪ್ರೀತಿಸುತ್ತಾರೆ.  ಮಕ್ಕಳ ಬಗ್ಗೆ ಗುರುವಿನ ಜವಾಬ್ದಾರಿ ಗುರುತರವಾದುದು. ಮಕ್ಕಳು ಅವರ ಕೈಯಲ್ಲಿ ಹಸಿಯ ಜೇಡಿ ಮಣ್ಣು ಇದ್ದಂತೆ. ಈ ಸಮಯದಲ್ಲಿ ಅದಕ್ಕೆ ಸುಂದರವಾದ, ಉಪಯುಕ್ತ ರೀತಿಯ ಆಕೃತಿಯನ್ನು ನೀಡಿ, ತಿದ್ದುವವರು ಗುರುಗಳೇ.  ಕಳೆದೆರಡು ವರ್ಷದಿಂದ  ಕೊರೋನಾದಿಂದ ಉಂಟಾದ online ಕ್ಲಾಸ್. ನಮಗೂ ನಮ್ಮ ಶಿಕ್ಷಕರನ್ನು ನೋಡಬೇಕೆಂದು ಅನಿಸುತ್ತದೆ. ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ನಮ್ಮನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ನಾವು ಕೂಡ ಅವರನ್ನು ಅಷ್ಟೇ ಅಭಿಮಾನದಿಂದ ಕಾಣುತ್ತೆವೆ. ಆದಷ್ಟು ಬೇಗ ದೇಶಕ್ಕೆ ಬಂದಿರುವ ಸಂಕಷ್ಟ ದೂರವಾಗಿ ಶಾಲೆ ಮೊದಲಿನಂತೆ ಪ್ರಾರಂಭವಾಗಿ ನಾವು ಆದಷ್ಟು ಬೇಗ ಶಿಕ್ಷಕರನ್ನು ಕಾಣುವಂತಗಲಿ ಎಂದು ಹೇಳಲು ಇಚ್ಛಿಸುತ್ತೇನೆ.

........................................................... ನಿಭಾ
8 ನೇ ತರಗತಿ
ಸ. ಹಿ. ಪ್ರಾ. ಶಾಲೆ. ನೇರಳಕಟ್ಟೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************




         ಎಲ್ಲರಿಗೂ ನಮಸ್ತೆ : ಶರಣ್ಯ
ನನ್ನ ಬದುಕಿಗೆ ಸ್ಪೂರ್ತಿ ನೀಡಿದ ನನ್ನ ನೆಚ್ಚಿನ ಶಿಕ್ಷಕರೆಂದರೆ ಅದು ನನ್ನ ಒಂದನೇ ತರಗತಿ 
ಶಿಕ್ಷಕರಾಗಿದ್ದ ವಿಜಯಮ್ಮ . ಅವರೆಂದರೆ ನನಗೆ ಬಹಳ ಇಷ್ಟ.. ಅವರಿಂದ ವಿದ್ಯೆಯನ್ನು ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳು ಇಂದು ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ.. ಅವರು ಯಾರಿಗೆಲ್ಲ ನೆನಪಾಗಿದ್ದಾರೋ ಗೊತ್ತಿಲ್ಲ ಆದರೆ ನಾನು ನನ್ನ ಜೀವನದುದ್ದಕ್ಕೂ ಅವರನ್ನು ನೆನಪಿಸಿಕೊಳ್ಳುತ್ತೇನೆ.. ಅವರಿಂದ ನಾನು ಮೂರನೇ ತರಗತಿ ವರೆಗೆ ಕಲಿತಿದ್ದಾದರೂ ನನಗೆ ಅವರು ಮೂರು ವರ್ಷಗಳಲ್ಲಿ ಅವರು ನನಗೆ ಬಹಳ ಇಷ್ಟವಾದರು.. ನಾನು ಅವರ ತರಗತಿಯಲ್ಲಿ ಇದ್ದಷ್ಟೂ ದಿನ ನನಗೆ ಒಂದು ದಿನವೂ ಬೈದಿರಲ್ಲಿಲ್ಲ.. ನನಗೆ ಅವರ ಮೇಲೆ ಇಂದಿಗೂ ಕೂಡ ಅದೇ ಗೌರವವಿದೆ. ಅದಕ್ಕಾಗಿ ಅವರಿಗೆ ನಾನು ಈ ಮೂಲಕ ಧನ್ಯವಾದವನ್ನು ತಿಳಿಸುತ್ತಿದ್ದೇನೆ.....
................................................ ಶರಣ್ಯ. ಬಿ 
9ನೇ ತರಗತಿ 
ಮುಂಡಾಜೆ ಫ್ರೌಢ ಶಾಲೆ ಮುಂಡಾಜೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************



    ನನ್ನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ                       ಹಾರ್ದಿಕ ಶುಭಾಶಯಗಳು : ರಶ್ಮಿ.ಎ
             ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಯನ್ನು ಸರ್ವಪಲ್ಲಿ ರಾಧಕೃಷ್ಣ ಅವರ ಜನ್ಮ ದಿನದಂದು ಆಚರಿಸಲಾಗುವುದು. ಒಂದೊಂದು ಅಕ್ಷರ ಕಲಿಸಿದ ಶಿಕ್ಷಕರನ್ನು ಗೌರವಿಸುವುದು ಸಂಸ್ಕಾರ.
"ವಿದ್ಯೆ ಕಲಿಸಿದ ಗುರುಗಳನ್ನು ಯಾವತ್ತು ಮರೆಯಬಾರದು"
ಧನ್ಯವಾದಗಳು.
..........................................................ರಶ್ಮಿ.ಎ
ತರಗತಿ:9
ಶಾಲೆಯ ವಿಳಾಸ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ
ತಾಲೂಕು: ಕಡಬ
ಜಿಲ್ಲೆ: ದಕ್ಷಿಣ ಕನ್ನಡ
**********************************************






Ads on article

Advertise in articles 1

advertising articles 2

Advertise under the article