
ಪ್ರಕೃತಿ - ಲೇಖನ
Thursday, July 29, 2021
Edit
ಯಶಶ್ವಿ 10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರಕೃತಿ - ಲೇಖನ
*****************************************
ಪ್ರಕೃತಿ..... ಈ ಪದವನ್ನು ಕೇಳಲು ಒಂದು ಖುಷಿ. ಪ್ರಕೃತಿಯು ಹಲವಾರು ರೀತಿಯಲ್ಲಿ ನಮಗೆ ಉಪಯುಕ್ತವಾಗಿದೆ. ಪ್ರಕೃತಿಯಿಂದ ನಮಗೆ ಉಸಿರಾಡಲು ಗಾಳಿ, ಕುಡಿಯಲು ನೀರು ಇನ್ನೂ ಅನೇಕ ರೀತಿಯಲ್ಲಿ ಪ್ರಕೃತಿಯು ನಮಗೆ ಸಹಾಯ ಮಾಡುತ್ತದೆ. ಈ ಪ್ರಕೃತಿಯಲ್ಲಿ ಯಾವುದೇ ಸ್ವಾರ್ಥವಿಲ್ಲ. ಮನುಷ್ಯರೇ ಪ್ರಕೃತಿಯಿಂದ ಹಲವಾರು ಉಪಯೋಗಗಳನ್ನು ಪಡೆದುಕೊಂಡು ಸ್ವಾರ್ಥ ಹಾಗೂ ದುರಾಸೆಯಿಂದ ಹಲವಾರು ಮರಗಳನ್ನು ಕಡಿಯುತ್ತಾರೆ. ನಾವು ಒಂದು ಹಣ್ಣಿನ ಗಿಡವನ್ನು ನೆಟ್ಟರೆ ಅದು ದೊಡ್ಡ ಮರವಾಗಿ ನಮಗೆ ತಿನ್ನಲು ರುಚಿಯಾದ ಹಣ್ಣನ್ನು ಕೊಡುತ್ತದೆ.
ಈ ಪ್ರಕೃತಿ ಎನ್ನುವುದು ಒಂದು ನಿಸ್ವಾರ್ಥಿ. ಯಾರಿಂದಲೂ ಯಾವ ಅಪೇಕ್ಷೆಯನ್ನು ಬಯಸುವುದಿಲ್ಲ. ಇದಕ್ಕೆ ಉದಾಹರಣೆ ಎಂದರೆ ನಾವು ಗಿಡಗಳನ್ನು ನೆಟ್ಟು ಪೋಷಿಸಿದರೆ ಮುಂದೆ ಅದು ದೊಡ್ಡ ಮರವಾಗಿ ಎಲ್ಲರಿಗೂ ನೆರಳನ್ನು ಕೊಡುತ್ತದೆ.
ನಮ್ಮ ಮನೆಯ ಸುತ್ತಮುತ್ತ ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿದರೆ ನಮ್ಮ ಪರಿಸರ ತುಂಬಾ ಸುಂದರವಾಗಿರುತ್ತದೆ. ನಮ್ಮ ಪರಿಸರ ಹಚ್ಚ ಹಸುರಾಗಿರುತ್ತದೆ. ಆಗ ಈ ಪರಿಸರವನ್ನು ನೋಡುವಾಗ ತುಂಬಾ ಖುಷಿಯಾಗುತ್ತದೆ.
.......................ಯಶಶ್ವಿ 10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************