
ಮೀನು ಮತ್ತು ಎರಡು ಬೆಕ್ಕುಗಳು - ಚಿತ್ರಕಥೆ - 6
Monday, July 5, 2021
Edit
ನಿನಾದ್ ಕೈರಂಗಳ್
4ನೇ ತರಗತಿ - ಶಿವಾಜಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಮೀನು ಮತ್ತು ಎರಡು ಬೆಕ್ಕುಗಳು - ಚಿತ್ರಕಥೆ - 6
ಒಂದು ಊರಿನಲ್ಲಿ ಒಂದು ಬೆಕ್ಕು ಇತ್ತು. ಅದು ಯಾವಾಗಲೂ ಮೀನನ್ನು ಕಳ್ಳತನ ಮಾಡುತ್ತಿತ್ತು. ಒಂದು ದಿನ ಒಂದು ಮನೆಗೆ ಮೀನನ್ನು ಕದಿಯಲು ಹೋಗುವಾಗ ರಸ್ತೆಯಲ್ಲಿ ಇನ್ನೊಂದು ಬೆಕ್ಕು ಅದನ್ನು ನಿಲ್ಲಿಸಿತು.
ಆ ಬೆಕ್ಕು ನೀನು ಎಲ್ಲಿಗೆ ಹೋಗುತ್ತಿರುವೆ ? ಅಂತ ಕೇಳಿತು.
ನಾನು ಮೀನನ್ನು ಕದಿಯಲು ಹೋಗುತ್ತಿದ್ದೇನೆ..... ಎಂದು ಹೇಳಿತು .
ಆಗ ಆ ಬೆಕ್ಕು ...... ನೀನು ... ಮೀನನ್ನು ಕದಿಯಬೇಡ ಅಂತ ಹೇಳಿತು.
ಅದನ್ನು ಕೇಳಿದ ಬೆಕ್ಕು ಒಪ್ಪಲೇ ಇಲ್ಲ. ಅದು ಸೀದಾ ಹೋಯಿತು. ಮೀನನ್ನು ಕದಿಯುತ್ತಿರುವಾಗ ಮನೆಯವರು ಆ ಬೆಕ್ಕಿಗೆ ಬೆತ್ತ ತಗೊಂಡು ಸರೀ... ಹೊಡೆದರು. ಓಡಿಕೊಂಡು ಬರುವಾಗ ಮೊದಲಿನ ಬೆಕ್ಕು ಸಿಕ್ಕಿತು.
ನಾನು ಹೇಳಿಲ್ವಾ ಕದಿಯುವುದು ಒಳ್ಳೆಯದಲ್ಲ ಅಂತ ಅಂದಿತು .....
ಆಮೇಲೆ ಆ ಬೆಕ್ಕು ಒಳ್ಳೆಯ ಬೆಕ್ಕಾಯಿತು.....!!!
.........................ನಿನಾದ್ ಕೈರಂಗಳ್
4ನೇ ತರಗತಿ - ಶಿವಾಜಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ