-->
ಹಸಿರು ಯೋಧರು - 36

ಹಸಿರು ಯೋಧರು - 36

ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ 
ಹಸಿರು ಯೋಧರು - 36ಜಿ.ಎಂ ಅಕ್ಷರ ಶ್ಯಾಮ 5ನೆ ತರಗತಿ
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ವಿಟ್ಲ. ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಾಲುವಾಣ ಗಿಡ
      ಮನೆಗಳ ಆವರಣದ ಬದಿಗಳಲ್ಲಿ ಅಥವಾ ಗುಡ್ಡ, ತೋಟಗಳಲ್ಲಿ ಕಂಡು ಬರುವ ಹಾಲುವಾಣ ಅಥವಾ ಹೊಂಗಾರೆ ಮರ ಬಹೂಪಯೋಗಿ ಸಸ್ಯ.
         ಮುಳ್ಳು ಮರಿಗೆ, ಮುಳ್ಳು ಮುತ್ತುಗ, ಪಾರಿ ಭದ್ರ ಎಂಬೆಲ್ಲ ಹೆಸರಿರುವ ಹಾಲುವಾಣವನ್ನು ತುಳು ಭಾಷೆಯಲ್ಲಿ ಪೊಂಗಾರೆ ಎಂದು ಕರೆಯುತ್ತಾರೆ.
     ಎರಿತ್ರಿನಾ ವರಿಗೆಟ ಎಂಬ ಸಸ್ಯ ಶಾಸ್ತ್ರೀಯ ಹೆಸರುಳ್ಳ ಹೊಂಗಾರೆ ಮರವು ಪ್ಯಾಪಿಲೋಸಿಯೇಸಿಯೇ ಕುಟುಂಬದ್ದು. 
          ಹೊಂಗಾರೆ ಸೊಪ್ಪನ್ನು ವಿವಿಧ ರೀತಿಯಲ್ಲಿ ಔಷಧಿಗಾಗಿ ನಾಟಿ ವೈದ್ಯರ ಸಲಹೆಯಂತೆ ಬಳಸುತ್ತಾರೆ.
              ಬಾಣಂತಿಯರಿಗೆ, ಮಹಿಳೆಯರಿಗೆ ಈ ಸೊಪ್ಪಿನ ಲೇಪನ, ರಸ ಔಷಧಿಯಾಗಿ ಬಳಸಬಹುದು ಎಂದು ಸಸ್ಯತಜ್ಞರು ಹೇಳುತ್ತಾರೆ. ಮೃದುವಾದ ಈ ಮರದಿಂದ ಮಕ್ಕಳ ಆಟಿಕೆ ತಯಾರಿಸುತ್ತಾ ಪರಿಸರ ಸಮೃದ್ಧಿಗೆ ನೆರವು ನೀಡುವ ಹೊಂಗಾರೆ ಸ್ವಚ್ಛ ಗಾಳಿಗೂ ಪೂರಕ. ಇದೊಂದು ಔಷಧೀಯ, ಆಹಾರ್ಯ ಸಸ್ಯ. ಇದರ ಎಳೆ ಸೊಪ್ಪಿನಿಂದ ಚಟ್ನಿ, ತಂಬುಳಿ ಮಾಡುತ್ತಾರೆ. ಸೊಪ್ಪನ್ನು ಬಳಸಿ ಸಿಹಿ ಕಡುಬು ಮಾಡುವ ಕ್ರಮವೂ ಇದೆ. ಜಾನುವಾರುಗಳಿಗೆ ಈ ಸೊಪ್ಪು ಉತ್ತಮ ಮೇವು.

 


ಅಪೇಕ್ಷಾ .ಎನ್ 7ನೆ ತರಗತಿ 
ಸುದಾನ ವಸತಿಯುತ ಶಾಲೆ ನೆಹರು ನಗರ 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕರಿಬೇವು ಗಿಡ 
        ಇದರಲ್ಲಿ ಕ್ಯಾಲ್ಸಿಯಂ , ಪ್ರೋಟೀನ್, ಪೈಬರ್, ವಿಟಮಿನ್ ಸಿ, ಕಬ್ಬಿನಂಶ ಇದೆ ಇದನ್ನು ಅಡುಗೆ ಮಾಡುವ ಪದಾರ್ಥ ದಲ್ಲಿ ಬಳಸಿದರೆ ತುಂಬಾ ಒಳ್ಳೆಯದು.  ಕರಿಬೇವು ಗಿಡಗಳನ್ನು ಬೆಳೆಸುವುದು ತುಂಬಾ ಸುಲಭ... ಒಂದು ಗೋಣಿ ಚೀಲದಲ್ಲಿ ನೆಟ್ಟು ಅದನ್ನು ಮತ್ತೆ ನೆಲದಲ್ಲಿ ನೆಟ್ಟರೆ ತುಂಬಾ ದೊಡ್ಡ ಮರವಾಗಿ ಬೆಳೆಯತ್ತದೆ ಕರಿಬೇವಿನ ಎಲೆಯನ್ನು ತಿಂದರೆ ಗ್ಯಾಸ್ ಟ್ರಬಲನ್ನು ತಡೆಯಬಹುದು. ಹೊಟ್ಟೆ ಉಬ್ಬರಿಕೆಯನ್ನು ತಡೆಯಬಹುದು , ವಾಕರಿಕೆ ಬರವವರಿಗೆ ಕರಿಬೇವಿನ ರಸ ಮತ್ತುನಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿ ಕುಡಿದರೆ ವಾಕರಕೆ ಬರುವುದನ್ನುತಡೆಯಬಹುದು. ಕೂದಲು ಕಪ್ಪಗೆ ಮತ್ತು ಉದ್ದವಾಗಿ ಬೆಳೆಯಲು ಕರಿಬೇವುವನ್ನು ತೆಂಗಿನ ಎಣ್ಣೆಯಲ್ಲಿ ಬಿಸಿ ಮಾಡಿ ಬಳಸಬಹುದು. 

ಲಿಖಿತ್      ಐದನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಲಕಟ್ಟೆ
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ದೊಡ್ಡಪತ್ರೆ
          ದೊಡ್ಡಪತ್ರೆ,ಕರ್ಪೂರವಲ್ಲಿ, (Indian Borage) ಸಂಸ್ಕೃತದಲ್ಲಿ ಮಹಾಪತ್ರ ಎಂದು ಕರೆಯುತ್ತಾರೆ. 
ಗಿಡಮೂಲಿಕೆಗಳಲ್ಲಿ ದೊಡ್ಡಪತ್ರೆಯ ಒಂದು. ಇದನ್ನು ಸಂಬರ್ ಸೊಪ್ಪು ಎಂದು ಹೇಳುತ್ತಾರೆ. ದೊಡ್ಡಪತ್ರೆ ಸೊಪ್ಪು ಆರೋಗ್ಯಕ್ಕೆ ತುಂಬಾ ಉಪಯೋಗವಾಗಿದೆ. ಇದು ಶೀತ, ಪಿತ್ತ, ಕಾಯಿಲೆಯನ್ನು ಶಮನ ಮಾಡುತ್ತದೆ. ಮಕ್ಕಳಲ್ಲಿ ಕಂಡುಬರುವಂತಹ ಅಲರ್ಜಿ, ಶೀತ, ಕೆಮ್ಮು, ತುರಿಕೆ ಗಳಿಗೆ ಇದು ರಾಮಬಾಣ. ಇದರಿಂದ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಇದರ ಎಲೆಗಳನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡರೆ ಸೋಪ್ ಗಳನ್ನು ತಯಾರಿಸಬಹುದು. ಚಿಕ್ಕ ಮಕ್ಕಳಿರುವ ಮನೆಯಲ್ಲಿ ಈ ಗಿಡ ತುಂಬಾ ಉಪಯೋಗಕ್ಕೆ ಬರುತ್ತದೆ. ಮಕ್ಕಳಿಗೆ ಅಜೀರ್ಣವಾದರೆ ದೊಡ್ಡಪತ್ರೆ ಎಲೆಯ ರಸವನ್ನು ತೆಗೆದು ಅದಕ್ಕೆ ಒಂದು ಹನಿ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ. ಪ್ರತಿದಿನ ದೊಡ್ಡಪತ್ರೆಯ ಎಲೆಯನ್ನು ಸೇವಿಸುವುದರಿಂದ ಶೀತ, ಕೆಮ್ಮು, ತುರಿಕೆ, ಗಂಟಲು ನೋವು ,ಕಫ ಕಟ್ಟುವುದು, ಕೆಮ್ಮು, ಇವೆಲ್ಲವನ್ನು ನಿವಾರಿಸಬಹುದು. ಇದರ ಚಹಾ ಮಾಡಿ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ, ತಲೆನೋವಿನ ಸಮಸ್ಯೆ, ಕಡಿಮೆಯಾಗುತ್ತದೆ. ಈ ದೊಡ್ಡ ಪತ್ರೆಯಲ್ಲಿ ವಿಟಮಿನ್ ಸಿ ಮತ್ತು ಎ ಅಂಶ ಜಾಸ್ತಿ ಇದ್ದು ಇದು ಕಣ್ಣುಗಳಲ್ಲಿನ ದೃಷ್ಟಿ ದೋಷವನ್ನು ಕಡಿಮೆ ಮಾಡುತ್ತದೆ. ಆದರೆ ಇದನ್ನು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಇದರ ಸೇವನೆಯನ್ನು ಮಾಡಬಾರದು. ಈ ದೊಡ್ಡಪತ್ರೆಯ ಗಿಡವನ್ನು ಎಲ್ಲಿ ಯು ಬೆಳೆಸಬಹುದು. ಇದಕ್ಕೆ ಕಡಿಮೆ ನೀರು ಸಾಕಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವೇ ಸೃಷ್ಟಿಯ ಪ್ರತಿಯೊಂದು ಜೀವಿಯ ಆಗರ.
ಸುಪ್ರೀತ್    4ನೆ ತರಗತಿ          
ಕಿರಿಯ ಪ್ರಾಥಮಿಕ ಶಾಲೆ ನಗ್ರಿ. ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ.............                           
 ಗಿಡದ ಹೆಸರು : ಬಾಳೆ ಗಿಡ 
          ಇದು ಹಿತ್ತಿಲಲ್ಲಿ ಹಾಗೂ ತೋಟದಲ್ಲಿ ಬೆಳೆಯುವ ಗಿಡ.  ಇದು ಉದ್ದ ಎಲೆಗಳನ್ನು ಹಾಗೂ ಉದ್ದ ಕಾಂಡವನ್ನು ಹೊಂದಿದೆ.  ಇದರ ಉಪಯೋಗ ಎಲೆಗಳನ್ನು ಊಟಮಾಡಲು ತಿಂಡಿ ತಯಾರಿಸಲು ಉಪಯೋಗಿಸುತ್ತಾರೆ. ದಿಂಡನ್ನು ಹೋಮಕುಂಡ, ಆಹಾರದಲ್ಲಿ ಕೂಡ ಉಪಯೋಗಿಸುತ್ತಾರೆ. ಇದರ ಹಣ್ಣನ್ನು ತಿನ್ನಲು ಉಪಯೋಗಿಸುತ್ತಾರೆ.  ವ್ಯಾಪಾರ ಮಾಡುತ್ತಾರೆ. ಇದು ಒಳ್ಳೆಯ ಔಷಧಿಯ ಗುಣವನ್ನು ಹೊಂದಿದೆ

ಭುವಿ ಪಿ. ಕುಂದರ್   1ನೇ ತರಗತಿ 
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ರಕ್ಷಾ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು: ತುಳಸಿ
         ತುಳಸಿ ಪವಿತ್ರವಾದದ್ದು ಮಾತ್ರವಲ್ಲ; ರೋಗ ನಿರೋಧಕ ಶಕ್ತಿ ಸೇರಿದಂತೆ ತುಳಸಿಯು ಹಲವಾರು ಸತ್ವ ಗಿಡಮೂಲಿಕೆಯ ಅಂಶವನ್ನು ಹೊಂದಿದ್ದು ಎಲ್ಲಾ ತರಹದ ದೇಹದ ಸಮಸ್ಯೆ ಗಳಿಗೆ ಸೂಕ್ತವಾದ ಮದ್ದಾಗಿದೆ.
 ಶಿವಪ್ರಿಯ   3 ನೇ ತರಗತಿ 
ಪದುವಾ ಹಿರಿಯ ಪ್ರಾಥಮಿಕ ಶಾಲೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಾಡುಬಸಳೆ
ಪಂಚಮಿ  ಯು. ಕೆ. ಜಿ 
ಪದುವಾ ನರ್ಸರಿ ಸ್ಕೂಲ್ ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಜ್ಜಿಗೆ ಸೊಪ್ಪು

ಸಾಯಿ ಮನ್ವಿಷ್ ಡಿ. 1ನೇ ತರಗತಿ 
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
ಲಿಯೋನ ಪರ್ಲ್ ರೊಡ್ರಿಗಸ್ 7 ನೇ ತರಗತಿ 
ಸೈಂಟ್ ತೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಲಂಗಾರ್ ಮೂಡಬಿದ್ರೆ 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಪಪ್ಪಾಯಿ ಗಿಡ
 ಕ್ಲಿಸ್ಟನ್ ಲೋಬೋ 5 ನೇ ತರಗತಿ 
ಇನ್ಫ್ಯಾಂಟ್ ಜೆಸುಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್  ಮೊಡಂಕಾಪು ,  ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನುಗ್ಗೆ ಗಿಡಜೀವಿಕಾ ಯಂ. ದೇವಾಡಿಗ    5 ನೇ ತರಗತಿ 
ಸೈಂಟ್ ಥೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಲಂಗಾರು , ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ನಯನ್ ದೀಪ್ 8ನೇ ತರಗತಿ 
ಸೈಂಟ್ ರೀಟ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿಟ್ಲ ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಕೊಕ್ಕೊ ಗಿಡ

 ಭವಿಷ್ ತರಗತಿ 6 ನೇ ತರಗತಿ 
ಸೈಂಟ್ ತೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಲಂಗಾರ್  , ಮೂಡಬಿದ್ರಿ , ದಕ್ಷಿಣ ಕನ್ನಡ ಜಿಲ್ಲೆAds on article

Advertise in articles 1

advertising articles 2

Advertise under the article