ಹಸಿರು ಯೋಧರು - 21
Wednesday, June 16, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ವಿಠಲ ಪದವಿ ಪೂರ್ವ ಕಾಲೇಜು, ಹೈಸ್ಕೂಲ್ ವಿಭಾಗ
ವಿಟ್ಲ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಹಲಸಿನ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಪ್ ಹಲಸಿನ ಹಣ್ಣು ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ. ವಿಟಮಿನ್ ಸಿ ಯನ್ನು ಒಳಗೊಂಡಂತೆ ಹಲಸಿನ ಹಣ್ಣು ಲೀಗಾನ್ಸ್ ಐಸೋಪ್ಲೇವನ್ಸ್ ಮತ್ತು ಸಪೋನಿನ್ಸ್ ನಂತಹ ಫೈಟೋನ್ಯೂಟ್ರಿಯಂಟ್ಸ್ ಅನ್ನು ದೇಹಕ್ಕೆ ಪೂರೈಸುತ್ತದೆ. ಇದು ಕ್ಯಾನ್ಸರ್ ವಿರುದ್ಧ ಮತ್ತು ಬೇಗನೇ ಮುಪ್ಪಿನ ಲಕ್ಷಣಗಳನ್ನು ವರ್ದಿಸುವುದರ ವಿರುದ್ಧ ಹೋರಾಡುತ್ತದೆ. ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ.
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆಗಿಡ
ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ
ವಿಟ್ಲ , ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದಾಸವಾಳ ಗಿಡ
ದಾಸವಾಳ ಸಾಧಾರಣವಾಗಿ ಎಲ್ಲಾ ಕಡೆಗಳಲ್ಲೂ ಬೆಳೆಯುವ ಒಂದು ಹೂವಿನ ಗಿಡ. ಇದರ ಒಂದು ಪ್ರಮುಖ ಗುಣವೆಂದರೆ ಕಾಂಡದಿಂದ ಹಿಡಿದು ಹೂ ಎಲೆಗಳೆಲ್ಲ ಔಷಧ ಪ್ರಮಾಣವನ್ನು ಹೊಂದಿವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ದಾಸವಾಳಕ್ಕೆ ಪ್ರಮುಖ ಹೆಸರಿದೆ. ಇತ್ತೀಚಿಗೆ ಕೆಲವು ಕಸಿ ದಾಸವಾಳ ಗಿಡಗಳು ಬಂದದ್ದನ್ನು ಹೊರತು ಪಡಿಸಿದರೆ ಮೊದಲೆಲ್ಲಾ ದಾಸವಾಳ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತಿತ್ತು. ಕೆಂಪು ಬಿಳಿ ಹಳದಿ ಬಣ್ಣದ ದಾಸವಾಳ ಹೂಗಳ ಗಿಡಗಳಿವೆ.ಇವುಗಳಲ್ಲಿ ಬಿಳಿ ದಾಸವಾಳವನ್ನು ಔಷಧಕ್ಕೆ ಹೆಚ್ಚು ಬಳಸುತ್ತಾರೆ. ಇದರಲ್ಲಿ ವಿಟಮಿನ್ ಸಿ ಹಾಗೂ ಕಬ್ಬಿಣಯುಕ್ತ ಅಂಶಗಳು ಚೆನ್ನಾಗಿದ್ದು ಆರೋಗ್ಯ ಸುಧಾರಿಸಲು ಸಹಕಾರಿ. ದಾಸವಾಳದ ಹೂವಿನ ರಸವನ್ನು ಸೇವನೆ ಮಾಡುವುದರಿಂದ ತೂಕ ಇಳಿಕೆಯಾಗುತ್ತದೆ. ಇದರಲ್ಲಿರುವ ಆಂಟಿಬಯಾಟಿಕ್ ಅಂಶಗಳು ದೇಹದಲ್ಲಿರುವ ಕೊಬ್ಬುಗಳನ್ನು ಕರಗಿಸಲು ಸಹಕಾರಿ.
ಕಾಶಿಯಾ ಹೈಸ್ಕೂಲ್ ಜಪ್ಪು
ಮಂಗಳೂರು 575001
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದೊಡ್ಡ ಪತ್ರೆ
8ನೇ ತರಗತಿ
ಇಂಫಾನ್ಟ್ ಜೀಸಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ,
ಮೊಡಂಕಾಪು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆಗಿಡ
ಪರಿಜ್ಞಾನ ವಿದ್ಯಾಲಯ ಶಾಲೆ ಸೋಮೇಶ್ವರ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಭತ್ತದ ಗಿಡ
ಹೋಲಿ ಸೇವಿಯರ್ ಆoಗ್ಲ ಮಾಧ್ಯಮ
ಶಾಲೆ ಅಗ್ರರ್ ಬಂಟ್ವಾಳ -574211
ಗಿಡದ ಹೆಸರು : ತುಳಸಿ ಗಿಡ
ಈಗಿಡದ ಎಲೆಯನ್ನು ರೋಗ
ನಿವಾರಕ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ದಿವ್ಯ ಔಷಧ ಎಂದೇ ಕರೆಯಲಾಗಿದೆ. ಪ್ರತಿಯೊoದು ಮನೆಯಲ್ಲಿಯೂ ಈ ಗಿಡವನ್ನು ನೆಟ್ಟು ಪೋಷಿಸುವ ಮೂಲಕ ಉತ್ತಮ ಗಾಳಿ ನಮ್ಮ ದೇಹವನ್ನು ಸೇರಿ ಆರೋಗ್ಯ ಕಾಪಾಡುವಲ್ಲಿ ಮಹತ್ವವನ್ನು ಪಡೆದಿದೆ.
ದೇವಮಾತಾ ಇಂಗ್ಲಿಷ್ ಮಾಧ್ಯಮ ಶಾಲೆ
ಕರಿಂಗಾನ, ಅಮ್ಟೂರು. ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ರೋಜಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ
ಮುಂದಬೆಟ್ಟು ಮೂಡುಪೆರಾರ ಪೋಸ್ಟ್
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನ ಗಿಡ
ಕೆನರಾ ಪ್ರೌಢ ಶಾಲೆ ಉರ್ವ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದಾರೆಹುಳಿ
ಕೆನರಾ ಪ್ರೈಮರಿ ಸ್ಕೂಲ್ ಉರ್ವ
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನುಗ್ಗೆ ಗಿಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಕಲ್ಲಡ್ಕ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ
ನಾನು ಅಡಿಕೆ ಸಸಿ ನೀಡುತ್ತಿದ್ದೇನೆ. ಅಡಿಕೆಯ ಹೂ ದೇವರಿಗೆ ಅರ್ಪಿಸುತ್ತಾರೆ. ಗರಿಯಿಂದ ಗೊಬ್ಬರ ತಯಾರಿಸುತ್ತಾರೆ. ಹಾಳೆ ಯಿಂದ ತಟ್ಟೆ ಮಾಡುತ್ತಾರೆ. ಮದ್ವೆಸಮಾರಂಭ ಕ್ಕೆ ಅಡಿಕೆಯನ್ನು ವೀಳ್ಯದೆಲೆ ಒಟ್ಟಿಗೆ ಬಳಸುತ್ತಾರೆ. ಅಡಿಕೆಯನ್ನು ಮಾರಾಟ ಮಾಡಿ ಹಣ ಗಳಿಸುತ್ತಾರೆ.
ಶಾರದ ಗಣಪತಿ ವಿದ್ಯಾ ಕೇಂದ್ರ ಪುಣ್ಯಕೋಟಿ ನಗರ, ಕೈರಂಗಳ , ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಪಪ್ಪಾಯಿ ಹಣ್ಣು ಹೇಗೆ ಉತ್ತಮವೋ, ಇದರ ಬೀಜ, ಎಲೆಗಳೂ ಅದಕ್ಕಿಂತ ಉತ್ತಮವಾಗಿವೆ. ಹೇಗೆ ಎಂದರೆ ಇವು ಡೆಂಗಿ ಅಥವಾ ಡೆಂಗ್ಯೂ ಜ್ವರ, ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳಿಗೆ ಸಿದ್ಧೌಷಧದ ರೂಪದಲ್ಲಿ ಕೆಲಸ ಮಾಡುತ್ತವೆ. ವಿಶೇಷವಾಗಿ ಇದರ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಪಪಾಯಿನ್ ಎಂಬ ಒಂದು ಪೋಷಕಾಂಶ ಹಾಗೂ ಇತರ ಆಲ್ಕಲಾಯ್ಡ್‌ಗಳೂ ಮತ್ತು ಇತರ ಫಿನಾಲಿಕ್ ಸಂಯುಕ್ತಗಳು ದೇಹದಲ್ಲಿ ಪ್ರೋಟೀನುಗಳನ್ನು ಜೀರ್ಣಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಇತರ ಜೀರ್ಣಕ್ರಿಯೆಯ ತೊಂದರೆಗಳನ್ನು ನಿವಾರಿಸುತ್ತದೆ. ರಕ್ತದಲ್ಲಿರುವ ಪ್ಲೇಟ್ಲೆಟ್ (ಕಿರುಬಿಲ್ಲೆ) ಗಳನ್ನು ಹೆಚ್ಚಿಸುತ್ತದೆ.ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಶಾರೀರಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ಹೀಗೆ ಹಲವು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವ ಗುಣ ಪಪ್ಪಾಯಿ ಗಿಡಗಿದೆ.
ಆವೆ ಮರಿಯ ಹಿರಿಯ ಪ್ರಾಥಮಿಕ ಶಾಲೆ ಫಜೀರ್
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಹಿಬೇವಿನ ಗಿಡ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ನೆಹರೂನಗರ ಪುತ್ತೂರು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗಸಗಸೆ ಹಣ್ಣಿನ ಗಿಡ (ಚೆರ್ರಿ ಗಿಡ)
ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆ ಸಿದ್ಧಕಟ್ಟೆ,
ಬಂಟ್ವಾಳ ತಾಲೂಕು, ದ.ಕ.
ಗಿಡದ ಹೆಸರು : ಮಾವಿನ ಗಿಡ.
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ರೋಜಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ
ಆಯುರ್ವೇದ ಶಾಸ್ತ್ರದಲ್ಲಿ ಅಡಿಕೆಯ ಉಲ್ಲೇಖವಿದ್ದು, ಇದರ ವಿಶಿಷ್ಠ ಗುಣ ಹಾಗೂ ಉಪಯೋಗವನ್ನು ತಿಳಿಸಲಾಗಿದೆ. ತಾಂಬೂಲ ಸೇವನೆಯನ್ನು ದಿನಚರಿಯ ಒಂದು ಭಾಗ ಎಂದು ಇದರ ಮಹತ್ವವನ್ನು ತಿಳಿಸಲಾಗಿದೆ. ಆಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ಯಾನಿನ್ ಎಂಬ ಅಂಟಿನಂತಹ ಕೆಂಪು ಬಣ್ಣದ ಸಾರ ಹೇರಳವಾಗಿದೆ. 31.31% ತೇವಾಂತ, 4.9% ಪ್ರೋಟಿನ್ ಹಾಗೂ 11.2% ನಾರಿನಾಂಶವಿದೆ ಮತ್ತು ಅಧಿಕ ಪ್ರಮಾಣದ ಖನಿಜಾಂಶವಿದೆ. ಅದರಲ್ಲೂ ಉತ್ತಮ ಪ್ರಮಾಣದಷ್ಟು ಕ್ಯಾಲ್ಶಿಯಂ, ಜೀವಸತ್ವಗಳಾದ ವಿಟಮಿನ್ ಬಿ6 , ವಿಟಮಿನ್ ಸಿ ಅಡಿಕೆಯಲ್ಲಿದೆ. ಅದ್ದರಿಂದ ಅಡಿಕೆಯ ಸೇವನೆಯಿಂದ ಅಗತ್ಯ ಪೋಷಕಾಂಶಗಳು ಹಾಗೂ ಕ್ಯಾಲ್ಶಿಯಂ , ವಿಟಮಿನ್ ನಂತಹ ಜೀವಸತ್ವಗಳು ದೇಹಕ್ಕೆ ಲಭ್ಯವಾಗುತ್ತದೆ.