
ಹಸಿರು ಯೋಧರು - 20
Tuesday, June 15, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಎಸ್. ವಿ.ಎಸ್. ಟೆಂಪಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪುದಿನಾ ಗಿಡ
ಔಷಧೀಯ ಗಿಡಮೂಲಿಕೆ ಪುದೀನಾ ಆರೋಗ್ಯದ ದೃಷ್ಟಿಯಿಂದ ಅತಿ ಉಪಯುಕ್ತ ಸಸ್ಯವಾಗಿದ್ದು ಜನ ಇದನ್ನು ಸೂಪ್, ಸಾಸ್, ಪಾನೀಯ, ಚಟ್ನಿಯ ರೂಪದಲ್ಲಿ ಮತ್ತು ವಿವಿಧ ಖಾದ್ಯಗಳಲ್ಲಿ ಉಪಯೋಗಿಸುತ್ತಾರೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಪುದೀನಾ ಎಲೆಗಳನ್ನು ಸೇವಿಸುವುದರಿಂದ ಶೀತ ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಪುದೀನಾ ಎಲೆಗಳನ್ನು ಹಾಕಿ ಕುದಿಸಿದ ನೀರಿನಿಂದ ಹಬೆಯನ್ನು ಸೇವಿಸುವುದರಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಇಂದಿನ ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿ ಇದೊಂದು ಉಪಯುಕ್ತ ಆರೋಗ್ಯಕರ ಅಂಶವಾಗಿದೆ. ಪುದೀನಾದಲ್ಲಿ ವಿಟಮಿನ್ ಸಿ, ಡಿ, ಇ, ಬಿ ಹಾಗೂ ಕ್ಯಾಲ್ಸಿಯಂ ಮತ್ತು ರಂಜಕ ಇದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸುವಾಸನೆ ಭರಿತ ಸಸ್ಯವಾಗಿದ್ದು ಮಾನಸಿಕ ಆಹ್ಲಾದವನ್ನು ಉಂಟುಮಾಡಿ ಒತ್ತಡವನ್ನು ನಿವಾರಿಸುವ ಶಕ್ತಿಯನ್ನೂ ಹೊಂದಿದೆ.
ಅವೆ ಮರಿಯ ಶಾಲೆ. ಪಜೀರು.
S/O ಕೃಷ್ಣ ನಾಯ್ಕ್
ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು
ಇನೋಳಿ ಪಾವೂರು. ಮಂಗಳೂರು ದ.ಕ
ನಾನು ಕಳೆದ ವರ್ಷ ಮಾವಿನ ಸಸಿಗಳನ್ನು ಮತ್ತು ಹತ್ತಿ ಹಾಗೂ ಗಾಂಧಾರಿ ಮೆಣಸಿನ ಗಿಡ ನೆಟ್ಟಿದ್ದೆ. ಈ ವರ್ಷವು ಮೆಣಸಿನಕಾಯಿ ಮತ್ತು ಬೆಂಡೆ ಹಾಕಿದ್ದೇನೆ. ಮಾವಿನ ಗಿಡ ಮಳೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ಮೇಲೆ ನೆಡುವೆ. ಈ ವರ್ಷ ಪೆಬ್ರವರಿ ಯಲ್ಲಿ ನಮ್ಮ ಮನೆ ಹತ್ತಿರದ ಕಾಡಿನಲ್ಲಿ ಬೆಂಕಿ ಬಿದ್ದಾಗ ಮನೆಯವರೊಂದಿಗೆ ನಂದಿಸಿ ಮರಗಳನ್ನು ಬೆಂಕಿಯಿಂದ ರಕ್ಷಣೆ ಮಾಡಿದ ಖುಷಿ ಇದೆ.
ಹೋಲಿ ರೆಡಿಮರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳ್ತಂಗಡಿ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪುನರ್ಪುಳಿ ಗಿಡ
ಇನ್ಫೆಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆ ಮೊಡಂಕಾಪು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಎಸ್. ವಿ. ಎಸ್ ಪ್ರೌಢಶಾಲೆ ಬಂಟ್ವಾಳ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಸಸ್ಯದ ಹೆಸರು : ಬೇವಿನ ಗಿಡ
ತೊಗಟೆ,ಬೀಜಗಳು,ಬೇರು,ಹಣ್ಣುಗಳು ಅಥವಾ ಹೂವುಗಳಾಗಿರಲಿ ಇವೆಲ್ಲವನ್ನು ಉರಿಯೂತ ಸೋಂಕು ಜ್ವರ ಚರ್ಮರೋಗ ಮತ್ತು ಹಲ್ಲಿನ ಕಾಯಿಲೆಗಳಿಂದ ಹಿಡಿದು ಅನೇಕ ಸಮಸ್ಯೆಗಳಿಗೆ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ನಿರೋಧಕ ಸೂಕ್ಷ್ಮಜೀವಿ ನಿರೋಧಕ ಉರಿಯುತ ನಿವಾರಕ ಆಂಟಿ ಆಕ್ಸಿಡೆಂಟ್ ನಂಜು ನಿರೋಧಕ ಮಲೇರಿಯಾ ನಿವಾರಕ ಮತ್ತು ವೈರಸ್ ನಿವಾರಕ ಗುಣಲಕ್ಷಣಗಳಿಂದ ತುಂಬಿರುವ ಬೇವು ನಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಬಹುತೇಕ ಪರಿಹಾರವಾಗಿದೆ
ದ.ಕ.ಜಿ.ಪ.ಹಿರಿಯ ಪಾರ್ಥಮಿಕ ಶಾಲೆ ಕೊಡ್ಮಣ್
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಸರ್ಕಾರಿ ಪ್ರೌಢಶಾಲೆ ಗೋಳ಼ಮಜಲು , ಕಲ್ಲಡ್ಕ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆ ಗಿಡ
ಲೋರೆಟ್ಟೋ ಇಂಗ್ಲಿಷ್ ಮೀಡಿಂಯಂ ಶಾಲೆ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ.
ಗಿಡದ ಹೆಸರು : ಶರಬತ್ತು ಹಣ್ಣು/ಪ್ಯಾಶನ್ ಫ್ರೂಟ್
ಅತ್ಯಂತ ಜಾಸ್ತಿ ನಾರಿನಂಶ ಇರುವ ಏಕೈಕ ಹಣ್ಣು ಇದು. ಇದನ್ನು ಜುಮುಕಿ ಹಣ್ಣು ಎಂದು ಕೂಡ ಕರೆಯುತ್ತಾರೆ. ಇದು ಬೇಗನೆ ಜಾಸ್ತಿ ಆರೈಕೆ ಬೇಕಾಗದೆ ಸುಲಭದಲ್ಲಿ ಬಳ್ಳಿಯಾಗಿ ಬೆಳೆಯುತ್ತದೆ. ಉಪಯೋಗ ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಈ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದರಿಂದ ಮಲಬದ್ದತೆ , ಚರ್ಮ ರೋಗ ಹಾಗೂ ಕರುಳಿನ ಬ್ಯಾಕ್ಟೀರಿಯ ದ ರೋಗಗಳನ್ನು ನಿವಾರಣೆ ಮಾಡುತ್ತದೆ.
ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ರೋಗ ನಿವಾರಣಾ ಶಕ್ತಿ ಜಾಸ್ತಿ ಮಾಡುತ್ತದೆ. ದೇಹದ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ರಕ್ತದ ಒತ್ತಡ ಕಡಿಮೆ ಮಾಡಿಕೊಳ್ಳಲು ಸಹ ಸಹಕಾರಿಯಾಗುತ್ತದೆ.
ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸಿದ್ದಕ್ಕಟ್ಟೆ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆ ಗಿಡ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ
ನೆಹರೂನಗರ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆಗಿಡ
ಇನ್ಪೆಂಟ್ ಜೀಸಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೋಡಂಕಾಪು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡಗ ಹೆಸರು : ಕರಿಬೇವು
ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧಿಯ ಗುಣಗಳ ಆಗರ. ಕರಿಬೇವಿನ ಎಲೆಗಳಲ್ಲಿ ವಿಟಮಿನ್-ಎ ಹೇರಳವಾಗಿದೆ. ಅಲ್ಲದೆ ವಿಟಮಿನ್ ಸಿ, ಪ್ರೋಟೀನ್ , ಕಾರ್ಬೋಹೈಡ್ರೇಟ್ಸ್ ಸಹ ಅಧಿಕ ಪ್ರಮಾಣದಲ್ಲಿವೆ. ಕಣ್ಣು ಹಾಗೂ ಮೆದುಳಿನ ಆರೋಗ್ಯಕ್ಕೆ ಇದರ ಸೇವನೆ ಸಹಕಾರಿ. ಕರಿಬೇವಿನ ಮತ್ತೋಂದು ವೈಶಿಷ್ಟ್ಯವೆಂದರೆ ಎಲೆಗಳನ್ನು ತಾಜಾ ಹಾಗೂ ಒಣಗಿದಾಗಲೂ ಬಳಸಬಹುದು ಮತ್ತು ಒಣಗಿದಾಗಲೂ ಸಹ ಅದು ತನ್ನ ಸುವಾಸನೆಯನ್ನು ಕಳೆದುಕೊಳ್ಳುವುದಿಲ್ಲ. ಕೊಬ್ಬರಿ ಎಣ್ಣೆ ಯೊಂದಿಗೆ ಕರಿಬೇವಿನ ಎಲೆಗಳನ್ನು ಕುದಿಸಿ ತಯಾರಿಸಿದ ಎಣ್ಣೆಯು ಕೂದಲ ಬಣ್ಣ ಹಾಗೂ ಬೆಳವಣಿಗೆಗೆ ಸಹಕಾರಿ. ಕರಿಬೇವನ್ನು ನಾಟಿ ವೈದ್ಯಕೀಯ ಪದ್ಧತಿಯಲ್ಲಿ ಜ್ವರ ನಿವಾರಕವಾಗಿ, ಉರಿಶಾಮಕವಾಗಿ ಹಾಗೂ ರಕ್ತ ಶುದ್ದಿಕಾರಕವಾಗಿಯೂ ಬಳಸಲಾಗುತ್ತದೆ.
ಇನ್ಪೆಂಟ್ ಜೀಸಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೋಡಂಕಾಪು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅನನಾಸು ದಿನ
ಹೋಲಿ ರೆಡಿಮರ್ ಶಾಲೆ ಬೆಳ್ತಂಗಡಿ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಜಾಯಿಕಾಯಿ
ಪಂಜದ ಗುತ್ತು ಶಾಂತಾರಾಮ ಶೆಟ್ಟಿ ಪ್ರೌಢ ಶಾಲೆ ಕೆಮ್ರಾಲ್ ಸುಳ್ಯ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಸಳೆ ಗಿಡ
ಬಸಳೆ ಗಿಡವನ್ನು ಪದಾರ್ಥ ಮಾಡಬಹುದು. ಇದನ್ನು ಬೀಜದಿಂದ ಸಹ ನೆಡಬಹುದು. ದಂತಿನಿಂದ ನೆಡುವ ಗಿಡಕ್ಕಿಂತ ಬೀಜದಿಂದ ನೆಟ್ಟ ಗಿಡ ತುಂಬಾ ಆರೋಗ್ಯಕರವಾಗಿರುತ್ತದೆ. ಬಸಳೆ ಸೊಪ್ಪು ದೇಹಕ್ಕೆ ತುಂಬಾ ತಂಪು. ಇದರಲ್ಲಿ ವಿಟಮಿನ್ a,c ಹಾಗೂ ಕಬ್ಬಿಣದ ಅಂಶ ಮತ್ತು ಕ್ಯಾಲ್ಸಿಯಂ ತುಂಬಾ ಜಾಸ್ತಿ ಇದೆ. ಬಾಯಿ ಹುಣ್ಣು ಆದವರು ಬಸಳೆಯ ಹಸಿ ಹಸಿ ಸೊಪ್ಪನ್ನು ಬಾಯಲ್ಲಿ ಹಾಕಿ ಅಗೆದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ ಹಾಗೂ ಕಿಡ್ನಿಯ ಕಲ್ಲಿಗೆ ಸಹ ರಾಮಬಾಣ. ಆದ್ದರಿಂದ ಬಸಲೆಯ ಸೊಪ್ಪು ದೇಹಕ್ಕೆ ತುಂಬಾ ಅವಶ್ಯಕ.