
ಹಸಿರು ಯೋಧರು - 14
Friday, June 11, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲೋಳೆಸರ
ಇದು ಅಸ್ಪಾಡೆಲೇಸಿಯಾ ಎಂಬ ಕುಟುಂಬಕ್ಕೆ ಸೇರಿದ ಅಲೋವೆರಾ ಎಂಬ ಸಸ್ಯ. ಕನ್ನಡದಲ್ಲಿ ಲೋಳೆಸರ ಎಂದು ಕರೆಯಲ್ಪಡುವ ಈ ಸಸ್ಯ ಆಫ್ರಿಕಾದಿಂದ ಪರಿಚಯವಾಯಿತು ಎಂದು ನಂಬಲಾಗಿದೆ. ಸಣ್ಣ ಬೇರು ಹೊಂದಿರುವ ಈ ಸಸ್ಯ ಮೆತ್ತನೆಯ ಮುಳ್ಳುಗಳ ರಚನೆ ಹೊಂದಿರುವ ದಪ್ಪನೆಯ ಎಲೆಗಳನ್ನು ಹೊಂದಿದೆ. ಎಲೆಗಳ ಅಂಚಿನಲ್ಲಿ ಹೂಗಳು ಅರಳುತ್ತವೆ. ಇದನ್ನು ಸೌಂದರ್ಯವರ್ಧಕ ಕ್ರೀಂ, ಲೋಷನ್ ತಯಾರಿಕೆಯಲ್ಲಿ, ಸಂಧಿವಾತ, ಹೊಟ್ಟೆಉರಿ ಶಮನಕ್ಕೆ ಬಳಸುವ ಔಷಧಿಗಳಲ್ಲೂ ಬಳಸುತ್ತಾರೆ. ಅಲಂಕಾರಿಕವಾಗಿಯೂ ಕೈತೋಟದಲ್ಲಿ ಬೆಳೆಸುತ್ತಾರೆ.
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ.
ಗಿಡದ ಹೆಸರು : ಜಂಬು ನೇರಳೆ
ಬೇಸಿಗೆ ಕಾಲದಲ್ಲಿ ಜಂಬು ನೇರಳೆ ಹಣ್ಣನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಈ ಹಣ್ಣು ಬೇಸಿಗೆ ಕಾಲದಲ್ಲಿ ಮಾತ್ರ ದೊರೆಯುತ್ತದೆ. ಜಂಬು ನೇರಳೆ ಹಣ್ಣಿನಲ್ಲಿ ವಿಶೇಷ ಆರೋಗ್ಯವರ್ಧಕ ಗುಣಗಳಿವೆ. ರಸಭರಿತವಾದ ಈ ಹಣ್ಣನ್ನು ಸೇವಿಸಿದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಜಂಬು ನೇರಳೆ ಹಣ್ಣು, ನೇರಳೆ ಹಣ್ಣಿನ ರೂಪಾಂತರ ಎಂದು ಹೇಳಲಾಗಿದೆ. ಇದರ ಬೀಜದಲ್ಲಿ ಕ್ಯಾಲ್ಸಿಯಂ ಪ್ರಮಾಣ ಸಮೃದ್ಧವಾಗಿದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಸಮಸ್ಯೆ ಪರಿಹಾರವಾಗುತ್ತದೆ. ಜಂಬು ನೇರಳೆ ಹಣ್ಣು ಹೊಟ್ಟೆಯುಬ್ಬರ ಮತ್ತು ವಾಯು ಸಮಸ್ಯೆಯನ್ನು ಪರಿಹರಿಸುತ್ತದೆ. ಬೇಸಿಗೆ ಕಾಲದಲ್ಲಿ ಕಾಡುವ ಅನೇಕ ರೋಗಗಳನ್ನು ನಿಯಂತ್ರಣದಲ್ಲಿ ಇರಿಸಲು ಜಂಬು ನೇರಳೆಯು ಸಹಕಾರಿಯಾಗುತ್ತದೆ. ಈ ಹಣ್ಣನ್ನು ಬಿಳಿ ನೇರಳೆ ಅಥವಾ ನೀರಿನ ಸೇಬು ಎಂದು ಕರೆಯುತ್ತಾರೆ.
ಎಸ್. ವಿ. ಎಸ್ ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪಾಣೆಮಂಗಳೂರು
ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ವಿಠಲ ಪದವಿಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗ ವಿಟ್ಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೇವಿನ ಗಿಡ
ಗುಣದಿಂದ ಕಲ್ಪವೃಕ್ಷ ಎಂದು ಕರೆಯಲ್ಪಡುವ ಬೇವು... ಔಷದಿಯ ಗುಣಗಳನ್ನು ಸಾಕಷ್ಟು ಹೊಂದಿದೆ ವ್ಯಕ್ತಿಯ ದೈಹಿಕ ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸುಧಾರಣೆಯಲ್ಲಿ ಈ ಬೇವು ಆದ್ಯ ಪಾತ್ರವನ್ನು ವಹಿಸುತ್ತದೆ. ಎನ್ನುವ ಮಾತು ನೂರಕ್ಕೆ ನೂರು ಸತ್ಯವಾದುದು. ವೈದ್ಯಕೀಯ ಅಥವಾ ದೈವಿಕ ಕಾರ್ಯಗಳಲ್ಲೇ ಆಗಲಿ ಬೇವು ಅತ್ಯುನ್ನತ ಪಾತ್ರ ವಹಿಸುತ್ತದೆ. ಪ್ರತಿದಿನ ಬೆಳಗ್ಗೆ ಹತ್ತು-ಹನ್ನೆರಡು ಬೇವಿನ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಜಗಿದು ಒಂದು ಬಟ್ಟಲು ನೀರು ಕುಡಿದರೆ ಕ್ಯಾನ್ಸರ್ ಸಂಬಂಧಿ ರೋಗಗಳು ದೂರವಾಗುತ್ತದೆ ಎಂಬುದು ಹಿರಿಯರ ಅಭಿಪ್ರಾಯ. ಬೇವಿನ ಗಿಡದ ಬುಡದಲ್ಲಿನ ತೊಗಟೆಯನ್ನು ಕೆತ್ತಿ ತೆಗೆದು ಅದರಲ್ಲಿ ಕಷಾಯ ತಯಾರಿಸಿ ಸೇವಿಸುವುದರಿಂದ ಕುಷ್ಟ ಸಂಬಂಧಿ ರೋಗಗಳು ನಿವಾರಣೆಯಾಗುತ್ತದೆ. ಮಧುಮೇಹ ನಿಶ್ಯಕ್ತಿ ವಾಕರಿಕೆ ಬಾಯಾರಿಕೆ ಗಡುವಿನ ಜ್ವರ ಸೇರಿದಂತೆ ಅನೇಕ ದೋಷಗಳಿಗೆ ಬೇವು ರಾಮ ಬಾಣದಂತಾಗಿದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ಲ ಪಡೀಲ್ ತಲಪಾಡಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರುಬೀಜ ಗಿಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ಲ ಪಡೀಲ್ ತಲಪಾಡಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ಲ ಪಡೀಲ್ ತಲಪಾಡಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀಮರೂಬ ಗಿಡ
ಸರಕಾರಿ ಪ್ರೌಢಶಾಲೆ ನಾರಾವಿ. ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
'ಮೂಲಿಕೆಗಳ ರಾಣಿ' ತುಳಸಿಯು ರೋಗಗಳನ್ನು ಗುಣಪಡಿಸುವ ಕಾರ್ಯಕ್ಕೆ ಹೆಸರುವಾಸಿಯಾಗಿದೆ. ತುಳಸಿಯನ್ನು ವಿವಿಧ ರೋಗಗಳಾದ ಕೂದಲು ಮತ್ತು ಚರ್ಮದ ಅಸ್ವಸ್ಥತೆಯ ನಿವಾರಣೆ, ಬ್ಯಾಕ್ಟೀರಿಯ ವಿರೋಧಿ, ಶಿಲೀಂದ್ರ ವಿರೋಧಿ ಗುಣಲಕ್ಷಣಗಳೊಂದಿಗೆ ವೈರಲ್ ಸೋಂಕುಗಳಿಗೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ.ಸಂತಾನೋತ್ಪತ್ತಿಯ ವ್ಯವಸ್ಥೆಯ ದೋಷಗಳು, ದುರ್ಬಲತೆ, ಹೃದಯ ರಕ್ತನಾಳದ ವ್ಯವಸ್ಥೆಯ ಸಮಸ್ಯೆ, ವಾಂತಿ, ಅಜೀರ್ಣ ಮುಂತಾದ ಸಾಮಾನ್ಯ ರೋಗಗಳ ವಿರುದ್ಧ ಹೋರಾಡುವ ಮತ್ತು ಚಿಕಿತ್ಸೆಗಾಗಿ ತುಳಸಿಯು ಸಿದ್ಧೌಷಧ ವಾಗಿದೆ. ಅಷ್ಟೇ ಅಲ್ಲದೆ ಪ್ರಸ್ತುತ ಸ್ಥಿತಿಯಾದ ಕೋರೋನ ದಂತಹ ಮಹಾಮರಿಯ ವಿರುದ್ಧ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಳಸಿ ಎಲೆಯನ್ನು ಔಷಧಿಯಾಗಿ ಉಪಯೋಗಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನೆಲ್ಲಿಕಾಯಿ ಗಿಡ
ಶಾಲೆಯ ವಿಳಾಸ- ಶಾರದಾ ಗಣಪತಿ ವಿದ್ಯಾ ಕೇಂದ್ರ ಪುಣ್ಯಕೋಟಿ ನಗರ ಕೈರಂಗಳ.
ಗಿಡದ ಹೆಸರು : ಬಾಳೆ ಗಿಡ
ಇದರ ವೈಜ್ಞಾನಿಕ ಹೆಸರು ಮೂಸಾ ಅಕ್ಕುಮೂನಿಟಾ. ಭಾರತದ ಎಲ್ಲಾ ರಾಜ್ಯಗಳಲ್ಲೂ ಬಾಳೆ ಹಣ್ಣು ಬೆಳೆಯುತ್ತಾರೆ. ಇದು ಕಿಡ್ನಿಕಲ್ಲನ್ನು ತೆಗೆದು ಹಾಕುತ್ತದೆ.ಮೂತ್ರದ ಸೋಂಕನ್ನು ದೂರವಿರಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ರಕ್ತ ಹೀನತೆಯನ್ನು ಗುಣಪಡಿಸುತ್ತದೆ.
ಮಂಚಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುದ್ದೋಟು
ಮಂಚಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುದ್ದೋಟು
ಮಂಚಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ