
ಮಾನವೀಯತೆಯ ಫಲ - ಕಥೆ
Monday, May 31, 2021
Edit
ನಂದನ್ ಕೆ ಹೆಚ್ 6 ನೇ ತರಗತಿ
ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಪುತ್ತೂರು. ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಲ್ಲಿ ಒಬ್ಬ ಯುವಕನಿದ್ದ. ಓದು ಮುಗಿದ ಬಳಿಕ ಎಷ್ಟೇ ಕಷ್ಟಪಟ್ಟರೂ ಅವನಿಗೆ ಒಂದು ಉದ್ಯೋಗವೂ ದೊರಕಲಿಲ್ಲ. ಹೀಗಿರುವಾಗ ಒಂದು ದಿನ ಹಣ್ಣಿನ ಅಂಗಡಿಯಲ್ಲಿ ಅವನಿಗೆ ಕೆಲಸ ದೊರಕಿತು. ದಿನವೊಂದಕ್ಕೆ ನೂರು ರೂಪಾಯಿ ಸಂಬಳ, ಆದರೂ ಪರವಾಗಿಲ್ಲ ಎಂದು ಅಲ್ಲೇ ಕೆಲಸಕ್ಕೆ ಸೇರಿದ. ಒಂದು ಸಲ ಅಂಗಡಿಯ ಬಳಿ ಒಂದು ಹಕ್ಕಿ ಕೊಳೆತ ಹಣ್ಣನ್ನು ತಿನ್ನುತ್ತಿರುವುದನ್ನು ಗಮನಿಸಿದನು. ಆತ ಅಂಗಡಿಯಿಂದ ಒಂದು ಹಣ್ಣನ್ನು ಆ ಹಕ್ಕಿಗೆ ಕೊಟ್ಟನು. ಅಭ್ಯಾಸ ಹೀಗೆ ಮುಂದುವರೆದು ಅಂಗಡಿಯ ಬಳಿ ಹಲವಾರು ಪಕ್ಷಿಗಳು ಬಂದು ಹಣ್ಣಿಗಾಗಿ ಕಾಯುತ್ತಿದ್ದವು. ಆ ಹುಡುಗ ನೀಡಿದ ಹಣ್ಣನ್ನು ತಿಂದು ಹಕ್ಕಿಗಳು ಅಲ್ಲೇ ಚಿಲಿಪಿಲಿಗುಟ್ಟುತ್ತಾ ಇದ್ದವು. ಪೇಟೆಯ ವಾತಾವರಣವಾದ್ದರಿಂದ ಅಂಗಡಿಯ ಬಳಿ ಹಕ್ಕಿಗಳು ಇರುವುದನ್ನು ಗಮನಿಸಿ ಆ ಬಡಾವಣೆಯ ಜನರು ಹಾಗೂ ಮಕ್ಕಳು ಅಲ್ಲಿಗೆ ಹಣ್ಣಿಗಾಗಿ ಬರುತ್ತಿದ್ದರು. ದಿನ ಹೋದಂತೆ ವ್ಯಾಪಾರ ಇಮ್ಮಡಿಯಾಯಿತು. ಇದನ್ನು ಗಮನಿಸಿದ ಅಂಗಡಿಯ ಮಾಲೀಕ ಇದಕ್ಕೆ ಕಾರಣ ಇದೇ ಯುವಕ ಎಂದು ಸಂತೋಷವಾಗಿ ಅವನಿಗೆ ದಿನಕ್ಕೆ 500 ರೂಪಾಯಿ ಸಂಬಳವನ್ನು ನೀಡಲು ಪ್ರಾರಂಭಿಸಿದ. ಅಂದಿನಿಂದ ಯುವಕನೂ, ಅಂಗಡಿಯ ಮಾಲೀಕನೂ, ಹಕ್ಕಿಗಳೂ ಸೇರಿ ಸಂತೋಷದಿಂದ ಬದುಕತೊಡಗಿದರು......
ನೀತಿ : ಮಾನವೀಯತೆಗಿಂತ ಮಿಗಿಲಾದ ಆಸ್ತಿ ಇಲ್ಲ
ರಚನೆ : ನಂದನ್ ಕೆ ಹೆಚ್ 6 ನೇ ತರಗತಿ
ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಪುತ್ತೂರು. ದಕ್ಷಿಣ ಕನ್ನಡ ಜಿಲ್ಲೆ