
ಚುಟುಕುಗಳು
Sunday, May 30, 2021
Edit
ಆದ್ಯಂತ್ ಅಡೂರು 7 ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ ಪುತ್ತೂರು, ದಕ್ಷಿಣ ಕನ್ನಡ
ಚುಟುಕುಗಳು
1. ಚಿತ್ರ
ಬಣ್ಣ ಬಣ್ಣದ ಸುಂದರ ಚಿತ್ರ
ನಗುವನು ತರಿಸುವ ವ್ಯಂಗ್ಯ ಚಿತ್ರ
ಪೆನ್ಸಿಲ್, ತೈಲ, 3 ಡಿ ಚಿತ್ರ
ಮನಸನು ಮುಟ್ಟುವ ಅಂದದ ಚಿತ್ರ
2. ಲಾಕ್ ಡೌನ್
ಹಾದಿ, ಬೀದಿ, ರಸ್ತೆಯಲೆಲ್ಲ
ವಾಹನಗಳು ಓಡುವುದಿಲ್ಲ
ಮಲಿನವಂತು ಇಲ್ವೇ ಇಲ್ಲ
ಸ್ವಚ್ಛವಾಗಿದೆ ಪೇಟೆಗಳೆಲ್ಲ
3. ಹಾಲು
ಹಾಲನ್ನು ಕುಡಿಯಿರಿ ನೀವೆಲ್ಲ
ಇದನ್ನು ಕುಡಿಯದಿರೆ ಬಲವಿಲ್ಲ
ಪೋಷಕಾಂಶ ತುಂಬಿದೆ ಹಾಲಲ್ಲಿ
ಸಿಹಿ ತಿಂಡಿ ಮಾಡುವರು ಇದರಲ್ಲಿ
4. ಕಾಳುಮೆಣಸು
ಕಾಳುಮೆಣಸು ರುಚಿಯಲಿ ಖಾರ
ಇದರ ಇನ್ನೊಂದು ಹೆಸರು ಕಪ್ಪು ಬಂಗಾರ
ಉತ್ತಮ ಆರೋಗ್ಯಕ್ಕೆ ಮಿತವಾಗಿ ಸೇವಿಸಿ
ಅಡುಗೆಯಲ್ಲೂ ಕೂಡಾ ಕಾಳುಮೆಣಸು ಬಳಸಿ
5. ಜಾದು
ಕಣ್ಕಟ್ಟು ಮಾಡುವ ತಂತ್ರ
ಹೇಳುವರು ಇದರಲ್ಲಿ ಮಣಮಣ ಮಂತ್ರ
ಆಶ್ಚರ್ಯ ಮೂಡಿಸುವ ಜಾದುವು
ಕೈಚಳಕ ಇದರಲ್ಲಿ ಪ್ರಧಾನವು
ಆದ್ಯಂತ್ ಅಡೂರು 7 ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ , ಪುತ್ತೂರು, ದಕ್ಷಿಣ ಕನ್ನಡ