
ದೀಪಾವಳಿ ಸಂಭ್ರಮ - ಲೇಖನ
Tuesday, February 23, 2021
Edit
ಸಾನ್ವಿ ಸಿ ಎಸ್ 3 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು
ದೀಪಾವಳಿ ಸಂಭ್ರಮ
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಇದು ಹಿಂದೂಗಳ ಸಂಭ್ರಮದ ಹಬ್ಬ. ಮನೆಯ ಮುಂದೆ ತೋರಣ ಕಟ್ಟಿ, ರಂಗವಲ್ಲಿ ಹಾಕಿ, ದೀಪ ಉರಿಸಿ, ಗೂಡುದೀಪ ತೂಗಿ, ಆಚರಿಸುವ ಹಬ್ಬವೇ ದೀಪಾವಳಿ. ಇದು ಮೂರು ದಿನಗಳ ಹಬ್ಬ. ನಮ್ಮ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತೇವೆ ಎಂಬುದನ್ನು ನಾನು ಹೇಳುತ್ತೇನೆ.....
ದೀಪಾವಳಿಯ ಮೊದಲನೇ ದಿನವೇ ನರಕಚತುರ್ದಶಿ. ಆ ದಿನದಂದು ಎಣ್ಣೆಸ್ನಾನ ಮಾಡುತ್ತೇವೆ. ಏಕೆಂದರೆ ಆ ದಿನ ಶ್ರೀಕೃಷ್ಣ ನರಕಾಸುರನನ್ನು ಕೊಂದ ದಿನ. ಕೊಂದ ನಂತರ ಎಣ್ಣೆ ಹಚ್ಚಿ ಸ್ನಾನ ಮಾಡಿದನಂತೆ. ಆ ನೆನಪಿಗೆ ನಾವು ಎಣ್ಣೆಸ್ನಾನ ಮಾಡುತ್ತೇವೆ.
ಎರಡನೇ ದಿನ ದೀಪಾವಳಿ ಅಮಾವಾಸ್ಯೆ. ಆ ದಿನ ಹಣತೆಗಳನ್ನು ಉರಿಸುತ್ತೇವೆ.
ಮೂರನೇ ದಿನ ಎದ್ದ ಕೂಡಲೇ ಸಂಭ್ರಮ. ಯಾಕೆ ? ಮೂರನೇ ದಿನ ದೀಪಾವಳಿ ಹಬ್ಬ. ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಹೂ ಕೊಯ್ದು, ತುಳಸಿಕಟ್ಟೆ ತೊಳೆದು, ಹೂಮಾಲೆ ಮಾಡಿ, ಹಟ್ಟಿಯನ್ನು ತೊಳೆದು, ತೋರಣ ಕಟ್ಟುತ್ತೇವೆ. ಮನೆಯಲ್ಲಿ ಗೋಪೂಜೆ, ವಾಹನ ಪೂಜೆ, ತುಳಸಿ ಪೂಜೆ ಒಂದೇ ದಿನ ಆಚರಿಸುತ್ತೇವೆ.
ಸಂಜೆ ಸ್ನಾನ ಮಾಡಿ ಆದ ನಂತರ ರಂಗವಲ್ಲಿ ಹಾಕಿ, ಒಂದೊಂದೇ ಹಣತೆಗೆ ಎಣ್ಣೆ ಹಾಕಿ, ಬತ್ತಿ ಇಟ್ಟು, ದೀಪ ಉರಿಸಿ ಜಗಲಿ ಹಾಗೂ ತುಳಸೀ ಕಟ್ಟೆಯ ಮೇಲೆ ಇಡುತ್ತೇವೆ. ನಂತರ ಮನೆ ದೇವರಾದ ಗಣಪತಿಗೆ ಅದಿಪೂಜೆ, ಆ ಮೇಲೆ ತುಳಸಿ ಪೂಜೆ, ಮತ್ತೆ ವಾಹನ ಪೂಜೆ, ಆ ನಂತರ ಗೋಪೂಜೆ, ಆ ಮೇಲೆ ನಾನು ಮತ್ತು ತಂಗಿ ನಕ್ಷತ್ರ ಕಡ್ಡಿ ಉರಿಸಿದೆವು. ನಂತರ ಊಟ. ಊಟಕ್ಕೆ ದೇವರಿಗೆ ಕೊಟ್ಟ ನೈವೇದ್ಯಗಳಾದ ಕೊಟ್ಟಿಗೆ, ನೀರುದೋಸೆ, ಅವಲಕ್ಕಿ, ರಸಾಯನ ಮುಂತಾದವುಗಳಿದ್ದವು. ಭರ್ಜರಿ ಊಟದೊಂದಿಗೆ ಸಂಭ್ರಮದ ದೀಪಾವಳಿ ಹಬ್ಬ ಆಚರಿಸಿದೆವು.
........ಸಾನ್ವಿ ಸಿ.ಎಸ್ 3 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು