ಬದುಕು - ಕವನ
Sunday, February 28, 2021
Edit
ತ್ವಾಹಿಫಾ 10ನೇ ತರಗತಿ
ಸರಕಾರಿ ಪ್ರೌಢಶಾಲೆ, ಹಿರೇಬಂಡಾಡಿ
ಪುತ್ತೂರು ತಾಲೂಕು
ಬದುಕು - ಕವನ
ಬದುಕಿದು ನದಿ ಕಾವೇರಿ ಹಾಗೆ
ಹರಿಯುತಿರಲಿ ಹೀಗೆ.....!
ಹರಿವಲ್ಲೆಲ್ಲಾ ಕಶ್ಮಲಗಳ ಮೀರಿಸುವಂತಹ ಸುದ್ದಿ !
ಶುದ್ಧ ಮನಸ್ಸಿನ ಸದ್ಗುಣಿಯಾಗಿ
ಇನ್ನೊಬ್ಬರ ಬಾಳನ್ನು ತಿದ್ದಿ...!
ಕೆಡುಕಿನ ನಡುವೆಯೇ ಬೆಳೆದರೂ
ನೀ ಒಳಿತನ್ನೇ ಮಾಡುತ್ತಿರು...!
ಭೂಮಿಯ ಮೇಲಲ್ಲೆ ನೆಲೆಸಿರು
ನಿನ್ನಾಶ್ರಿತರಿಗೆ ನೆರಳಾಗಿರು..!
ಸಿರಿತನವೆಷ್ಟೇ ಬಂದರೂ
ಬಡಜನತೆಗೆ ನೆರವಾಗುತ್ತಿರು...
ಎತ್ತರಕ್ಕೆಷ್ಟೇ ಬೆಳೆದರೂ ನೀ
ಹೆತ್ತವರನು ಕಡೆಗಣಿಸದಿರು..!!
ನೆರೆಹೊರೆಯವರ ಪಾಲಿಗೆ ನೀನು
ಹೊರೆಯಾಗದಿರು...... ತಮ್ಮ
ಮರೆಯಲು ಬೇಡ ಅವರೊಂದಿಗಿನ
ಕರ್ತವ್ಯಗಳು ಅನನ್ಯ.....!!
ಹಿರಿಯರ ಮುಂದೆ ನಮ್ರತೆ ಇರಲಿ
ನಡೆ - ನುಡಿಯಲ್ಲಿ ನಿನ್ನ ಕಿರಿಯರೊಂದಿಗೆ
ಕರುಣೆಯ ತೋರು
ಮುತ್ತಿನ ನುಡಿಯಿದು ಚಿನ್ನ...!
ಆಸೆಯ ಕದವನು ಮುಚ್ಚಿಡು
ತೆರೆದರೆ ನೆಮ್ಮದಿ ಕಾಣದು
ಬಿಕ್ಕಟ್ಟಿಗೆ ಎಡೆ ನೀಡದೆ ನೀ....
ಒಗ್ಗಟ್ಟಿನ ಪರವಾಗಿರು
ಸತ್ಸಂಗದ ಕೈ ಬಿಡದಿರು ,
ಗುರುಗಳ ನೀ ನಿಂದಿಸಿ
ವಿಶ್ವಾಸಕ್ಕೆ ಭಂಗವ ತರದಿರು..!!
ಪತಂಗದಂತೆ ಹಾರದಿರು ನೀ
ವಿತಂಡ ವಾದಿಗಳೆಡೆಗೆ...
ಸುರಂಗದಂತೆ ಕೊರೆಯುವುದು ನಿನ್ನ
ಗೌರವವನದು ಕೊನೆಗೆ....!!!
...............ತ್ವಾಹಿಫಾ 10ನೇ ತರಗತಿ
ಸರಕಾರಿ ಪ್ರೌಢಶಾಲೆ, ಹಿರೇಬಂಡಾಡಿ
ಪುತ್ತೂರು ತಾಲೂಕು