-->
ಆದಿಯ ಚಿತ್ರ ಪತ್ರ - 51

ಆದಿಯ ಚಿತ್ರ ಪತ್ರ - 51

    ಆದಿ ಸ್ವರೂಪ
   ಸ್ವರೂಪ ಅಧ್ಯಯನ ಸಂಸ್ಥೆ
   ಮಂಗಳೂರು

                     ಆದಿಯ ಚಿತ್ರ ಪತ್ರ - 51
         
                    ಆದಿಯ ಚಿತ್ರ ಪತ್ರ-51

     ನೀವು ಮೂರು ಜನ್ಮಕ್ಕೂ ಉದ್ದಾರ ಆಗಲ್ಲ..!!!

     ಎಷ್ಟು ಸಲ ಹೇಳೋದು..... !!    ಹೇಳಿ ಹೇಳಿ ಸಾಕಾಯ್ತು.... ನಿನಗೆ ಹೇಳೋದು ಒಂದೇ ಆ ಕತ್ತೆಗೆ ಹೇಳೋದು ಒಂದೇ. ನೀನು ಈ ಜನ್ಮಕ್ಕೆ ಉದ್ಧಾರ ಆಗಲ್ಲ...!! ಈ ಜನ್ಮಕ್ಕೆ ನೀನು ಬುದ್ಧಿ ಕಲಿಯಲ್ಲ...!!   ಸಾರ್ ಒಂದು ನಿಮಿಷ... ನಿಮಗೆ ಅದು ಹೇಗೆ ಗೊತ್ತಾಯಿತು ಸಾರ್...!! ನಾನು ಈ ಜನ್ಮಕ್ಕೆ ಉದ್ಧಾರ ಆಗಲ್ಲ ಅಂತ ಹೇಗೆ ಗೊತ್ತಾಯ್ತು ಸಾರ್.....!!!?

      ಗೋಪಾಡ್ಕರ್ ಸರ್ ಹೇಳಿಕೊಟ್ಟಂತೆ ಧೈರ್ಯ ಮಾಡಿ ಹೇಳಿದೆ.! ಸಾರ್ ನೀವು ಬೇಜಾರು ಮಾಡ್ಬೇಡಿ. ನಾನೂ ಒಂದು ವಿಷಯ ನಿಮಗೆ ಹೇಳ್ಬೇಕಾಗ್ತದೆ. ಆದರೆ ಹೇಳ್ಲಿಕ್ಕೆ ಬೇಜಾರಾಗ್ತದೆ...!! ನೀವು ಹಿರಿಯರು ಮತ್ತು ನೀವು ತುಂಬಾ ಓದಿದವರು...!! ಆದರೂ ಒಂದು ಮಾತು ಹೇಳಿ ಬಿಡ್ತೇನೆ ಸಾರ್.....! ಒಂದೇ ಒಂದು ಸಾರಿ ಹೇಳಿ ಬಿಡ್ತೇನೆ. ಯಾಕಂದ್ರೆ ನಿಮಗೆ ಒಂದು ಪ್ರಾಬ್ಲಮ್ ಇದೆ. ಆಗಾಗ ಹಿಂದೆ ಮುಂದೆ ಯೋಚಿಸದೆ ಬಾಯಿಗೆ ಬಂದ ಹಾಗೇ ಹೇಳಿಬಿಡ್ತೀರಿ....!! ನೀವು ಸಾರ್....!! ಹೇಳಲು ಬೇಜಾರಾಗ್ತದೆ ನೀವು ಸರ್....!! ನೀವು ಮೂರು ಜನ್ಮಕ್ಕೂ ಉದ್ಧಾರ ಆಗಲ್ಲ....!!!. ಬಯ್ಯುವುದರಿಂದ ಏನೂ ಪ್ರಯೋಜನ ಇಲ್ಲಾ ಅಂತ ಗೊತ್ತಿದ್ರೂ , ಮತ್ತೆ ಮತ್ತೆ ಹೇಳಬಾರದು ಅನ್ನೋದನ್ನು ನೀವು ಮೂರು ಜನ್ಮಕ್ಕೂ ಕಲಿಯಲ್ಲ.
Sorry.. ಸರ್....!!!!

         ನನ್ನ ಗೆಳತಿ ರಕ್ಷಿತಾ ಇದನ್ನು. ಈ ಮಾತನ್ನು ದೈರ್ಯದಿಂದ ಅಮ್ಮನಿಗೂ ಹೀಗೆಯೇ ಹೇಳಿ ಬಿಟ್ಟಳಂತೆ. ಕೇಳಿ ಕೇಳಿ ಸಾಕಾಯ್ತು...!! ಅದು ಇದು ಇಟ್ಟದ್ದಕ್ಕೆ ಮುಟ್ಟಿದ್ದಕ್ಕೆ ಬೈಗಳು. ಯಾವ ಕೆಲಸವೂ ಮಾಡ್ಲಿಕೆ ಆಗ್ತಿಲ್ಲ. ಏನಾದ್ರು ತಪ್ಪು ಹೆಚ್ಚು ಮಾಡಿ ಅವರಿಗೆ ಬುದ್ಧಿ ಕಲಿಸಬೇಕಂತ ಕಾಣ್ತದೆ ಆದಿ...!! ಅಂತ ನನ್ನಲ್ಲಿ ಹೇಳಿಕೊಂಡಳು.

       ನೋಡು ರಕ್ಷಿತಾ.. ಅಪ್ಪ ಒಂದು ಮಾತು ಹೇಳುತ್ತಿರುತ್ತಾರೆ. ಈ ದೊಡ್ಡವರಿದ್ದಾರಲ್ಲಾ.. ಅವರು 1960-70 ರ ಹಳೇ ಮೋಡೆಲ್ ಆಲ್ವಾ.. ಅದನ್ನು ರಿಪೇರಿ ಮಾಡ್ಲಿಕ್ಕೆ ಸ್ವಲ್ಪ ಕಷ್ಟ. ಆ ಮೆಶಿನ್ ತುಕ್ಕು ಹಿಡಿದಿರುತ್ತದೆ.. ಸೀಮೆ ಎಣ್ಣೆ... ಇನ್ಯಾವುದಾದರೂ ಎಣ್ಣೆಯಲ್ಲಿ ಹಾಕಿ ಬೋಲ್ಟ್ ಲೂಸ್ ಆಗಲು ಕಾಯ್ಬೇಕು....!! 

      ರಕ್ಷಿತಾ.. ನೀನು ಹೊಸ ಮೋಡೆಲ್ ಅಲ್ವಾ..! ನಿನ್ನನ್ನೇ ನೀನು ರಿಪೇರಿ ಮಾಡ್ಲಿಕೆ ಸುಲಭ. ಅವರು ಹೇಳಿದ್ದನ್ನೇ ಹೇಳಿದಾಗ, ಬೈದಾಗ.. ಒಂದು ದೀರ್ಘ ಉಸಿರು ತೆಗೆದುಕೋ. ಮನಸ್ಸಲ್ಲಿ ಏನನ್ನೂ ಹೊತ್ತುಕೊಂಡು ತಿರುಗಾಡಬೇಡ. ನಿಮ್ಮ ಬೈಗಳು, ಕಿರಿ ಕಿರಿ ಕೇಳೋದಕ್ಕೆ ಒಳ್ಳೆಯದಾಗ್ತದೆ ಅಂತ ಮನಸ್ಸಲ್ಲೇ ಹೇಳಿಕೊ.... ರಕ್ಷಿತಾ.. ಅಪ್ಪ ಅಮ್ಮ ಒಳ್ಳೆಯವರು. ಕೆಲವೊಮ್ಮೆ ಮೋಡೆಲ್ ಬರುವಾಗಲೇ ಸರಿ ಇರೋದಿಲ್ಲ. ಅವರನ್ನು ಕ್ಷಮಿಸು. ನಿನ್ನ ತಪ್ಪನ್ನೂ ತಿದ್ದಿಕೊ.. ನಿನ್ನ ತಪ್ಪು ನಿನಗೆ ಕಾಣ್ತದಾ ನೋಡು...!!

    ಅಕ್ಷತಾ ಒಪ್ಪಿಕೊಂಡಂತೆ ಮಾಡಿದಳು. ಈಗ ನೆಮ್ಮದಿಯ ಉಸಿರು ಚೆನ್ನಾಗಿ ತೆಗೆದುಕೊಳ್ತಾಳೆ. ಅಪ್ಪನ ಸೆಮಿನಾರ್ ಗೆ ಬಂದ ರಕ್ಷಿತಾಳ ಅಮ್ಮ ಈಗ ತಾವೇ ರಿಪೇರಿ ಮಾಡಿ ಕೊಂಡಿದ್ದಾರೆ...!

     ನೀವೂ ರಿಪೇರಿಗೆ ಬನ್ನಿ. ಕೆಲವು ಟೈಟಾದ ಬೋಲ್ಟ್ ಗೆ ಅಪ್ಪನ ಆಪ್ತ ಸಲಹೆಯ ಪೆಟ್ಟಿಗೆಯಲ್ಲಿರುವ ಸ್ಪಾನರ್ ಸೆಟ್ ಕರೆಕ್ಟ್ ಸೆಟ್ ಆಗ್ತದೆ...!!

ಈ ಪತ್ರ
ಅಪ್ಪನ ಮಿತ್ರರಾದ,
ಸಂಘಟಕರು,ಕ್ರಿಯಾಶೀಲ ಸಂಪನ್ಮೂಲ ವ್ಯಕ್ತಿಗಳು, ಪರಿಸರ ಕಾಳಜಿ, ಶಿಕ್ಷಣ ಚಿಂತಕರು, ಉದ್ಯಮಿ..ಸಾಧಕರು.. ನಿಸರ್ಗ ಮಂಜುನಾಥ್ ಇವರಿಗೆ ಅರ್ಪಣೆ.

 ಆದಿ ಸ್ವರೂಪ
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು


Ads on article

Advertise in articles 1

advertising articles 2

Advertise under the article