
ಅಪ್ಪ ನೀನೆ ನನಗೊಂದು ದೊಡ್ಡ ಉಡುಗೊರೆ !
Friday, January 8, 2021
Edit
ಲಾವಣ್ಯ ಎಸ್ ಜಿ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ
ಬಂಟ್ವಾಳ ತಾಲೂಕು
ಅಪ್ಪ ನೀನೇ ನನಗೊಂದು ದೊಡ್ಡ ಉಡುಗೊರೆ !
ಅಪ್ಪನನ್ನು ತಂದೆ, ಪಿತಾಶ್ರೀ, ಜನಕ ಎಂದು ಕರೆಯುತ್ತೇವೆ. ನಾವು ಎಡವಿದಾಗ ಸರಿಯಾದ ದಾರಿಯಲ್ಲಿ ನಡೆಸುವವರು, ನಾವು ನೋವಲ್ಲಿ ಇದ್ದಾಗ ಸಾಂತ್ವಾನ ಹೇಳುವವರು. ನಾವು ತಪ್ಪು ಮಾಡಿದಾಗ ಕ್ಷಮಿಸಿ ತಿದ್ದಿ ಬುದ್ಧಿ ಹೇಳುವವರು. ಒಂದು ಸಂಸಾರವನ್ನು ನಡೆಸುವ ಸಾರಥಿಯಾಗಿ, ಮಕ್ಕಳಿಗೋಸ್ಕರ, ಮಕ್ಕಳ ಕಲಿಕೆಗೋಸ್ಕರ ಚೆನ್ನಾಗಿ ಬಾಳಬೇಕೆಂಬ ಆಶಯವನ್ನು ಇಟ್ಟುಕೊಂಡು ಅವರು ಕಷ್ಟಪಟ್ಟು ಶ್ರಮ ಪಡುವ ರೀತಿ ಶ್ಲಾಘನೀಯ.
ನಾನು ಯಾವಾಗಲೂ ಏನಾದ್ರು ಎಡವಟ್ಟು ಮಾಡಿಲ್ಲ ಅಂದ್ರೆ ಸಮಾಧಾನನೇ ಇಲ್ಲ. ಎಡವಟ್ಟು ಮಾಡಿದಾಗ ಅಪ್ಪ ನನ್ನ ಮೇಲೆ ಸ್ವಲ್ಪ ಗದರುತ್ತಿದ್ದರು. ಆಗ ನಾನು ಅಳಲು ಶುರುಮಾಡುತ್ತಿದ್ದೆ. ಮತ್ತೆ ಅಪ್ಪ ಬಂದು ಸಮಾಧಾನ ಮಾಡಿ ಹಾಗೆಲ್ಲ ಮಾಡಬಾರದು ಎಂದು ಬುದ್ಧಿ ಹೇಳುತ್ತಿದ್ದರು. ಅಪ್ಪ ನೋಡಲು ಕಟು ಸ್ವಭಾವದಂತೆ ಕಂಡಿದ್ದರು ಅವರು ನಮ್ಮ ಮೇಲೆ ತೋರುವ ಪ್ರೀತಿ ಅಮೋಘ !.
ಅಪ್ಪ ಯಾವಾಗಲೂ ಕುಟುಂಬ, ಮಕ್ಕಳ ಏಳಿಗೆಗಾಗಿ ಶ್ರಮಪಡುವಂತಹ ಜೀವ. ಅವರು ನಮ್ಮ ಬಗ್ಗೆ ಸಾವಿರಾರು ಕನಸುಗಳನ್ನು ಕಂಡಿರುತ್ತಾರೆ. ಅದನ್ನು ನನಸು ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಅಂದು ನನ್ನ 7ನೇ ವರ್ಷದ ಹುಟ್ಟುಹಬ್ಬ. ಆಗ ನನ್ನ ಅಪ್ಪ ನನಗೆ ಒಂದು ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟರು. ನಾನು ಅಪ್ಪನತ್ರ ಕೇಳಿದೆ " ಅಪ್ಪ ನೀವು ಇವತ್ತು ನಂಗೆ ಗೌನ್ ಕೊಡಿಸ್ತೀನಿ ಅಂತ ಹೇಳಿದ್ರಿ. ಆದ್ರೆ ನೀವು ಪುಸ್ತಕ ತಂದಿದ್ದೀರಲ್ಲಾ... " ಎಂದು ಕೇಳಿದೆ. ಅದಕ್ಕೆ ಅಪ್ಪ ಹೇಳಿದರು , " ನಿನಗೆ ಗೌನ್ ಯಾವತ್ತಾದ್ರೂ ತೆಗೆದು ಕೊಡಬಹುದು ಅದರ ಬದಲು ಈ ಪುಸ್ತಕ ತಂದದ್ದು ಯಾಕಂದ್ರೆ ಪುಸ್ತಕ ಒಂದು ವೇಳೆ ಹರಿದು ಹೋದರೂ ವಿಷಯ ನಿನ್ನಲ್ಲಿ ಉಳಿದಿರುತ್ತದೆ. ನಿನಗೆ ಜೀವನದುದ್ದಕ್ಕೂ ನೆನಪಿರುತ್ತದೆ. ಅದಕ್ಕಾಗಿ ಪುಸ್ತಕ ತಂದೆ ಎಂದ್ರು. ಆ ಪುಸ್ತಕವನ್ನು ಓದಿದೆ ಆ ಪುಸ್ತಕ ತುಂಬಾ ಚೆನ್ನಾಗಿತ್ತು. ಅಂದಿನಿಂದ ನನ್ನಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಯಿತು.
ಒಂದು ದಿನ ಅಪ್ಪ ಹೇಳಿದಂತೆ ನನಗೊಂದು ಹೊಸ ಗೌನ್ ತಂದುಕೊಟ್ಟರು. ಅದನ್ನು ಕಂಡು ನನಗಂತೂ ಸಕ್ಕತ್ಖುಷಿಯಾಯಿತು. ಆದರೆ ಈಗ ನನ್ನ ಬಳಿ ಅಪ್ಪ ತಂದುಕೊಟ್ಟಂತಹ ಗೌನ್ ಇಲ್ಲ. ಆದರೆ ಅವರುತಂದು ಕೊಟ್ಟಂತಹ ಪುಸ್ತಕ , ಅದರಲ್ಲಿ ಓದಿದ ಕಥೆಗಳು ನನ್ನ ಮನದಲ್ಲಿ ಇನ್ನೂ ಇದೆ. ಅಪ್ಪ ನನಗೆ ಕಲಿಸಿದಂತಹ ಸಂಸ್ಕಾರ, ಸಂಪ್ರದಾಯ, ಅವರ ಜೊತೆ ಕಳೆದ ಕ್ಷಣಗಳನ್ನು ಮರೆಯಲುಸಾಧ್ಯವೇ ಇಲ್ಲ, ನಿಜ ಹೇಳಬೇಕೆಂದರೆ ಅಪ್ಪ ನೀನೆ ನನಗೊಂದು ದೊಡ್ಡ ಉಡುಗೊರೆ !
ಲಾವಣ್ಯ ಎಸ್ ಜಿ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ
ಬಂಟ್ವಾಳ ತಾಲೂಕು