-->
ಮೊಬೈಲಿನ ಐಲು - ಕವನ

ಮೊಬೈಲಿನ ಐಲು - ಕವನ

ಅಂಕಿತ 10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು


ಮೊಬೈಲಿನ ಐಲು - ಕವನ

ಮೊಬೈಲುಗಳ ಮೇಲಿನ ಐಲು
ಈಗ ಇದು ಎಲ್ಲರ ಕೈಲೂ.....
ಆಟವಾಡುವ ಮಕ್ಕಳಿಗಿದು
ಆಟದ ಸಾಮಾನಿನ ಅಳತೆಗೋಲು !!

ಕೂಗಿದರು ಕೇಳಿಸದ ಈ ಕಾಲದಲ್ಲಿ.
ದೂರದ ಸ್ಥಳದಿಂದ ಬಂದಿರುವ .
ಕರೆಯ ತಿಳಿಸುತ್ತಾ......
ವಿಜ್ಞಾನ ದೇವರ ದಯೆಯಿಂದ.
ತನ್ನ ಕ್ರೌರ್ಯ ಬೀರುತ್ತಿರುವ.
ಐಲು.....! ಇದು ಮೊಬೈಲು...!

ಎಲ್ಲಿ ಕುಂತರೂ ಅಲ್ಲಿ ! ಎಲ್ಲಿ ನಿಂತರು ಅಲ್ಲಿ !
ಯಾರೊಬ್ಬರೂ ಬೇಡ ತನ್ನ ಗೆಳೆಯರಾಗಿ.....
ಮೊಬೈಲಿನ ಐಲೇ ಸಾಕು ! 
ಮನದ ಮಾತನ್ನು ಕಟ್ಟಿಹಾಕಿ....
ಸ್ವಂತ ಚಿಂತನೆಗೆ ಚಿತೆ ಇಕ್ಕಿ....
ಸರ್ವರನ್ನು ಸ್ವಾಹ ಮಾಡುವುದೇ ಮೊಬೈಲು.
ಐಲು ಐಲು ಇದು ಮೊಬೈಲು....!!!
ಅಂಕಿತಾ 
೧೦ ನೇ ತರಗತಿ

Ads on article

Advertise in articles 1

advertising articles 2

Advertise under the article