ಚುಟುಕುಗಳು
Wednesday, January 13, 2021
Edit
ಆದ್ಯಂತ್ ಅಡೂರು
7ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ
ಚುಟುಕುಗಳು
ವಿವೇಕಾನಂದರು
ವೀರ ಸನ್ಯಾಸಿ ವಿವೇಕಾನಂದರು
ಶಾಂತಿ, ಪ್ರೀತಿ, ಅಹಿಂಸೆಯ ಸಾರಿದರು
ಅವರ ಗುರು ರಾಮಕೃಷ್ಣ ಪರಮಹಂಸರು
ವಿವೇಕಾನಂದರು ಪ್ರಾತ: ಸ್ಮರಣೀಯರು
ಬೇಕಲಕೋಟೆ
ಕಾಸರಗೋಡಿನ ಬೇಕಲಕೋಟೆ
ದಪ್ಪದ ಕಲ್ಲಿನ ದೊಡ್ಡ ಕೋಟೆ
ಇತಿಹಾಸ ಪ್ರಸಿದ್ಧವಾದ ಕೋಟೆ
ಸಮುದ್ರದ ದಡದಲ್ಲಿರುವ ಕೋಟೆ
ವೈದ್ಯರು
ಕಣ್ಣಿಗೆ ಕಾಣುವ ದೇವರು ವೈದ್ಯರು
ರೋಗಕೆ ಔಷಧಿ ನೀಡುವರು
ನಮಗಾಗಿ ಅವರು ದುಡಿಯುವರು
ಆರೋಗ್ಯದ ಪ್ರಸಾದ ನೀಡುವರು
ಗುರುಗಳು
ಗುರುಗಳು ವಿದ್ಯೆಯ ಕಲಿಸುವರು
ಮುಂದಿನ ಗುರಿಯನು ತೋರುವರು
ನನ್ನಯ ಗುರುಗಳು ದೇವರ ಸಮಾನ
ಅವರಿಗೆ ನನ್ನ ಭಕ್ತಿಯ ನಮನ
ಚಂದಿರ
ಬಾನಿನಲ್ಲಿ ಇರುವನು ಚಂದಿರ
ನೋಡಲು ಇವನು ಸುಂದರ
ರಾತ್ರಿಯಲ್ಲಿ ಬೆಳಕು ನೀಡುವನು
ಅಮವಾಸ್ಯೆ ದಿನ ಮಾಯವಾಗುವನು
ಆದ್ಯಂತ್ ಅಡೂರು
7ನೇ ತರಗತಿ