ಆದಿಯ ಚಿತ್ರ ಪತ್ರ - 46
Wednesday, January 20, 2021
Edit
ಆದಿ ಸ್ವರೂಪ
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
ಆದಿಯ ಚಿತ್ರ ಪತ್ರ - 46
ಆದಿಯ ಚಿತ್ರ ಪತ್ರ- 46
ಕತೆ : 1
" ಇಬ್ಬರಲ್ಲಿ ಒಬ್ಬರು ಸುಮ್ಮನಿರಬೇಕು".
ಮಂಗಳೂರು KSRTC ಬಸ್ ಸ್ಟ್ಯಾಂಡಿನಿಂದ ಪುತ್ತೂರಿಗೆ ಬಸ್ಸು ಹೊರಟಿತು. 500 ಮೀಟರ್ ಬಂದಾಗಲೇ ಗೊತ್ತಾದದ್ದು. ಕಂಡಕ್ಟರ್ ಬಸ್ಸಿಗೆ ಹತ್ತಿರಲಿಲ್ಲ. ಸಾಯಿಬೀನ್ ಕಾಂಪ್ಲೆಕ್ಸ್ ಹತ್ತಿರ ಬಂದಾಗ ಕಂಡಕ್ಟರ್ ಹತ್ತಿಲ್ಲವೆಂದು ಪ್ರಯಾಣಿಕರಲ್ಲಿ ಒಬ್ಬರು ಡ್ರೈವರ್ ಗೆ ಸುದ್ದಿ ಮುಟ್ಟಿಸಿದರು. ಡ್ರೈವರ್ ಸಿಟ್ಟಿನಿಂದ ಅಲ್ಲೇ ಬಸ್ಸಿಗೆ ಬ್ರೇಕ್ ಹಾಕಿದ. ಕಂಡಕ್ಟರನ್ನು ಕರಕೊಂಡು ಬರಲು ಡ್ರೈವರ್ ನ Ego ಬಿಡಲಿಲ್ಲ. ಕಂಡಕ್ಟರ್ ನ Ego ವೂ ಬಸ್ಸು ಹಿಂದಕ್ಕೆ ಬಾರದೆ ಬರಲ್ಲ ಅಂತ ಹೇಳಿತು !!.
ತುರ್ತು ಇರುವ ಪ್ರಯಾಣಿಕರೊಬ್ಬರು ಆಟೋ ಹತ್ತಿ ಬಸ್ಟ್ಯಾಂಡಿಗೆ ಹೋಗಿ ಕಂಡಕ್ಟರನ್ನು ಕಾಡಿ ಬೇಡಿ ಕರಕೊಂಡು ಬಂದರು. ತಕ್ಷಣ ಪರಸ್ಪರ ಬೈಗುಳಗಳ ಯುದ್ಧ ಆರಂಭವಾಯಿತು. ಈ ಕ್ಷಣ ಬಸ್ಸು ಓರೆಕೋರೆ ಓಡುತ್ತಿತ್ತು. ಪ್ರಯಾಣಿಕರು ಅವರನ್ನು ಸಮಾಧಾನಿಸುವುದರಲ್ಲಿ ಸುಸ್ತಾದರು !!. ಇವರಿಬ್ಬರ ಅಹಂಕಾರದ ಮಧ್ಯೆ ಮನೆಗಳಲ್ಲಿ ಹೆಂಡತಿ-ಮಕ್ಕಳ ನೆಮ್ಮದಿ ಹೇಗಿರಬಹುದೆಂದು ಊಹಿಸಲೂ
ಕಷ್ಟ ಇಲ್ಲ !!.
ಯಾರ ಜೀವ ಯಾರ ಬದುಕು ಯಾರ ಕೈಯಲ್ಲಿದೆ!!.
ಕಥೆ - 2
ಇಬ್ಬರೂ ಒಬ್ಬರನ್ನೊಬ್ಬರು ಅರ್ಥ
ಮಾಡಿಕೊಂಡಿದ್ದರೆ..!
ಮತ್ತೊಂದು ಸಲ ಅಂತಹುದೆ ಘಟನೆ ನಡೆಯಿತು. ಡ್ರೈವರ್ ಬಿಟ್ಟು ಹೋದ ತಪ್ಪಿಗೆ, ಕಂಡಕ್ಟರ್ ಬಸ್ಸಿನ ಹಿಂದೆಯೇ ಬಹಳದೂರ ಓಡಿಕೊಂಡೇ ಬಂದು ಬಸ್ಸು ಹತ್ತಿದ. ಕಂಡಕ್ಟರನ್ನು ಬಿಟ್ಟು ಹೊರಡಲು ಕಾರಣವಾದ ಕತೆ ಪರಸ್ಪರ ಹೇಳಿ ಕೊಂಡು ಇಬ್ಬರೂ ನಕ್ಕು ನಕ್ಕು ಸುಸ್ತು. ಪ್ರಯಾಣಿಕರೂ ಅವರನ್ನು ನೋಡಿ ನಕ್ಕದ್ದೇ ನಕ್ಕದ್ದು. ಇಬ್ಬರೂ ಸಿಟ್ಟನ್ನೂ - ತಪ್ಪನ್ನು ಸ್ವಲ್ಪ ಹೊತ್ತು ಬದಿಗಿರಿಸಿ ನಕ್ಕಾಗ ಆ ದಿನ ನಮ್ಮೆಲ್ಲರ ಪ್ರಯಾಣ ಸುಂದರವಾಗಿ ಸಾಗಿತು. ಬಸ್ಸು ಓರೆಕೋರೆ ಹೋಗಿಲ್ಲ. ಎರಡನೇ ಕಥೆಯ ಚಾಲಕ - ನಿರ್ವಾಹಕರ ಕುಟುಂಬದವರು ಎಲ್ಲರೂ.. ವಾಹ್..ನೆಮ್ಮದಿಯಿಂದಿದ್ದಾರೆ !!.
ಈ ಎರಡು ಕಥೆಯೊಳಗೆ ನಾವು ನೀವು ಯಾವ ಕುಟುಂಬದವರು..? ನಮ್ಮಲ್ಲಿ ಯಾರು ಡ್ರೈವರ್.. ಯಾರು ಕಂಡಕ್ಟರ್. ಮಕ್ಕಳು ಪ್ಯಾಸೆಂಜರಾ...? ಬಸ್ಸಿನ ಬೋರ್ಡ್ Ego ವಾ...ಪ್ರಯಾಣ ಹೇಗಿದೆ..?
ಸ್ವರೂಪಕ್ಕೆ ಬಹಳ ಬೆಂಬಲ ಪ್ರೋತ್ಸಾಹ ಕೊಟ್ಟ ಸ್ವರೂಪದ ಪೋಷಕರು ಮಯ್ಯ ಕುಟುಂಬದ ಕೃಷ್ಣರಾಜರಿಗೆ ಈ ಪತ್ರ ಅರ್ಪಣೆ.
ಕಲೆ, ಸಂಗೀತಕ್ಕೆ, ಸಮಾಜಸೇವೆಗೆ ಇವರು ಮಾದರಿ..
ನನ್ನ ಸ್ವ - ರೂಪ ದ
ನಾನು ಎರಡನೇ ಕಥೆಯೊಳಗೆ
ನೆಮ್ಮದಿಯ.... ಆದಿ
ಆದಿ ಸ್ವರೂಪ
ಮಂಗಳೂರು