-->
ಆದಿಯ ಚಿತ್ರ ಪತ್ರ - 42

ಆದಿಯ ಚಿತ್ರ ಪತ್ರ - 42

    ಆದಿ ಸ್ವರೂಪ 
    ಸ್ವರೂಪ ಅಧ್ಯಯನ ಸಂಸ್ಥೆ 
    ಮಂಗಳೂರು

                     ಆದಿಯ ಚಿತ್ರ ಪತ್ರ - 42 
ಆದಿಯ ಚಿತ್ರ ಪತ್ರ - 42.
 
 
       ಬೈಯುವುದು ಅವರ ಕಾಯಿಲೆ

              ಪ್ರಿಯಾ.. ಕಣ್ಣು ಮುಚ್ಚಿ ಕುಳಿತುಕೋ.. ಶಾಲೆಯ ಭಯ ಹೋಯ್ತಾ ನೋಡು. ನೀನೀಗ ಶಾಲೆಗೆ ಹೋಗುತ್ತಿದ್ದಿ.... ಅಂತ ಯೋಚಿಸು. ನಿನ್ನ ಕಂಡಾಗ ಮಕ್ಕಳು ಏನೇನು ಹೇಳುತ್ತಾರೆ ನೋಡು. ನೀನೇನು ಮಾಡುತ್ತಿ ಹೇಳು. ನಗುತ್ತಿದ್ದೇನೆ ಅಂಕಲ್. ನಿನ್ನ ಮನಸ್ಸಿನೊಳಗೆ ಅವರಿಗೆ ಏನು ಹೇಳುತ್ತಿ.. ನನಗೆ ಏನೋ ಹೇಳುತ್ತಿದ್ದಾರೆ.. ಹೇಳಲಿ. ಪಾಪ ಅವರಿಗೆ ಹಾಗೆಲ್ಲ ಹೇಳಬಾರದು ಅಂತ ಅವರಿಗೆ ಗೊತ್ತಿಲ್ಲ. ಅವರಿಗೆಲ್ಲ ಎದುರು ಸಿಕ್ಕಾಗ.. ನೀವು ಹೇಳಿದಂತೆ ಎರಡು ಕೈಜೋಡಿಸಿ ನಗುಮುಖದಿಂದ ನಮಸ್ತೆ ಹೇಳುತ್ತಿದ್ದೇನೆ. ಅವರು ಏನು ಹೇಳಿದ್ರೂ.. ಕೇಳುವುದಕ್ಕೆ ಒಳ್ಳೆಯದಾಗುತ್ತಿದೆ ಅಂತ ಹೇಳುತ್ತಾ ನಗುತ್ತೇನೆ.

                 ಪಾಪ ಅವರಿಗೆ ಇನ್ನೊಬ್ಬರಿಗೆ ನೋವಾಗುವಂತೆ ಮಾತನಾಡಬಾರದು ಅಂತ ಗೊತ್ತಿಲ್ಲ ಅಂತ ತಿಳಿದುಕೊಳ್ಳುತ್ತೇನೆ. ನೀವು ಹೇಳಿದಂತೆ ಅವರನ್ನು ಕ್ಷಮಿಸುತ್ತಿದ್ದೇನೆ ಅಂಕಲ್. ಪ್ರಿಯ ಸರಿ ಇದೆ. ಮುಂದೆ ಹೋಗು. ಟೀಚರ್ಸ್ ಗಳಿಗೆ ಎರಡು ಕೈಜೋಡಿಸಿ ಚಂದ ನಗುತ್ತಾ ನಮಸ್ತೆ ಹೇಳುತ್ತಿದ್ದೇನೆ. ಅವರು ತುಂಬಾ ಒಳ್ಳೆಯವರು. ಆದರೆ ಪಾಪ, ಮಕ್ಕಳಿಗೆ ಬೈಯಬಾರದು, ಹೊಡೆಯಬಾರದು, ಮಕ್ಕಳಿಗೆ ಭಯ ಆದರೆ ಅನೇಕ ಸಾಮರ್ಥ್ಯಗಳಲ್ಲಿ ವಂಚಿತರಾಗುತ್ತಾರೆ.. ಅಂತ ಅವರಿಗೆ ಗೊತ್ತೇ ಇಲ್ಲ.. ಹಾಗಂತ ತಿಳಿದುಕೊಳ್ಳುವ ಮತ್ತು ತಾತ್ಕಾಲಿಕ ಪರೀಕ್ಷೆ ಫಲಿತಾಂಶಕ್ಕಾಗಿ ಶಿಕ್ಷೆ ಕೊಡುತ್ತಿದ್ದೇವೆ ಮತ್ತು ಅದು ತಪ್ಪು ಅಂತ ಅವರಿಗೆ ಗೊತ್ತಾಗುತ್ತಿಲ್ಲ. ಪಾಪ ಎಂದಾದರೂ ಅವರಿಗೆ ಗೊತ್ತಾದರೆ.. ಮಕ್ಕಳಿಗೆ ಎಂದು ನೋವು ಕೊಡದೆ ಭಯ ಪಡಿಸದೆ ಇದ್ದಾರು.. ಅಂತ ಹೇಳಿಕೊಳ್ಳುತ್ತಾ ಇದ್ದೇನೆ. ಶಿಕ್ಷಕರು ಎಲ್ಲರೂ ಒಳ್ಳೆಯವರು. ಅವರನ್ನು ಕ್ಷಮಿಸುತ್ತೇನೆ. ದೇವರು ಅವರಿಗೆ ಬುದ್ದಿ ಕೊಡಲಿ ಅಂತ ಪ್ರಾರ್ಥಿಸುತ್ತೇನೆ.

           ಪ್ರಿಯ ಎಲ್ಲಾ ನೆನಪಿಟ್ಟುಕೊಂಡು ನಾನು ಹೇಳಿಕೊಟ್ಟ ಹಾಗೆಯೇ ಹೇಳಿದ್ದಿ.. ನೀನು ಗ್ರೇಟ್ ಪ್ರಿಯ.. ನೀನು ಜಾಣೆ.. ನೀನು ಧೈರ್ಯವಂತೆ. ಇನ್ನೇನಾದರೂ ಹೇಳ್ತೀಯಾ ಪ್ರಿಯಾ. ಯಾರು ಏನು ಮಾಡಿದರು.. ಏನು ಹೇಳಿದ್ರು ವಿರೋಧಿಸದೆ ಅವರಿಗೆ ಸರಿ-ತಪ್ಪು ಹೇಳುತ್ತೇನೆ.. ಮತ್ತೆ.. ಮತ್ತೆ... ಮತ್ತೆ ಏನು ಪ್ರಿಯ. ಎಂಜಾಯ್ ಮಾಡುತ್ತೇನೆ. 
ಕಣ್ಣು ತೆರೆದು ಬಿಡು. ಒಮ್ಮೆ ನಿನ್ನನ್ನು ಈ ಸಂತೋಷಕ್ಕೆ ಅಪ್ಪಿಕೊಳ್ಳುತ್ತೇನೆ.. ಪ್ರಿಯಾ ಈಗ ಹೇಗಿದ್ದಿ.. ಅಂಕಲ್ ಚೆನ್ನಾಗಿದ್ದೇನೆ... ನೀವು ಆರು ತಿಂಗಳ ಹಿಂದೇನೇ ಅಪ್ಪನಿಗೆ ಸಿಗಬೇಕಿತ್ತು. ಆ ಸೈಕಾಲಜಿಸ್ಟ್ ಗಳಿಗೆ.. ಅಪ್ಪ ಅಮ್ಮನಿಗೆ, ಶಿಕ್ಷಕರಿಗೆ, ಫ್ರೆಂಡ್ಸ್ ಗಳಿಗೆ ತುಂಬಾ ತೊಂದರೆ ಕೊಟ್ಟಿದ್ದೆ.. ನಿಮ್ಮಿಂದ ಒಳ್ಳೆಯ ಪಾಠ ಆಯ್ತು. ಮಕ್ಕಳಿಗೆ, ಶಿಕ್ಷಕರಿಗೆ, ಅಪ್ಪ ಅಮ್ಮನಿಗೆ ಎಲ್ಲರಿಗೂ ನಿಮ್ಮ ಪಾಠ ಬೇಕು. ಬಹಳ ಸಂತೋಷವಾಗುತ್ತಿದೆ. ಅಪ್ಪ ಮನೆಗೆ ಇವತ್ತು ಊಟಕ್ಕೆ ಬರುವುದಕ್ಕೆ ಕಾಯುತ್ತೇನೆ. ಓಡಿಹೋಗಿ ಅಪ್ಪಿಕೊಳ್ಳುತ್ತೇನೆ. ಅಪ್ಪ- ಅಮ್ಮ ತುಂಬಾ ಒಳ್ಳೆಯವರು ಅಂತ ಒಪ್ಪಿಕೊಂಡು ಈಗಿನಿಂದಲೇ ವಿಶೇಷವಾಗಿ ಪ್ರೀತಿಸಲು ಆರಂಭಿಸುತ್ತೇನೆ. 

                  ಪ್ರಿಯಾ ನನಗೆ ಬಹಳ ಸಂತೋಷವಾಗುತ್ತಿದೆ. ನಿನ್ನಲ್ಲಿ ಬಹಳ ಮೆಚ್ಯುರಿಟಿ ಇದೆ. ನಾಳೆ ಸ್ಕೂಲಿಗೆ ಹೋಗಲು ರೆಡಿಯಾ..? Yes ಅಂಕಲ್.. ನಾಳೆ ನಾನು ಸ್ಕೂಲಿಗೆ ಹೋಗ ಬೇಕಲ್ವಾ..? ಹೌದು ಪ್ರಿಯಾ. ಅಂಕಲ್ ಹಾಗಾದ್ರೆ ಒಂದು ಕಂಡೀಷನ್. ನೀವು ಇವತ್ತು ರಾತ್ರಿ ಇಲ್ಲೇ ಇದ್ದು ನಾಳೆ ನನ್ನನ್ನು ಸ್ಕೂಲಿಗೆ ಕರಕೊಂಡು ಹೋಗಿ ಬಿಡಬೇಕು. 
                    ಮನೆಯಿಂದ ಸಿಗದ ಪ್ರೀತಿಗೆ, ಇನ್ನು ಸೆಕ್ಯೂರಿಟಿ ಸಮಸ್ಯೆಗೆ ಅವಳ ಬೇಡಿಕೆ ಸರಿ ಇದೆ. yes ಅಂದೆ.. ವಾಹ್ ಅಂದಳು.. ಎದ್ದು ಕುಣಿದು ಅಪ್ಪಿಕೊಂಡಳು..ಗಟ್ಟಿಯಾಗಿ ಹಿಡಿದುಕೊಂಡಳು. ಯಾಕೆ..?. ಯಾಕಮ್ಮಾ ಅಳ್ತಾ ಇದ್ದೀ..? ಇದು ಅಳು ಅಲ್ಲ ಅಂಕಲ್..ಇದು ಸಂತೋಷ. ಸರಿ ಸರಿ. ನಾನು ನಿನ್ನ ಜೊತೆಗೇ ಇದ್ದೇನೆ ಮಗಳೇ..

                ಪ್ರಿಯಾಳ ಬೇಡಿಕೆ ಸರಿ ಇದೆ. ಸಮಸ್ಯೆಗಳಿಂದ ಪೂರ್ತಿ ಹೊರಗೆ ಬಂದಮೇಲೆ ಅವಳ ಜೊತೆಗಿದ್ದು ಮನೆಯವರಿಗೆ ಬಿಟ್ಟು ಕೊಡುವ ಜವಾಬ್ದಾರಿ ಇದೆ. ಇಂದಿನಿಂದ ಪ್ರಿಯಾಳ ಜತೆ ಪೋಷಕರ ಮಾತಿನ ಧ್ವನಿ ಬದಲಾಗಲು ಅವರ ಜೊತೆ ನಾನು ಮಾತನಾಡಲೇ ಬೇಕಾಗಿದೆ.

              ಅದು ಇದು ಮಾತನಾಡುತ್ತಾ ಪ್ರಿಯ ನನ್ನನ್ನು ಎಳೆದುಕೊಂಡು ಹೋಗಿ ಮನೆಯೆಲ್ಲ ತೋರಿಸ್ತಾಳೆ.. ಅವಳಮ್ಮ ಆಶ್ಚರ್ಯದಿಂದ ನಮ್ಮನ್ನೇ ನಗುಮುಖದಿಂದ ನೋಡ್ತಾ ಇದ್ರು. ನಾಳೆಯಿಂದ ಶಾಲೆಗೆ ಹೋಗುತ್ತಾಳಂತೆಯಾ..? ಅಂತ ನನ್ನಲ್ಲಿ ದೂರದಿಂದಲೇ ಕೇಳಿದ್ರು.. ಅವಳನ್ನೇ ಕೇಳಿ ಅಂದೆ. ಪ್ರಿಯ ಹೌದಮ್ಮಾ ಅಂದಳು. ಪ್ರಿಯಾಳ ಬೇಡಿಕೆಯಂತೆ ಅಪ್ಪ ಬರುವ ಮೊದಲೇ ಗಮ್ಮತ್ತಿನ ಹರಟೆಯೊಂದಿಗೆ ಊಟವೂ ಗಮ್ಮತ್ತು ಆಗಿತ್ತು. ಅವಳ ಸಂತೋಷ ಕಾಣದೆ ವರ್ಷಗಳಾಗಿತ್ತು.. ಅಮ್ಮನ ಕಣ್ಣ ಹನಿಯಲ್ಲಿ ಅದು ಕಾಣುತ್ತಿತ್ತು.

          ಪ್ರಿಯ ಮತ್ತೆ ನನ್ನನ್ನು ಅವಳ ಕೋಣೆಗೆ ಕರಕೊಂಡು ಹೋದಳು.. ಕ್ರೆಯಾನ್ ಆರ್ಟ್ ಮಾಡಿ ತೋರಿಸಿದೆ. ವಾಹ್ ವಾಹ್ ಅಂತ ಕಿರಿಚಿದ್ಳು. ಉಗುರಿ ನಿಂದಲೇ ಅವಳ ಚಿತ್ರ ಮಾಡುತ್ತಿದ್ದೆ. ಅಷ್ಟರಲ್ಲಿ ಅಪ್ಪ ಬಂದರು. ಅಡುಗೆ ಕೋಣೆಯಲ್ಲಿ ಜೋರಾಗಿ ಮಾತು ಕೇಳುತ್ತಾ ಇದೆ. ಏನೋ ಜಗಳ ಮಾಡುತ್ತಾ ಇದ್ದ ಹಾಗೆ ಕಾಣುತ್ತಿದೆ. ಈ ಕ್ಷಣ ಪ್ರಿಯಾಳನ್ನು ಅಲ್ಲಿಗೆ ಹೋಗಲು ಬಿಡಲಿಲ್ಲ. ಅದೇನು ನಡೆಯಿತೋ ಗೊತ್ತಿಲ್ಲ. ಪ್ರಿಯಾಳ ತಂದೆ ಊಟ ಆದ ಕೂಡಲೇ ಕಾರಲ್ಲಿ ಹೊರಟ ಧ್ವನಿ ಕೇಳಿತು. ಸಂಜೆ ಬಂದಾಗ ಅಪ್ಪನಲ್ಲಿ ಪ್ರೀತಿಯಿಂದ ಮಾತನಾಡುವ.. ಏನು ಬ್ಯುಸಿ ಕೆಲಸದ ಒತ್ತಡ ಇರಬಹುದು. ಅಂತ ಪ್ರಿಯಾಳಿಗೆ ನಾನೇ ಸಮಾಧಾನ ಮಾಡಿದೆ. ಪುರುಸೊತ್ತೇ ಇಲ್ಲದ ಜಗತ್ತಲ್ಲಿ ಮಕ್ಕಳು ಏನನ್ನು ಕಳಕೊಳ್ಳುತ್ತಾರೆ ಅನ್ನುವ ಸತ್ಯ ಇಲ್ಲೂ ಅಡಗಿದೆ. ಮಕ್ಕಳಿಗೆ ಕೇಳಿದ್ದೆಲ್ಲವನ್ನೂ ಕೊಟ್ಟರೆ ಸಾಕು ಅನ್ನುವಲ್ಲಿ ಪೋಷಕರ ಬಿಡುವಿಲ್ಲದ ಸುಳ್ಳಿನ ಪ್ರೀತಿ ಕೂತಿದೆ. ಆ ಕಾಲಕ್ಕೆ ಬೇಡುವ ಪ್ರೀತಿ ಮತ್ತೊಂದು ಕಾಲಕ್ಕೆ ಕೊಡುವಂತಿಲ್ಲ. ತುಂಬಲಾರದ ಬೆಲೆಕಟ್ಟಲಾರದ ನಷ್ಟ.. ಮಕ್ಕಳ ಬಾಲ್ಯ...

            ಪ್ರಿಯಾಳ ಅಮ್ಮನನ್ನು ಮಾತನಾಡಿಸಲು ನಾನು ಅಡುಗೆ ಕೋಣೆಗೆ ಹೋದೆ. ಡೈನಿಂಗ್ ಹಾಲಲ್ಲಿ ಬಿಳಿ ಅನ್ನ ಮಾತ್ರ ಬಟ್ಟಲಲ್ಲಿ ಹಾಕಿಕೊಂಡು ಪದಾರ್ಥ, ಪಲ್ಯ -ಸಾಂಬಾರು, ಹಾಕದೆ ಅನ್ನ ಮಾತ್ರ ತಿನ್ನುತ್ತಿದ್ದಾರೆ. ನಾನು ಹೋಗಿ ಅವರ ಮುಂದೆ ಕುಳಿತೆ. ಯಾಕಮ್ಮ ದುಃಖದೊಂದಿಗೆ ಅನ್ನ ಮಾತ್ರ ತಿನ್ತಾ ಇದ್ದೀರಿ..? ಪಲ್ಯ, ಸಾಂಬಾರು ಯಾಕೆ ಬಡಿಸಿಕೊಂಡಿಲ್ಲ..? ಪ್ರಿಯಾಳ ಅಪ್ಪ ಈಗಷ್ಟೇ ಪಲ್ಯ, ಸಾಂಬಾರು ಚೆನ್ನಾಗಿ ಬಡಿಸಿ ಹೋಗಿದ್ದಾರೆ. ಅದನ್ನ ಅನ್ನದ ಜತೆಗೆ ಮಿಕ್ಸ್ ಮಾಡಿ ತಿನ್ನುತ್ತಿದ್ದೇನೆ. ಒರಟು ಧ್ವನಿಯಲ್ಲಿ ಉತ್ತರ ಸಿಕ್ತು. ಆ ಅಮ್ಮನಿಗೆ ಈ ಸಂದರ್ಭ ನಾನು ಏನನ್ನೂ ಹೇಳುವಂತಿರಲಿಲ್ಲ. ಅಡುಗೆ ಕೋಣೆಯಲ್ಲಿ ಬೇಯುವ ಹೆಂಗಸರನ್ನು ಅರ್ಥಮಾಡಿಕೊಳ್ಳದೆ ಗಂಡಸರು ಕೆಲವರು ಅವರನ್ನು ಬೇಯಿಸಿಯೇ ತಿನ್ನುವವರೂ ಇದ್ದಾರೆ. ಅದಕ್ಕೆಂದೇ ಸೃಷ್ಟಿಯಾದವರೆಂದು ಕೆಲವರು ಅವರನ್ನು ಸುಖದ, ಕೆಲಸದ ವಸ್ತುವಾಗಿ ಕಾಣುವವರೂ ಇದ್ದಾರೆ. ಅನ್ನ ತಿನ್ನುವುದರ ಜೊತೆಗೆ ನೋವು ಬೈಗುಳಗಳನ್ನು ಮನೆ ಮನೆಗಳಲ್ಲಿ ಹೆಂಗಸರು ತಿನ್ನುತ್ತಲೇ ಇದ್ದಾರೆ. ಕೆಲವರು ಅವರನ್ನು ತಿನ್ನಲೆಂದೇ ಹುಟ್ಟಿದವರು. 

 ಜಗತ್ತು ಬದಲಾಗುತ್ತಿದೆ.
 ಗಂಡು ಹೆಣ್ಣು ಭೇದವಿಲ್ಲದೆ ಕೆಲಸ ಸಮಾನವಾಗಿ ಹಂಚಿ ತಿನ್ನುವ ಕಾಲ ಇದಾಗುತ್ತಿದೆ. 

                 ಪ್ರಿಯ ಈಗ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿನಿ. ಫೋನ್ ಮಾಡಿ ಎಲ್ಲವನ್ನೂ ಯೋಚಿಸಿ ಮೊದಲು ಜೋರಾಗಿ ನಗುತ್ತಾಳೆ.. ಬಹಳ ಸಲ ಕೆಲವು ವರ್ಷ ಮನೆಗೆ ಹೋದ.. ಹೋದಾಗಿನ ಅಲ್ಲಿನ ಬದಲಾದ ಸತ್ಯ ಕತೆಯನ್ನು ಅಪ್ಪ ಹೇಳಿದಾಗ .. ನನ್ನ ಸಂತಸದ ಕಣ್ಣೀರಿಗೂ ನಾನು.. ಆದಿ.

          ಅಪ್ಪನ ಅಭಿಮಾನಿ. ಪತ್ರಕ್ಕಾಗಿ ಬೇಡಿಕೆ ಬಹಳ ಇಡುವ ಬದಲಾವಣೆಗೆ ಹೋರಾಡುತ್ತಿರುವ ವಿದ್ಯಾ ರಿಗೆ ಈ ಪತ್ರ. 

           ವಿದ್ಯೆ ಇಷ್ಟೇ ಅಲ್ಲ ಅನ್ನುವ ಸತ್ಯ ಹುಡುಕಾಟದಲ್ಲಿ ನಿತ್ಯ ಇರುವ ವಿದ್ಯಾರಿಗೆ ಈ ಚಿತ್ರ - ಪತ್ರ ಗೌರವದಿಂದ ಪ್ರೀತಿಯಿಂದ, ಸೇರುತ್ತದೆ.
     
    ******†************    ಆದಿ ಸ್ವರೂಪ
                                           ಮಂಗಳೂರು

Ads on article

Advertise in articles 1

advertising articles 2

Advertise under the article