ಅನ್ಯೋನ್ಯತೆ - ಕಥೆ
Tuesday, December 29, 2020
Edit
ಯಶಸ್ವಿ
10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು
ಅನ್ಯೋನ್ಯತೆ - ಕಥೆ
ಒಂದು ಊರಿನಲ್ಲಿ ರಂಗಪ್ಪ ಮತ್ತು ಸೋಮಪ್ಪ ಎಂಬ ಇಬ್ಬರು ಗೆಳೆಯರಿದ್ದರು. ಅವರ ಗೆಳೆತನಕ್ಕೆ ತಕ್ಕಂತೆ ಮನೆಯೂ ಹತ್ತಿರ - ಹತ್ತಿರವಿತ್ತು. ಅವರು ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ.
ಹೀಗೆ ಒಂದು ದಿನ ದುರಾದೃಷ್ಟವಾಗಿ ಒಬ್ಬ ಇವರ ಮನೆಯ ಹತ್ತಿರವೇ ಒಂದು ಮನೆ ಕಟ್ಟಿ ಗೃಹಪ್ರವೇಶವನ್ನು ಅದ್ದೂರಿಯಾಗಿ ನಡೆಸಿದ. ಹೀಗೆ ದಿನ ಕಳೆಯುತ್ತಿರುವಾಗ ಅವನಿಗೆ ರಂಗಪ್ಪ ಮತ್ತು ಸೋಮಪ್ಪ ಬಹಳ ಅನ್ಯೋನ್ಯತೆಯಿಂದಿರುವುದನ್ನು ಕಂಡು ಅಸೂಯೆಯಾಯಿತು. ಅವರಿಬ್ಬರಿಗೆ ಜಗಳವಾಗುವ ಹಾಗೆ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದ. ಆದರೆ ಅವನಿಗೆ ಹಾಗೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವನಿಗೆ ಇವರಿಬ್ಬರ ಮೇಲೆ ಕೋಪ, ಅಸೂಯೆ ಯಾವಾಗಲೂ ಇರುತ್ತಿತ್ತು. ಆದರೂ ಒಂದು ದಿನ ರಂಗಪ್ಪನಿಗೆ ಸೋಮಪ್ಪನ ಮೇಲೆ ಕೋಪ ಬರುವಂತೆ ಮಾಡಿ ಅವರಿಬ್ಬರಿಗೆ ಜಗಳವಾಗುವಂತೆ ಮಾಡಿಸಿದನು. ಹೀಗೆ ರಂಗಪ್ಪ ಮತ್ತು ಸೋಮಪ್ಪ ಮಾತನಾಡುತ್ತಿರಲಿಲ್ಲ. ಅದರಲ್ಲೂ ರಂಗಪ್ಪನಿಗೆ ಕೋಪ ಜಾಸ್ತಿ. ಒಂದು ದಿನ ರಂಗಪ್ಪ ರಸ್ತೆ ಬದಿಯಲ್ಲಿ ಹೋಗುತ್ತಿದ್ದಾಗ ಒಂದು ಅಂಗಡಿಯನ್ನು ಕಂಡು ಆ ಅಂಗಡಿಗೆ ಹೋಗಲು ರಸ್ತೆ ದಾಟುವಾಗ ಒಂದು ಕಾರು ಬರುತ್ತಿತ್ತು. ರಂಗಪ್ಪ ಆ ಕಾರನ್ನು ಗಮನಿಸಲಿಲ್ಲ. ಆ ಕಾರು ಇನ್ನೇನು ಅವನಿಗೆ ಗುದ್ದುತ್ತಿದೆ ಎನ್ನುವಾಗ ಒಮ್ಮೆಲೇ ಅವನನ್ನು ಯಾರೋ ಎಳೆದ ಹಾಗಾಯಿತು. ಯಾರು ಎಂದು ನೋಡಿದರೆ ಸೋಮಪ್ಪ. ರಂಗಪ್ಪನಿಗೆ ಒಮ್ಮೆಲೇ ಆಶ್ಚರ್ಯವಾಯಿತು. ಅವನ ಕೋಪವೆಲ್ಲಾ ತಣ್ಣಗಾಯಿತು. " ಸೋಮಪ್ಪ, ಇವತ್ತು ನೀನಿಲ್ಲದಿದ್ದರೆ ನನ್ನ ಪ್ರಾಣವೇ ಹೋಗುತ್ತಿತ್ತು". ಎಂದ. ನೀನೇ ನನ್ನ ನಿಜವಾದ ಗೆಳೆಯ. ಯಾರೋ ಹೇಳಿದ ಒಂದು ಮಾತಿಗೆ ಅದು ಸರಿಯೇ ತಪ್ಪೇ ಎಂದು ಗೊತ್ತಿಲ್ಲದೇ ನಾವಿಬ್ಬರೂ ಜಗಳವಾಡಿದೆವು. ನನ್ನನ್ನು ಕ್ಷಮಿಸು " ಎಂದು ರಂಗಪ್ಪ ಹೇಳಿದನು. ಆದ್ದರಿಂದ ಇನ್ನುಮುಂದೆ ನಾವಿಬ್ಬರೂ ಯಾರು ಏನೇ ಹೇಳಿದರೂ ನಮ್ಮ ಸ್ನೇಹವನ್ನು ಎಂದೆಂದಿಗೂ ಮರೆಯುವುದು ಬೇಡ. ನಾವಿಬ್ಬರು ಎಂದಿನಂತೆ ಸ್ನೇಹದಿಂದ ಅನ್ಯೋನ್ಯತೆಯಿಂದ ಬಾಳೋಣ ಎಂದು ಹೇಳಿದನು.
ನೀತಿ : ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು.
......... ಯಶಸ್ವಿ 10ನೇ ತರಗತಿ