ಪ್ರತ್ಯುಪಕಾರ - ಕಥೆ
Tuesday, December 22, 2020
Edit
ನಂದನ್ ಕೆ . ಎಚ್
6ನೇ ತರಗತಿ
ಪ್ರತ್ಯುಪಕಾರ -ಕಥೆ
ಒಂದು ಊರಿನಲ್ಲಿ ಒಬ್ಬ ಯುವಕನಿದ್ದ. ಅವನ ಬಳಿ ಒಂದು ಹಸು ಇತ್ತು.ಇದರಿಂದ ದೊರೆಯುವ ಹಾಲನ್ನು ಮಾರಿ ಜೀವನ ಸಾಗಿಸುತ್ತಿದ್ದ. ಹೀಗಿರುವಾಗ ಒಂದು ದಿನ ಆ ಹಸುವಿಗೆ ಅನಾರೋಗ್ಯ ವಾಯಿತು. ಕೊನೆಗೆ ಅದನ್ನು ಪಶು ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ. ಆದರೆ ಎರಡು ಮೂರು ದಿನಗಳ ಕಾಲ ಆ ಹಸುವಿನಿಂದ ಹಾಲು ದೊರೆಯಲಿಲ್ಲ. ಇದರಿಂದಾಗಿ ಇವನಿಗೆ ಜೀವನ ಸಾಗಿಸುವುದು ಕಷ್ಟವಾಯಿತು. ಬಹಳ ಚಿಂತಿತನಾದ. ಈ ಹಿಂದೆ ಅವನು ಮೊಲವೊಂದು ಸಿಂಹದ ಆಹಾರ ವಾಗುವುದನ್ನು ತಪ್ಪಿಸಿದ್ದ..ಆ ಮೊಲ ಇವನಿಗೆ ಪ್ರತಿ ಉಪಕಾರ ಮಾಡಲು ಕಾಯುತ್ತಿತ್ತು. ಈಗ ಇವನ ಕಷ್ಟವನ್ನು ನೋಡಿ ಮೊಲಕ್ಕೆ ಇದೇ ತಕ್ಕ ಸಂದರ್ಭ ಎಂದು ಎಣಿಸಿ. ಒಂದು ವಾರಕ್ಕಾಗುವಷ್ಟು ತರಕಾರಿ ಹಣ್ಣುಗಳನ್ನು ತಂದುಕೊಟ್ಟಿತು. ಯುವಕನಿಗೆ ಬಹಳ ಖುಷಿಯಾಯಿತು. ಮಾಡಿದ ಸಹಾಯ ಉಪಕಾರಕ್ಕೆ ಬಂತು ಎಂದು ಕೃತಜ್ಞತೆ ಸಲ್ಲಿಸಿದ... ಅಂದಿನಿಂದ ತಾನು ಜೀವನ ಸಾಗಿಸಿ ಉಳಿದ ದುಡ್ಡಿನಲ್ಲಿ ಇತರರಿಗೆ ಹೆಚ್ಚು ಸಹಾಯ ಮಾಡಲು ಪ್ರಾರಂಭಿಸಿದ.
ನಂದನ್ ಕೆ ಹೆಚ್
6 ನೇ ತರಗತಿ
ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಪುತ್ತೂರು