ಚತುರ ಮೊಲ - ಕಥೆ
Monday, December 14, 2020
Edit
ನಂದನ್ ಕೆ.ಎಚ್.
6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಕುದ್ಮಾರು , ಪುತ್ತೂರು ತಾಲೂಕು
ಚತುರ ಮೊಲ - ಕಥೆ
ಒಂದು ಹಳ್ಳಿ. ಆ ಹಳ್ಳಿಯಲ್ಲಿ ಒಂದು ದಟ್ಟವಾದ ಅರಣ್ಯವಿತ್ತು. ಅರಣ್ಯದಲ್ಲಿ ಪಕ್ಷಿಗಳು ಹಾಗೂ ಇತರ ಪ್ರಾಣಿಗಳು ವಾಸಿಸುತ್ತಿದ್ದವು . ಅದೇ ಅರಣ್ಯದಲ್ಲಿ ಬೇಟೆಗಾರರು ಸಹ ವಾಸಿಸುತ್ತಿದ್ದರು. ದಿನಬೆಳಗಾದರೆ ಬೇಟೆಗಾರರು ಅವರ ಬಿಲ್ಲುಗಳನ್ನು ಹಿಡಿದು ಬೇಟೆಯಾಡಲು ಹೊರಡುತ್ತಿದ್ದರು. ಪ್ರಾಣಿಗಳನ್ನು ಬೇಟೆಯಾಡಿ ಮನೆಗೆ ತೆರಳುತ್ತಿದ್ದರು. ಹೀಗಾಗಿ ಕಾಡಿನಲ್ಲಿ ದಿನಕಳೆದಂತೆ ಪ್ರಾಣಿಗಳು ಕಡಿಮೆಯಾಗುತ್ತಾ ಹೋದವು. ಒಂದು ದಿನ ಎಲ್ಲಾ ಪ್ರಾಣಿಗಳು ಒಂದು ಸಭೆ ಸೇರಿದವು. ಬೇಟೆಗಾರರನ್ನು ಹೇಗೆ ಓಡಿಸುವುದೆಂದು ಆಲೋಚಿಸುತ್ತಿದ್ದವು. ಚುರುಕು ಬುದ್ಧಿಯ ಮೊಲ ಒಂದು ಉಪಾಯ ಹೇಳಿತು, " ಅವರು ಬೇಟೆಯಾಡಿ ತಿನ್ನುವ ಸಂದರ್ಭದಲ್ಲಿ ಅವರ ಗಮನವನ್ನು ಜಿಂಕೆ ರಾಯನ ಕಡೆ ಸೆಳೆದು ತಿನಿಸಿನಲ್ಲಿ ವಿಷವನ್ನು ಹಾಕಿ ಬರುತ್ತೇವೆ " ಎಂದು ಹೇಳಿತು. ಎಲ್ಲರೂ " ಸರಿ ....ಸರಿ...." ಎಂದು ಹೇಳಿದರು. ಮರುದಿನ ಎಲ್ಲರೂ ಯೋಜನೆಯಂತೆಯೇ ನಡೆದರು. ವಿಷದ ಆಹಾರ ಸೇವಿಸಿ ಬೇಟೆಗಾರರು ಸತ್ತು ಹೋದರು. ಪ್ರಾಣಿಗಳು ನೆಮ್ಮದಿಯಿಂದ ತಮ್ಮ ಜೀವನ ನಡೆಸತೊಡಗಿದವು.
ನೀತಿ-ಅಪಾಯವನ್ನು ಉಪಾಯದಿಂದ ಗೆಲ್ಲಬೇಕು.
ನಂದನ್ ಕೆ ಹೆಚ್
ಆರನೇ ತರಗತಿ
ಸ.ಹಿ.ಪ್ರಾ ಶಾಲೆ ಕುದ್ಮಾರು.