ಬಡ ರೈತ ರಾಜನಾಗಿದ್ದು ಹೇಗೆ ? - ಕಥೆ
Monday, December 21, 2020
Edit
ಮೋಕ್ಷ ಆಳ್ವ
8 ನೇ ತರಗತಿ
ಶ್ರೀರಾಮ ಪ್ರೌಡಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು
ಬಡ ರೈತ ರಾಜನಾಗಿದ್ದು ಹೇಗೆ? - ಕಥೆ
ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಅವನಿಗೆ ದಿನಾಲೂ ನಿದ್ದೆ ಬರುವ ಕಾಯಿಲೆ ಇತ್ತು. ಅವನಿಗೆ ಯಾವ ಶ್ರೇಷ್ಠ ಆರ್ಯುವೇದ ಪಂಡಿತರಲ್ಲೂ ತೋರಿಸಿದರೂ ಅವನ ಕಾಯಿಲೆಗೆ ಮದ್ದೇ ಸಿಗಲಿಲ್ಲ. ಆಗ ಅವರ ರಾಜ್ಯದ ಪ್ರಜೆಗಳು ಹಾಗೂ ಮಂತ್ರಿಗಳು ಸೇರಿ ಒಂದು ನಿರ್ಧಾರಕ್ಕೆ ಬರುತ್ತಾರೆ. " ನಿಮ್ಮನ್ನು ರಾಜನ ಪಟ್ಟದಿಂದ ತೆಗೆಯಲಾಗಿದೆ " ಎಂದು ಹೇಳುತ್ತಾರೆ. ಅದಕ್ಕೆ ರಾಜನು, " ಅವರು ನನ್ನನ್ನು ರಾಜನ ಪಟ್ಟದಿಂದ ತೆಗೆದ ಕಾರಣವೇನು?". " ನಿಮ್ಮ ನಿದ್ದೆ ಕಾಯಿಲೆ ಗುಣವಾಗುವರೆಗೆ ನಮ್ಮ ಆಸ್ಥಾನದಲ್ಲಿ ನಿಮಗೆ ಜಾಗವನ್ನು ತೆಗೆಯಲಾಗಿದೆ " ಎಂದು ಹೇಳಿದರು. ಅದ್ದರಿಂದ ರಾಜನು ಹೊರಗೆ ಬಿದ್ದನು. ಯಾರಲ್ಲೂ ಊಟ ಕೇಳಿದರೂ " ನಮಗೆ ನಾಣ್ಯಗಳನ್ನು ಕೊಟ್ಟರೆ ಮಾತ್ರ ನಿಮಗೆ ನಾವು ಊಟಕೊಡುತ್ತೇವೆ " ಎಂದು ಎಲ್ಲರೂ ಹೇಳುತ್ತಾರೆ. ಅವನು ನಿದ್ದೆ ಕಣ್ಣಲ್ಲೇ ನಡೆದುಕೊಂಡು ಒಂದು ಚಿಕ್ಕ ಹಳ್ಳಿಗೆ ಹೋದನು. ಅಲ್ಲಿ ಊಟ ಕೇಳಿದರೆ " ನಮಗೆ ಊಟವಿಲ್ಲ ನೀವು ಬಂದು ನಮ್ಮಲ್ಲಿ ಕೇಳಿದರೆ ನಮ್ಮ ಮನೆಯರಿಗೆ ಊಟವಿಲ್ಲ " ಎಂದು ಹೇಳಲು ಶುರುಮಾಡಿದರು. ಆದರೆ ಒಬ್ಬ ಬಡರೈತನು ಅವನನ್ನು ಕರೆದು " ನೀವು ಯಾರು ? " ಎಂದು ಕೇಳಿದನು. ಅವನು ನಡೆದು ಹೋದ ಘಟನೆಗಳನ್ನು ಹೇಳಿದ. ಆಗ ರೈತನಿಗೆ ತುಂಬಾ ಬೇಸರವಾಗುತ್ತದೆ. ರೈತ ತನ್ನ ಮನೆಯಲ್ಲಿ ರಾಜನಿಗೆ ವಾಸಿಸಲು ಒಂದು ಜಾಗವನ್ನು ಕೊಟ್ಟನು. ರೈತಗೆ ಒಬ್ಬ ವೈದ್ಯರ ಬಗ್ಗೆ ತಿಳಿದಿದೆ ಅವರಲ್ಲಿಗೆ ಹೋಗೋಣ ಬನ್ನಿ ಎಂದು ವೈದ್ಯರಲ್ಲಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ರಾಜನಿಗೆ ಮದ್ದನ್ನು ಕೊಟ್ಟರು. ಸ್ವಲ್ಪ ದಿನಗಳ ನಂತರ ಅವನಿಗೆ ನಿದ್ದೆ ಬರುವುದು ಕಡಿಮೆಯಾಗುತ್ತದೆ. ಮೂರು ದಿನಗಳ ನಂತರ ಅವನ ಕಾಯಿಲೆ ಪೂರ್ತಿಯಾಗಿ ಗುಣವಾಗುತ್ತದೆ. ರಾಜನಿಗೆ ತುಂಬಾ ಸಂತೋಷವಾಗುತ್ತದೆ. ಆ ರೈತನಿಗೆ ದನ್ಯವಾದಗಳನ್ನು ಹೇಳಿ ನಿಮ್ಮ ಉಪಕಾರಗಳನ್ನು ನಾನು ಎಂದಿಗೂ ಮರೆಯಾಲಾರೆ, ಎಂದು ಹೇಳಿ ಮರಳಿ ಅವನ ಆಸ್ಥಾನಕ್ಕೆ ಹೋಗುತ್ತಾನೆ. ಅಲ್ಲಿ ಪ್ರಜೆಗಳು ಮತ್ತು ಮಂತ್ರಿಗಳು ಹೇಳುತ್ತಾರೆ. ನೀವು ಯಾಕೆ ಇಲ್ಲಿಗೆ ಬಂದಿರಿ ಎಂದು ಕೇಳುತ್ತಾರೆ. ಅದಕ್ಕೆ ರಾಜ ನನ್ನ ನಿದ್ದೆ ಕಾಯಿಲೆ ಗುಣವಾಗಿದೆ ಎಂದು ಹೇಳುತ್ತಾನೆ. ಅದನ್ನು ಅವರು ನಂಬುವುದಿಲ್ಲ ಅದಕ್ಕೆ ರಾಜನೊಂದು ಉಪಾಯ ಮಾಡುತ್ತಾನೆ. ನಾನು ಒಂದು ದಿನ ಪೂರ್ತಿ ಮಲಗದೆ ಇದ್ದರೆ ನನ್ನನ್ನು ರಾಜನಾಗಿ ಮಾಡಿ ಎಂದನು. ಅದರಂತೆ ಅವನು ಮಲಗಲಿಲ್ಲ. ಅವರು ಅವನನ್ನು ರಾಜನಾಗಿ ಮಾಡುತ್ತಾರೆ. ಒಂದು ವಾರ ಬಿಟ್ಟು ರೈತನನ್ನು ಅವನ ಆಸ್ಥಾನಕ್ಕೆ ಕರೆದು ಅವನನ್ನು ರಾಜ್ಯ ರಾಜನಾಗಿ ಮಾಡುತ್ತಾನೆ. ನೀನು ಮಾಡಿದ ಉಪಕಾರಕ್ಕಾಗಿ ನನ್ನ ಚಿಕ್ಕ ಉಡುಗೊರೆ ಎಂದು ಹೇಳುತ್ತಾನೆ.
......... ಮೋಕ್ಷ ಆಳ್ವ
8ನೇ ತರಗತಿ