
ಪರಾತ್ಮ ಕಥೆ
Thursday, December 10, 2020
Edit
ಲಾವಣ್ಯ ಎಸ್ ಜಿ 9 ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ
ಬಂಟ್ವಾಳ ತಾಲೂಕು
ಪರಾತ್ಮ ಕಥೆ
ಒಂದು ಸುಂದರವಾದ ಕಾಡು, ಅಲ್ಲಿ ನಾನು ನನ್ನ ಕುಟುಂಬದವರೊಂದಿಗೆ ಸಂತೋಷವಾಗಿದ್ದೆನು.
ನಾನ್ ಯಾರಪ್ಪ ಅಂತ ಅಂದ್ಕೊಂಡ್ರ???
ನಾನೊಂದು ಆಲದಮರ. ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಿ ಅವುಗಳೊಂದಿಗೆ ವಾಸಿಸುತ್ತಿದ್ದೆ. ಒಂದು ದಿನ ತುಂಬಾ ದೂರದಲ್ಲಿ ಯಾರೋ ಒಬ್ಬ ಮಾನವ ನನ್ನ ಕಡೆ ಬರುತ್ತಿರುವುದನ್ನು ನೋಡಿದೆ. ಅವನ ಕೈಯಲ್ಲಿ ಒಂದು ಕೊಡಲಿ ಇತ್ತು. ಆಗ ನನಗೆ ತಿಳಿಯಿತು ಇವನು ಇಲ್ಲಿಗೆ ನನ್ನನ್ನು ಕಡಿಯಲಿಕ್ಕೆ ಬಂದಿದ್ದು ಅಂತ. ನನಗೆ ಭಯವಾಗಿ ಬೆವತು ಹೋಗಿದ್ದೆನು !.
ಆ ಮಾನವ ನನ್ನ ಹತ್ತಿರ ಹತ್ತಿರ ಬಂದ, ಮತ್ತೆ ನನ್ನ ಬುಡಕ್ಕೆ ಒಂದು ಕೊಡಲಿಯೇಟು ಕೊಟ್ಟೆಬಿಟ್ಟ.
ನಾನು ಸಾಕು ನಿಲ್ಸೋ ನನಗೆ ತುಂಬಾ ನೋವಾಗುತ್ತಿದೆ ಮಾರಾಯ ಅಂತ ಹೇಳಿದ್ರು ಕೇಳಿಲ್ಲ ಆಸಾಮಿ
ನನ್ನ ಕಡಿದು ತುಂಡುತುಂಡು ಮಾಡಿಬಿಟ್ಟಿದ್ದ !.
ಎಷ್ಟು ಕಿರುಚಿಕೊಂಡರು ಆ ಪುಣ್ಯಾತ್ಮನಿಗೆ ಕೇಳಬೇಕಲ್ಲ.
ಆ ಮಾನವ ನನ್ನನ್ನು ಕಡಿದು ಹೊತ್ತುಕೊಂಡು ಹೋಗಿ ನನಗೆ ತುಂಬಾ ಹೊಡೆದು-ಬಡಿದು ಒಂದು ಸುಂದರ ಬೆಂಚು ಡೆಸ್ಕುಗಳನ್ನಾಗಿ ಪರಿವರ್ತಿಸಿದ. ಆಗ ನನಗನಿಸಿತು ಇಷ್ಟು ನೋವು ತಿಂದದ್ದೂ ಸಾರ್ಥಕವಾಯಿತು ಎಂದು. ನನಗೆ ಆ ಹೊಸರೂಪ ತುಂಬಾ ಖುಷಿ ಕೊಟ್ಟಿತು..
ಅವನು ನನ್ನನ್ನು ಯಾವುದೋ ಶಾಲೆಗೆ ಮಾರಿದ. ಆಗ ನನ್ನ ಮೇಲೆ ಶಾಲೆಯ ಮಕ್ಕಳು ಕುಳಿತುಕೊಂಡು ನನ್ನ ಮೇಲೆ ಪುಸ್ತಕವಿಟ್ಟು ಪಾಠ ಕೆಳುತ್ತಿದ್ದರು. ಶಿಕ್ಷಕರು ಹೋದ ಕೂಡಲೇ ನನ್ನ ಮೇಲೆ ಹತ್ತಿ ಮಂಗನಂತೆ ಲಾಗ ಹಾಕುತ್ತಿದ್ದರು.
ನನ್ನ ನೋವು ಕೇಳಬೇಕೆ???? ನನಗಂತೂ ಯಾಕೆ ಇನ್ನೂ ಬದುಕಿದ್ದೇನೆ ಅನ್ನಿಸಿಬಿಡುತ್ತಿತ್ತು. ಹೀಗೆ ದಿನನಿತ್ಯವೂ ನಡೆಯುತ್ತಿತ್ತು. ಶಿಕ್ಷಕರು ಬಂದು ಪಾಠ ಮಾಡುವುದು.
ಶಿಕ್ಷಕರು ಹೋದಕೂಡಲೆ ನನ್ನ ಮೇಲೆ ಹತ್ತಿ ಲಾಗ ಹಾಕುವುದು. ಇದಂತೂ ಬರುಬರುತ್ತ ನನಗೆ ಅಭ್ಯಾಸವಾಗಿ ಬಿಟ್ಟಿತು.
ತುಂಬಾ ದಿನಗಳ ನಂತರ ಆ ಮಕ್ಕಳ ತುಂಟಾಟ, ಮುಗ್ಧತೆಯನ್ನು ನೋಡಿ ನಗು ಹುಟ್ಟಿತು. ನಾನು ಹುಟ್ಟಿದ್ದು ಸಾರ್ಥಕವಾಯಿತೆಂದು ನನಗೆ ತೃಪ್ತಿಯಾಯಿತು. ಆದರೆ ನನಗೆ ಕಾಡಿನಲ್ಲಿ ವಾಸಿಸುತ್ತಿದ್ದಾಗ ಇದ್ದ ಸಂತೋಷ ಈಗ ಇರಲಿಲ್ಲ.
ಕಲ್ಪನಾ ಲೋಕದ ವಿಹಾರಿ.
ಲಾವಣ್ಯ. ಎಸ್. ಜಿ