ದನ ಮತ್ತು ಕರು - ಚಿತ್ರ ಕತೆ.1
Saturday, December 12, 2020
Edit
ನಿನಾದ್ ಕೈರಂಗಳ
3 ನೇ ತರಗತಿ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆ
ಕುಕ್ಕಾಜೆ ಬಂಟ್ವಾಳ
ದನ ಮತ್ತು ಕರು - ಚಿತ್ರ ಕತೆ
ಒಂದು ಊರಿನಲ್ಲಿ ದನಗಳು ಮತ್ತು ಕರುಗಳು ಇದ್ದವು. ದನಗಳು ಯಾವಾಗಲೂ ಕಾಡಿಗೆ ಹೋಗುತ್ತಿದ್ದವು. ಕರುಗಳು ಆಟವಾಡುತ್ತಿದ್ದವು. ಒಂದು ದಿನ ಕಾಡಿಗೆ ಹೋದ ಅಮ್ಮ ಮನೆಗೆ ಬರಲೇ ಇಲ್ಲ. ಅಂದು ಕರು ಅಮ್ಮಾ....ಅಮ್ಮಾ...ಎಂದು ಕೂಗಿ ಕೂಗಿ ಮಲಗಿತು. ಮರುದಿನ ಕರು ಅಮ್ಮನನ್ನು ಕರೆದುಕೊಂಡು ಬರಲು ಕಾಡಿಗೆ ಹೋಯಿತು. ಕಾಡಿನಲ್ಲಿ ಹುಲ್ಲು ತಿನ್ನುತ್ತಿರುವ ಅಮ್ಮನನ್ನು ನೋಡಿತು. ಕರುವಿಗೆ ತುಂಬಾ ಖುಷಿಯಾಯಿತು. ಹೊಟ್ಟೆ ತುಂಬಾ ಹಾಲು ಕುಡಿಯಿತು. ಇನ್ನು ಮೇಲೆ ನನ್ನನ್ನು ಬಿಟ್ಟು ಹೋಗಬೇಡ ಎಂದಿತು.
ನಿನಾದ್ ಕೈರಂಗಳ
3 ನೇ ತರಗತಿ