ಪ್ರೀತಿಯ ಪುಸ್ತಕ : ಸಂಚಿಕೆ - 205
Saturday, March 14, 2026
Edit
ಪ್ರೀತಿಯ ಪುಸ್ತಕ
ಸಂಚಿಕೆ - 205
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಇದೊಂದು ಯೋಚಿಸಿ.. ಪ್ರಯಾಣ ಮಾಡಲೇ ಬೇಕು.. ಬದುಕಬೇಕೆಂದರೆ ಪ್ರಯಾಣ ಅನಿವಾರ್ಯ. ಹಾಗಾದರೆ ಏನು ಮಾಡುವುದು. ಇಂತಹ ಪರಿಸ್ಥಿತಿಯೂ ಇರುತ್ತದಲ್ಲಾ... ಹೌದು.. ಇದು ಬದುಕು ಕಟ್ಟಿಕೊಳ್ಳಲು ಒದ್ದಾಡುವ ವಲಸಿಗರ ಕಥೆ.. ಜೀವನದ ಅನುಭವ.
ತೆಲುಗು ವಲಸಿಗರು ಕೊಚ್ಚಿಗೆ ಬಂದು ಬದುಕುವ ದಾರಿ ಹುಡುಕುವ ಕಥೆ ಇದು. ಉದ್ಯೋಗದ ಹುಡುಕಾಟದಲ್ಲಿ ಇದ್ದು ತನ್ನ ಸಹಪಾಠಿಯ ಜೊತೆಗೆ ಮದುವೆಯ ಕನಸು ಕಾಣುವ ಚಂದ್ರಶೇಖರ; ತನ್ನ ಬಳಿ ಇದ್ದ ಒಂದೇ ಒಂದು ಚಪ್ಪಲಿ ಕಳೆದುಕೊಂಡ ಅರುಣ; ತನ್ನ ಬಳಿ ಇರುವ ಸುತ್ತಿಗೆಯನ್ನೇ ಮಾರಿ ಪುಸ್ತಕ ಕೊಳ್ಳಲು ಕಾತರಿಸುವ ಬಾಲು; ಗೊಂಬೆ ತಯಾರಿಸಿ ಮಾರಲು ಹೆಣಗಾಡುವ ಸಾದಿಯಾ ಮತ್ತು ಅವಳ ಮಗ; ಸೊಳ್ಳೆ ಕಾಟವನ್ನು ಸಹಿಸಿಕೊಳ್ಳುವ ಕತೆ ಕಟ್ಟಿ ಹೇಳುವ ಅಂಜನಮ್ಮ.. ಇವರೆಲ್ಲರ ಪರಿಚಯ ಮಾಡಿಕೊಳ್ಳಲು ಈ ಪುಸ್ತಕ ಓದಬೇಕು.
ಲೇಖಕರು : ಸುಬೂಹಿ ಜಿವಾನಿ
ಕನ್ನಡಕ್ಕೆ: ಅಬ್ಬೂರು ಪ್ರಕಾಶ್
ಪ್ರಕಾಶಕರು: ಬಹುರೂಪಿ, ಬೆಂಗಳೂರು
ಬೆಲೆ: ರೂ.125/-
ಇದು 6-7 ತರಗತಿಯ ಮಕ್ಕಳು ಓದುವಂತಿದೆ. ಇತರ ಚಿಕ್ಕ ದೊಡ್ಡ ಮಕ್ಕಳಿಗೂ ಇಷ್ಟವಾಗಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: Bahuroopi, fire Flies; whatsapp bookstore – 7019182729; online bookstore – bahuroopi.in
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 70908 01340
***************************************