ಪ್ರೀತಿಯ ಪುಸ್ತಕ : ಸಂಚಿಕೆ - 122
Saturday, August 3, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 122
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪಪ್ಲೂ ತಲೆಯಲ್ಲಿ ನೂರು ಪ್ರಶ್ನೆಗಳುಪ್ರೀತಿಯ ಮಕ್ಕಳೇ.... ಪಪ್ಲೂ ತಲೆಯಲ್ಲಿ ನೂರು ಪ್ರಶ್ನೆಗಳು ಎಂದರೆ ನಿಮಗೆ ಹೆಚ್ಚೇನೂ ಆಶ್ಚರ್ಯ ಆಗಲಾರದು ಅಂತ ನನಗೆ ಅನಿಸುತ್ತದೆ. ಯಾಕೆಂದರೆ ನಿಮ್ಮ ತಲೆಯಲ್ಲೂ ನೂರಾರು ಪ್ರಶ್ನೆಗಳು ಓಡಾಡುತ್ತಲೇ ಇರುತ್ತವೆ. ಪಪ್ಲೂನ ವಿವಿಧ ಪ್ರಶ್ನೆಗಳನ್ನು ಇಟ್ಟುಕೊಂಡೇ ಈ ಪುಸ್ತಕ ಬರೆದಿದ್ದಾರೆ. ಪುಸ್ತಕ ತುಂಬಾ ಪಪ್ಲೂವಿನ ಪ್ರಶ್ನೆಗಳು ಮತ್ತು ಅದಕ್ಕೆ ಸೂಕ್ತವಾದ ಸುಂದರ ಚಿತ್ರಗಳು ಇವೆ. ನಿದ್ದೆ ಬರುವಾಗ ಅಮ್ಮ ಎಬ್ಬಿಸುವುದು ಯಾಕೆ? ನಿದ್ದೆ ಬರದೇ ಇರುವಾಗ ಮಲಗು ಮಲಗೂ ಅಂತ ಮಲಗಿಸುವುದು ಯಾಕೆ? ಫ್ಯಾನು ಕೆಳಗೆ ನೆಲದ ಮೇಲೂ ತಿರುಗುತ್ತಾ? ಪ್ರಶ್ನೆಗಳು ಅದರ ಸುತ್ತ ಮತ್ತಷ್ಟು ಕಲ್ಪನೆಗಳು ಮಾಡಿ ಮಾಡಿ.. ಪಪ್ಲೂನ ತಲೆ ಗಿರಗಿರನೆ ತಿರುಗುತ್ತದೆ. ಆಮೇಲೆ ಹೇಗೆ ಶಾಂತವಾಗುತ್ತಾನೆ ಎಂದು ನೋಡಲು ಪುಸ್ತಕ ಓದಿ. ನಿಮ್ಮ ಪ್ರಶ್ನೆಗಳನ್ನೂ ಪಟ್ಟಿ ಮಾಡಿ ಇಡಿ.
ಲೇಖಕರು: ದೇವಾಶೀಶ್ ಮಖೀಜ
ಚಿತ್ರಗಳು: ಟೀಯ ಜೇಮ್ಸ್
ಅನುವಾದ: ಬಾಗೇಶ್ರೀ
ಪ್ರಕಾಶಕರು: ತುಲಿಕಾ
ಬೆಲೆ: ರೂ.135/-
5+ ವಯಸ್ಸಿನವರಿಗಾಗಿ ಇದೆ. ಇನ್ನೂ ದೊಡ್ಡ ಮಕ್ಕಳಿಗೂ ಖುಶಿ ಆಗುವಂತೆ ಇದೆ. ಚಿಕ್ಕ ಮಕ್ಕಳಿಗೂ ಓದಿ ಹೇಳಬಹುದು
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************