-->
ಅಕ್ಕನ ಪತ್ರ - 21ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 21ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 21ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


  ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........ 


       ನಮಸ್ತೇ........... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು...... ನಾವು ಉಪಯೋಗಿಸಿದ ನೀರು ಗಿಡಕ್ಕೆ ಹೋಗುವ ವ್ಯವಸ್ಥೆ ಮಾಡಿದರೆ ಒಂದು ಗಿಡ ಬೆಳೆಯಲು ಸಹಾಯವಾಗುತ್ತದೆ. ಹಿರಿಯರು ಹೇಳಿದಂತೆ ನಾನು ಮಿತವಾಗಿಯೇ ನೀರನ್ನು ಬಳಸುತ್ತೇನೆ. ಬೇಡದ ವಸ್ತುವನ್ನು(ಅಂದರೆ ಬೇಡದ ಪ್ಲಾಸ್ಟಿಕ್, ಕುಪ್ಪಿ, ಕೊಳೆತವಸ್ತು) ಯಾವಕಾರಣಕ್ಕೂ ಹರಿಯುವ ನೀರಿಗೆ ಹಾಕಬಾರದು ಇದರಿಂದ ಮುಂದೆ ನಮಗೆಯೇ ತೊಂದರೆ ಬರಬಹುದು. ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿಡುತ್ತೇವೆಯೋ ಹಾಗೆಯೇ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಡಬೇಕು. ನಾವು ಹೊರಗಡೆ ಹೋದಾಗ ತಿನ್ನಲು ಉಪಯೋಗಿಸಿದ ವಸ್ತು ಅಥವಾ ಪ್ಲಾಸ್ಟಿಕ್ ಅಲ್ಲಿ ಇಲ್ಲಿ ಹಾಕುವ ಬದಲು ಕಸದ ಬುಟ್ಟಿಗೆ ಹಾಕಬೇಕು. ಎಷ್ಟೋ ಕಡೆ ಇದರಿಂದ ಮೂಕ ಪ್ರಾಣಿಗಳಿಗೂ ತೊಂದರೆ ಬರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ನೀರನ್ನು ಮತ್ತು ನೆಲವನ್ನು , ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ನೀರು, ನೆಲ, ಪರಿಸರ ಎಲ್ಲವೂ ನಮ್ಮದೇ ಎಂಬ ಭಾವನೆಯಿಂದ ರಕ್ಷಣೆ ಮಾಡಿದರೆ ನಮ್ಮ ಪರಿಸರವು ಅಂದರೆ ನೀರನ್ನೂ ಉಳಿತಾಯ ಮಾಡಬಹುದು. ನಮ್ಮ ನೆಲವು ಸ್ವಚ್ಛವಾಗಿ ಇರಬಹುದು ಎಂಬುದು ನನ್ನ ಒಂದು ಅಭಿಪ್ರಾಯ.
 ....................................... ಸಾತ್ವಿಕ್ ಗಣೇಶ್ 
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


        ಪ್ರೀತಿಯ ಅಕ್ಕನಿಗೆ........... ಸ್ರಾನ್ವಿ ಮಾಡುವ ನಮಸ್ಕಾರಗಳು... ಹೇಗಿದ್ದೀರ ಅಕ್ಕ , ನಾವು ಇಲ್ಲಿ ಚೆನ್ನಾಗಿ ಇದ್ದೇವೆ, ಅಕ್ಕ ನಿಮ್ಮ ಪತ್ರ ಓದಿದೆ....... ನೀರು ಇದೆ ಎಂದು ನಾವು ಸುಮ್ಮನೆ ಹಾಳಾಗಲು ಬಿಡಬಾರದು, ನಾನು ಮನೆಯಲ್ಲಿ ಪಾತ್ರೆ ತೊಳೆಯುವಾಗ ಅಮ್ಮ ಹೇಳುತ್ತಿರುತ್ತಾರೆ ನಳ್ಳಿ ತಿರುಗಿಸಿಟ್ಟು ಪಾತ್ರೆ ತೊಳೆದರೆ ನೀರು ಜಾಸ್ತಿ ಖರ್ಚಾಗುತ್ತದೆ, ಬೇರೆ ಪಾತ್ರೆಗೆ ತುಂಬಿಸಿಟ್ಚು ತೊಳೆ ಎಂದು ಹೇಳುತ್ತಾರೆ. ನಮಗೆ ಇಲ್ಲಿ ನೀರು ಇದೆ ಆದರೆ ಕೆಲವು ಕಡೆಗಳಲ್ಲಿ ಜನರಿಗೆ ಕುಡಿಯಲು ಕೂಡಾ ನೀರಿಲ್ಲ ಅಂತ ಹೇಳುತ್ತಿರುತ್ತಾರೆ.
ನೀವು ಕಥೆಯಲ್ಲಿ ಹೇಳಿದ ಆ ಹಿರಿಯರು ನೀರು ಬೇಕಾದಷ್ಟು ಮಾತ್ರ ತಟ್ಟೆಗೆ ಹಾಕಿ ತೊಳೆಯಬೇಕಿತ್ತು. ತಟ್ಟೆಗೆ ನೀರು ಹಾಕಿ ಆಚೆ ಹೋಗಿ ತೊಳೆಯುವ ಮೊದಲು ನಲ್ಲಿ ಬಂದ್ ಮಾಡಬೇಕಿತ್ತು, ಯಾವುದೇ ಕಾರ್ಯಕ್ರಮವೇ ಇರಲಿ ನಾವು ನೆಲದ ಮೇಲೆ ಸಿಕ್ಕ ಕಡೆಯೆಲ್ಲಾ ತ್ಯಾಜ್ಯವನ್ನು ಚೆಲ್ಲದೆ ಒಂದೇ ಕಡೆ ಒಟ್ಟು ಮಾಡಿ ಇಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಾವೇ ಸಿಕ್ಕ ಸಿಕ್ಕಲ್ಲಿ ತ್ಯಾಜ್ಯಗಳನ್ನು ಹಾಕದೆ ಅದನ್ನು ಹಾಕಲು ಇಟ್ಟ ಸ್ಥಳದಲ್ಲೇ ಹಾಕಬೇಕು. ಜಲ - ನೆಲ ಇದನ್ನು ನಾವೇ ಸಂರಕ್ಷಿಸಬೇಕು, ಬೇರೆಯವರಿಗೂ ತಿಳಿಸಬೇಕು. ಧನ್ಯವಾದ ಅಕ್ಕ......
............................................. ಸ್ರಾನ್ವಿ ಶೆಟ್ಟಿ 
8ನೇ ತರಗತಿ 
ಓಂ ಜನ ಹಿತಾಯ ಇಂಗ್ಲೀಷ್ ಮೀಡಿಯಂ 
ಶಾಲೆ, ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


ಮಕ್ಕಳ ಜಗಲಿ.... ಅಕ್ಕನ ಪತ್ರ: ೨೧
      ಪ್ರೀತಿಯ ಅಕ್ಕನಿಗೆ ಲಹರಿ ಮಾಡುವ ನಮಸ್ಕಾರಗಳು.... ಅಕ್ಕ ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು..... ಹೌದು ಅಕ್ಕ ನಿಮ್ಮ ಪತ್ರ ಓದಿದ ಮೇಲೆ ನಾವು ಒಮ್ಮೊಮ್ಮೆ ನಮಗೆ ಗೊತ್ತಾಗದೆ ನೀರು ಹೆಚ್ಚಾಗಿ ಪೋಲು ಮಾಡುತ್ತಿದ್ದೇವೆಯೇನೋ ಎಂದು ಅನಿಸುತ್ತದೆ.... ನನ್ನ ಅಪ್ಪ ಯಾವಾಗಲೂ ನೀರಿನ ಬಳಕೆ ಮಿತವಾಗಿರಬೇಕು ಎಂದು ಬುದ್ಧಿ ಹೇಳುತ್ತಾ ಇರುತ್ತಾರೆ.... ಖಂಡಿತ ಅಕ್ಕ ನಿಮ್ಮ ಪತ್ರ ಓದಿದ ಮೇಲೆ ನನಗೆ ಅನಿಸಿತು ನಾನು ಈ ರಜೆಯಲ್ಲಿ ನೀರನ್ನು ಮಿತವಾಗಿ ಬಳಸಲು ಅಭ್ಯಾಸ ಮಾಡಬೇಕು ಮತ್ತು ನನ್ನ ಮನೆಯ ಸುತ್ತಮುತ್ತಲೂ ಸ್ವಚ್ಛವಾಗಿರಿಸುವ ಕೆಲಸ ಮಾಡಬೇಕು.... ಅಪ್ಪ ನೆಟ್ಟ ತರಕಾರಿ ಗಿಡಗಳಿಗೆ ನೀರು ಹಾಕಬೇಕು.... ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡಬೇಕು... ನನ್ನ ಗೆಳತಿಯರಿಗೆ ನೀರು ಮಿತವಾಗಿ ಬಳಸುವುದನ್ನು ಅಭ್ಯಾಸ ಮಾಡಲು ತಿಳಿಸಬೇಕು.... ಸಮಾಜವನ್ನು ಸುಧಾರಿಸುವಲ್ಲಿ ನಮ್ಮ ಅಳಿಲು ಸೇವೆಯೂ ಅಗತ್ಯ ಎಂದು ನಿಮ್ಮ ಪತ್ರ ಓದಿ ನನಗೆ ತಿಳಿಯಿತು.... ಧನ್ಯವಾದಗಳು ಅಕ್ಕ ಅನೇಕ ವಿಷಯಗಳನ್ನು ನೀವು ನಮಗೆ ಮನವರಿಕೆ ಮಾಡಿಸಿದ್ದೀರಿ.... ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುತ್ತೇನೆ...... ಇಂತಿ ನಿಮ್ಮ ಪ್ರೀತಿಯ ಲಹರಿ.
.............................................. ಲಹರಿ ಜಿ.ಕೆ.
7ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************

    

         ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ಈಗ ನಮಗೆ ಬೇಸಿಗೆ ರಜೆ. ಈ ರಜೆಯಲ್ಲಿ ಹತ್ತು ದಿನ ನಮಗೆ ಭರತನಾಟ್ಯ ಶಿಬಿರ ನಡೆಯುತ್ತಿದೆ. ಅಲ್ಲಿ ನಾವೆಲ್ಲ ಶಿಬಿರಾರ್ಥಿಗಳು ಸ್ವಚ್ಛತೆಯ ಮೂಲಕವೇ ತರಗತಿಗೆ ಪಾಲ್ಗೊಳ್ಳುತ್ತೇವೆ. ನಮ್ಮ ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಮಾಡುವ ಪ್ರತಿಯೊಂದು ಕಾರ್ಯಗಳು ಅರ್ಥಪೂರ್ಣವಾಗಿರುತ್ತದೆ. ಈ ಪರಿಸರ ಸ್ವಚ್ಛತೆಯ ಕಾಳಜಿಯು ಎಲ್ಲಾ ಕಡೆಗಳಲ್ಲಿಯೂ ಜಾಗೃತವಾಗಿರಬೇಕು. ನಮ್ಮ ಮನೆಯಲ್ಲಿ ನಾನು ಗಿಡವನ್ನು ನೆಟ್ಟು ಬೆಳೆಸಿದ್ದೇನೆ. ಇದರಿಂದ ನಮ್ಮ ಪರಿಸರವು ಸುಂದರ ಮತ್ತು ಶುಭ್ರವಾಗಿರಲು ಸಾಧ್ಯವಾಗಿದೆ. ಈ ಬೇಸಿಗೆಯ ದಿನಗಳಲ್ಲಿ ನೀರನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಬೇಸಿಗೆಯಲ್ಲಿ ತೀವ್ರ ನೀರಿನ ಅಭಾವವು ತಲೆದೋರುತ್ತದೆ. ನಾವು ನೀರನ್ನು ಅಗತ್ಯವಿದ್ದಷ್ಟೇ ಬಳಸಿಕೊಳ್ಳಬೇಕು. ಪರಿಸರ ಎಂದ ಮೇಲೆ ಅಲ್ಲಿ ನೀರು, ಗಾಳಿ, ಮಣ್ಣು ಎಲ್ಲವೂ ಸ್ವಚ್ಛವಾಗಿರಬೇಕು. ಇದರ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇನ್ನಾದರೂ ನಾವು ಇದರ ಬಗ್ಗೆ ಎಚ್ಚೆತ್ತುಕೊಳ್ಳೋಣ. ವಂದನೆಗಳೊಂದಿಗೆ
......................................... ವೈಷ್ಣವಿ ಕಾಮತ್
ಐದನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
******************************************



        ನಮಸ್ತೆ ಅಕ್ಕಾ ನಾನು ಪೂಜಾ ..... ನನಗೆ ನಿಮ್ಮ ಪತ್ರವನ್ನು ಓದಿ ತುಂಬಾ ಸಂತೋಷವಾಯಿತು. ಇದರಲ್ಲಿ ನೀರಿನ ಬಗ್ಗೆ ಸ್ವಲ್ಪ ವಿಷಯವನ್ನು ಹೇಳಿದ್ದೀರಿ. ಈ ಪತ್ರದಲ್ಲಿ ಇರುವುದನ್ನು ಕತೆ ರೂಪದಲ್ಲಿ ತೋರಿಸಿಕೊಟ್ಟಿದ್ದೀರಿ. ನೀವು ಹೇಳಿದ್ದoತೆಯೇ ನಮ್ಮ ಶಾಲೆಯಲ್ಲಿ ನೀರಿನ ಕಾಳಜಿಯನ್ನು ನಾವು (ಮಕ್ಕಳು) ಈಗಾಗಲೇ ವಹಿಸಿಕೊಂಡ್ಡಿದ್ದೇವೆ. ನಾವು ಎಷ್ಟೇ ವಿದ್ಯಾವಂತರಾದರೂ ತ್ಯಾಜ್ಯವನ್ನು ಹರಡುತ್ತೇವೆ. ಹಾಗೆಯೇ ನಾನು ಇನ್ನು ಮುಂದೆ ನೀರಿನ ಜವಾಬ್ದಾರಿಯನ್ನು ವಹಿಸುತ್ತೇನೆ. ಎಂದು ಹೇಳುತ್ತಾ ನನ್ನ ನಮನಗಳು. 
..................................................... ಪೂಜಾ 
8ನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ ತೆಂಕಿಲ 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



       ಪ್ರೀತಿಯ ಅಕ್ಕನಿಗೆ ಹಿತಶ್ರೀ ಮಾಡುವ ನಮನಗಳು.................. ಅಕ್ಕಾ ನಿಮ್ಮ ಪತ್ರವನ್ನು ನಾನು ಓದಿದ್ದೇನೆ. ಈ ಪತ್ರದಲ್ಲಿ ತಿಳಿದು ಬರುವುದೇನೆಂದರೆ ಆಹಾರ, ನೀರು ಇತ್ಯಾದಿ ಯಾವುದನ್ನು ಪೋಲು ಮಾಡಬಾರದು. ತ್ಯಾಜಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಇದರಿಂದ ರೋಗಗಳು ಉಂಟಾಗುತ್ತದೆ. ಪರಿಸರದ ಸಂರಕ್ಷಣೆ ಕೇವಲ ಸರಕಾರದ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ನೀರನ್ನ ನಾವು ಈಗ ಪೋಲು ಮಾಡುತ್ತೇವೆ. ಆದರೆ ನಮಗೆ ನಾಳೆ ನೀರು ಸಿಗದೇ ಹೋದರೆ ಎಲ್ಲರ ಹತ್ತಿರ ನೀರನ್ನು ಬೇಡುತ್ತೇವೆ. ಆಗ ನೀರು ಅಥವಾ ಆಹಾರದ ಬೆಲೆ ತಿಳಿಯುತ್ತದೆ. ನೀರು ಮತ್ತು ಆಹಾರ ನಮ್ಮ ಜೀವಕ್ಕೆ ಎಷ್ಟು ಅಗತ್ಯ ಎಂದು ಈ ಪತ್ರದಲ್ಲಿ ತಿಳಿದು ಬಂತು.
................................................ ಹಿತಶ್ರೀ ಪಿ
ಆರನೇ ತರಗತಿ
ಶ್ರೀ ವೇಣುಗಪಾಲ ಅ. ಹಿ . ಪ್ರಾ . ಶಾಲೆ 
ಪಕಳಕುಂಜ , ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
******************************************



      ನಮಸ್ತೆ ಅಕ್ಕಾ.... ನಾನು ನಿಭಾ..... ನೀವು ಹೇಳಿದ ಹಾಗೇ ವಿದ್ಯಾವಂತರು ಎಷ್ಟೇ ವಿದ್ಯೆ ಕಲಿತರೇನು? ಸಾರ್ವಜನಿಕ ಆಸ್ತಿಯನ್ನು ಹೇಗೆ ಕಾಪಾಡಬೇಕು ಎಂಬುದು ಅವರಿಗೆ ತಿಳಿದೇ ಇಲ್ಲ. ನೀವು ಹೇಳಿದ ಘಟನೆಗಳನ್ನು ನಾನು ಕಂಡಿದ್ದೇನೆ. ಇನ್ನಾದರೂ ಸಾರ್ವಜನಿಕ ಆಸ್ತಿಯನ್ನು ಕಾಪಾಡಲಿ ಎಂದು ಬಯಸುತ್ತೇನೆ. ಹಾಗೆಯೇ ನೀವು ಹೇಳಿದಂತೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಮಾಡಿ ನಿಮ್ಮ ಜೊತೆ ಫೋಟೋಗಳನ್ನು ಹಂಚಿಕೊಳ್ಳುತ್ತೇನೆ.....
ಧನ್ಯವಾದಗಳು
..........................................................ನಿಭಾ 
8ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article