-->
ಪ್ರೀತಿಯ ಪುಸ್ತಕ : ಸಂಚಿಕೆ - 236

ಪ್ರೀತಿಯ ಪುಸ್ತಕ : ಸಂಚಿಕೆ - 236

ಪ್ರೀತಿಯ ಪುಸ್ತಕ
ಸಂಚಿಕೆ - 236
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ    


                                 ಅಯ್ಯೋ ಕಕ್ಕ…!
ಪ್ರೀತಿಯ ಮಕ್ಕಳೇ... ಅಯ್ಯೋ ಕಕ್ಕ ಬಗ್ಗೆಯೂ ಒಂದು ಪುಸ್ತಕವೇ - ಅಂತ ಇದರ ಹೆಸರು ಕೇಳಿ ನಿಮಗೆ ಅನಿಸಿರಬಹುದು. ಹೌದು ಕಕ್ಕದಲ್ಲೂ ಒಂದು ಅದ್ಭುತ ಪ್ರಪಂಚ ಇದೆ. 

ಇರಲಿ ; ಇದು ಪ್ರಾಣಿಗಳ ಕಕ್ಕದ ಬಗೆಗಿನ ಪುಸ್ತಕ. ಜೆಲ್ಲಿಫಿಶ್, ಸಿಂಹ, ಪೆಂಗ್ವಿನ್, ಜೇನುಹುಳ ಹಾಗೂ ಇನ್ನೂ ಹಲವಾರು ಜೀವಿಗಳು ತಮ್ಮದೇ ಆದ ವಿಶೇಷ ರೀತಿಯಲ್ಲಿ ಕಕ್ಕ ಮಾಡುತ್ತವೆ ಅಥವಾ ಕಕ್ಕವನ್ನು ಬಳಸುತ್ತವೆ. ಕಕ್ಕ ಅಷ್ಟೊಂದು ಆಸಕ್ತಿಕರ ವಿಷಯ ಅನ್ನುವುದು ನಿಮಗೆ ಗೊತ್ತಿತ್ತೇ? ಆನೆಯ ಕಕ್ಕದಿಂದ ಕಾಗ ತಯಾರಿಸಬಹುದಂತೆ. ಕಡವೆಯ ಕಕ್ಕದಿಂದ ಕಿವಿಯೋಲೆ ಮಾಡಬಹುದಂತೆ. ಜೇನುಹುಳಗಳು ಕೆಲವೊಮ್ಮೆ ಸಾವಿರಾರು ಸಂಖ್ಯೆಯಲ್ಲಿ ಹೊರಗೆ ಬರುತ್ತವಂತೆ, ಆಗ ಅವುಗಳು ಹಾರುವಾಗಲೇ ಹಳದಿ ಬಣ್ಣದ ಕಕ್ಕ ಮಾಡುತ್ತವಂತೆ.. ಹಳದಿ ಬಣ್ಣದ ಮಳೆ ಬೀಳುವ ಹಾಗೆ ಕಾಣುತ್ತದಂತೆ. ಅಬ್ಬಾ.. ಇನ್ನೂ ಇವೆ ಏನೇನೋ ಕತೆಗಳು. ಓದಿ ನೋಡಿ. 

ಲೇಖಕರು : ತೇಜಸ್ವಿನಿ ಆಪ್ಟೆ ರಾಮ್ ಮತ್ತು ಸುಜಾತಾ ಪದ್ಮನಾಭನ್ 
ಕನ್ನಡಕ್ಕೆ: ಕನ್ಡೆಪ್ಟಾ ಫರ್ನಾಂಡಿಸ್
ಚಿತ್ರಗಳು: ಪ್ರಿಯಾ ಕುರಿಯನ್ 
ಪ್ರಕಾಶಕರು:: ಬಹುರೂಪಿ, 
ಬೆಲೆ: ರೂ.120/-  

5ನೇ ತರಗತಿ ಮಕ್ಕಳು ಇದನ್ನು ಓದಬಹುದು. ಚಿಕ್ಕವರಿಗೂ ದೊಡ್ಡವರಿಗೂ ಇಷ್ಟವಾಗುವ ಹಾಗೆ ಇದೆ. 
◾ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ : 
▪️Bahuroopi, fire Flies;   
▪️whatsapp bookstore – 7019182729;  
▪️online bookstore – bahuroopi.in
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article