-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 227

ಸ್ಫೂರ್ತಿಯ ಮಾತುಗಳು : ಸಂಚಿಕೆ - 227

ಸ್ಫೂರ್ತಿಯ ಮಾತುಗಳು : ಸಂಚಿಕೆ - 227
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
       
(ಹಿಂದಿನ ಸಂಚಿಕೆಯಿಂದ).... ಶ್ರೀ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಧಾನ ಕರ್ಮಿ, ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿದಿ ಉಪ್ಪೇರಿ ಯವರು ಆಟಿಮಾಸದ ವೈಶಿಷ್ಟ್ಯ ಹಾಗೂ ವಿವಿಧ ರೀತಿಯಲ್ಲಿ ಆಚರಿಸುವ ಆಟಿ ಮಾಸಾಚರಣೆಯ ಮಹತ್ತ್ವದ ಕುರಿತು ಅತ್ಯುತ್ತಮ ಉಪನ್ಯಾಸ ನೀಡಿದರು. ಪತ್ರಕರ್ತರಾದ ಶ್ರೀ ವಿ.ಜಿ ಕಾಸರಗೋಡು ವಿಶಿಷ್ಟ ರೀತಿಯಲ್ಲಿ ಆಟಿ ಮಾಸವನ್ನು ಆಚರಿಸುತ್ತಿರುವ ಸವಿಹೃದಯದ ಕವಿ ಮಿತ್ರರು ಬಳಗದ ಸಂಚಾಲಕರಾದ ಶ್ರೀ ಸುಭಾಷ್ ಪೆರ್ಲ ಅವರ ಕಾರ್ಯಮಕ್ಕೆ ಶಹಬ್ಬಾಸ್ ಎಂದರು.

ಖ್ಯಾತ ವ್ಯಂಗ್ಯಚಿತ್ರ ಬರಹಗಾರರಾದ ಶ್ರೀ ವೆಂಕಟ್ ಭಟ್ ಎಡನೀರು ಸ್ವಾಗತಿಸಿದರು. ಶ್ರೀ ಸುಭಾಷ್ ಪೆರ್ಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪ ಅಮೆಕ್ಕಳ ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಾಹಿತಿ ಶ್ರೀ ಹರೀಶ್ ಶೆಣೈ ಪೆರ್ಲ ಉಪಸ್ಥಿತರಿದ್ದರು. ಪತ್ರಕರ್ತರು ಹಾಗೂ, ವಿಶೇಷ ಯೂಟ್ಯೂಬ್ ಚಾನೆಲ್ ಪೆರ್ಲ ಶ್ರೀ ಜಯ ಮಣಿಯಂಪಾರೆ ಕಾರ್ಯಕ್ರಮವನ್ನು ನಿರೂಪಿಸಿದರು.

ಖ್ಯಾತ ವ್ಯಂಗ್ಯ ಚಿತ್ರಗಾರರಾದ ವೆಂಕಟ ಭಟ್ ಎಡನೀರು ಇವರ ಭಟ್ಟಂಗೋಣಿ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಶ್ರೀ ಬಾಲಕೃಷ್ಣ ನಾಯ್ಕ ಏಳ್ಕಾನ ಉದ್ಘಾಟಿಸಿ ಮಾತನಾಡಿ ಶುಭಕೋರಿದರು. ಶ್ರೀ ಜಯಪ್ರಕಾಶ್ ಮಣಿಯಂಪಾರೆ ಶ್ರೀ ದುರ್ಗಾ ಮೆಲೋಡಿಸ್ ಮಣಿಯಂಪಾರೆ ಹಾಗೂ ಬಳಗದವರಿಂದ ಆಷಾಢ ಕಾವ್ಯ ಗಾನ ನಡೆಯಿತು. ಮಧ್ಯಾಹ್ನ ಸವಿ ಭೋಜನದ ರಸಾಸ್ವಾದನೆ ಕಾರ್ಯಕ್ರಮ. ಭೋಜನದಲ್ಲಿದ್ದ ಭಕ್ಷ್ಯಗಳು ನನ್ನ ನೆನಪಿಗೆ ಬರುವಂತೆ ಮಾವಿನಕಾಯಿ ಅಂಬಟೆ ಕಣಿಲೆ ಉಪ್ಪಿನಕಾಯಿ, ಕುಸುಬುಲಕ್ಕಿ ಅನ್ನ, ಹುರುಳಿ - ಕೊತ್ತಂಬರಿ ಸೊಪ್ಪಿನ ಚಟ್ನಿ, ಒಂದೆಲಗ ಚಟ್ನಿ, ಸಾಂಬ್ರಾಣಿ ಚಟ್ನಿ, ಉಪ್ಪು ಸೊಳೆ ಪಲ್ಯ, ಕುಂಬಳಕಾಯಿ ಸಿಪ್ಪೆಯ ಪಲ್ಯ, ಹಲಸಿನ ಬೀಜ–ಕೆಸುವಿನ ಸೊಪ್ಪಿನ ಪಲ್ಯ, ಚೇರೆಕೊಡಿ, ಕುಂಟಾಲಕೊಡಿ ತಂಬುಳಿ (ಹಸಿರು ಚಿಗುರು ತಂಬುಳಿ), ಕುಂಬಳಕಾಯಿ ಸಾಂಬಾರ್, ಕಾನಕಲ್ಲಟೆ ಗಸಿ, ಗೋಧಿ ಕಡಿಯ ಪಾಯಸ, ಸೋಯಾಬೀನ್ ಕಬಾಬು, ಮೆಂತೆ ಮಣ್ಣಿ, ಹಲಸಿನ ಎಲೆ ಮೂಡೆ ಕೊಟ್ಟಿಗೆ, ಅಲ್ಲದೆ ಕೆಸುವಿನ ಎಲೆ {ಗಂಟು} ಕಣಿಲೆ, ಹಲಸಿನ ಬೀಜ, ಸೌತೆಕಾಯಿ, ಸುವರ್ಣ ಗಡ್ಡೆ, ಬಾಳೆಕಾಯಿ, ಅಂಬಟೆ ಮಿಶ್ರಿತ ಗಜಬಜೆ, ಮಜ್ಜಿಗೆ ನೀರು ಇದ್ದುವು. ರುಚಿಕರವೆನ್ನುವ ವಿವರಣೆ ಬಹಳ ದೀರ್ಘವಾದೀತು. ಮೃಷ್ಠಾನ್ನ ಬೋಜನದ ನಂತರದಲ್ಲಿ ಕವಿಗೋಷ್ಠಿ ನಡೆಯಿತು. 

ಹಿರಿಯ ಸಾಹಿತಿಗಳು, ವಿಮರ್ಶಕರಾದ ಶ್ರೀ ಸುಂದರ ಭಟ್ ಕಾನ ಇವರ ಅಧ್ಯಕ್ಷತೆಯಲ್ಲಿ 'ಆಷಾಢ ಕವಿ ಸಮಯ' ಎಂಬ ಕವಿಗೋಷ್ಠಿ ನಡೆಯಿತು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಸಾಹಿತಿ ಶ್ರೀ ರಾಧಾಕೃಷ್ಣ ಕೆ ಉಳಿಯತ್ತಡ್ಕರು ಕವಿಗೋಷ್ಠಿಗೆ ಚಾಲನೆ ನೀಡಿದರು. ಶ್ರೀಮತಿ ಪವಿತ್ರ ಜೆ.ಪಿ ಮಣಿಯಂಪಾರೆ ಸ್ವಾಗತಿಸಿದರು. ಕವಯಿತ್ರಿ ಕುಮಾರಿ ಹರ್ಷಿತಾ ಪೆರ್ಲ ನಿರೂಪಿಸಿದರು.  
ಅಪರಾಹ್ನ ಘಂಟೆ 02-30 ರಿಂದ 04-30ರ ತನಕ, ಸಾಹಿತಿಗಳು ಮತ್ತು ವಿಮರ್ಶಕರಾದ ಶ್ರೀ ಸುಂದರ ಭಟ್ ಕಾನರ ಅಧ್ಯಕ್ಷತೆಯಲ್ಲಿ 'ಆಷಾಢ ಕವಿ ಸಮಯ' ಎಂಬ ಕವಿಗೋಷ್ಠಿ ನಡೆಯಿತು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಸಾಹಿತಿಗಳು, ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕರು ಕವಿಗೋಷ್ಠಿಗೆ ಚಾಲನೆ ನೀಡಿದರು.  

ಭಾಗವಹಿಸಿದ ಕವಿಗಳು: ಕು। ಯಕ್ಷಿತಾ ಓಜಾಲ (ತುಳು), ಕು। ಶ್ರುತಿಕಾ ಬಾಕಿಮಾರು (ತುಳು), ಕು! ಹರಿಪ್ರಿಯ ಖಂಡಿಗೆ, ಕು ಧನ್ಯಶ್ರೀ ಖಂಡಿಗೆ, ಶ್ರೀ ಪ್ರೇಮಚಂದ್ರ ಚೊಂಬಾಲ (ಮಲಯಾಳಂ), ಕು| ಮಾನಸ ಕೊಡಿಂಕಿರಿ, ಶ್ರೀ ವಿಜಯ ಕಾನ (ಸಂಸ್ಕೃತ), ಶ್ರೀಮತಿ ಸುಮನಾ ಕರಿಂಬಿಲ (ಕೊಂಕಣಿ), ಕು! ಅವನಿ ಕರಿಂಬಿಲ (ಹಿಂದಿ), ಶ್ರೀ ಶ್ರೀನಿವಾಸ ನಾಯ್ಕ ಪೆರಿಕ್ಕಾನ (ಮರಾಠಿ), ಶಶಿಕಲಾ ಟೀಚರ್, ಕುಂಬಳೆ (ಇಂಗ್ಲಿಷ್ ), ಶ್ರೀಮತಿ ಜ್ಯೋತ್ಸಾ ಕಡಂದೇಲು (ಕರ್ಹಾಡ), ಕುಮಾರಿ ಹರ್ಷಿತಾ (ಇಂಗ್ಲಿಷ್ ), ಜನಾರ್ದನ ಬೊಡ್ಡೋಡಿ, ಕೃಷ್ಣಕಾಂತ್ ಕಳ್ವಾಜೆ.

ಕಾಸರಗೋಡು ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಡಾ. ಜಯಪ್ರಕಾಶ ತೊಟ್ಟೆತ್ತೋಡಿಯವರು ಆಗಮಿಸಿ ಕವಿಗೋಷ್ಠಿಯನ್ನುದ್ದೇಶಿಸಿ ಬಹಳ ಸೊಗಸಾಗಿ ಮಾತನಾಡಿದರು. ಕಿರಿಯ ಕವಿಗಳನ್ನು ಮತ್ತು ಸಾಹಿತಿಗಳನ್ನು ರೂಪಿಸುವ ಕೆಲಸಗಳು ಹೆಚ್ಚಿಗೆಯಾಗಬೇಕಾದುದರ ಅಗತ್ಯವನ್ನು ಪ್ರತಿಪಾದಿಸಿದರು.

ಕವಿಗಳು ತಮ್ಮ ಭಾವನೆಗಳನ್ನು ಬಹಳ ಸುಂದರವಾಗಿ ಕವನ ರೂಪಕ್ಕಿಳಿಸಿದ್ದು ಅವರ ಸಾಹಿತ್ಯ ಪರಿಶ್ರಮವು “ಪರಿಶ್ರಮ ಗಾರ್ಡನ್” ನಲ್ಲಿ ಜರಗಿದ ಕಾರ್ಯಕ್ರಮದ ಮೆರುಗನ್ನು ದ್ವಿಗುಣಗೊಳಿಸಿತು. ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣ ಅರ್ಥಪೂರ್ಣ ಮತ್ತು ಜ್ಞಾನ ಪೂರ್ಣವಾಗಿತ್ತು. ಶ್ರೀ ಶ್ರೀನಿವಾಸ ನಾಯ್ಕ ಬಾಳೆಗುಳಿ ಧನ್ಯವಾದ ಹೇಳಿದರು.

ಸಾಯಂಕಾಲದ ಲಘು ಉಪಾಹಾರ ದಲ್ಲಿ ಉಂಡ್ಲಕಾಳು ಮತ್ತು ನ್ಯಾಚುರಲ್ ಗ್ರೀನ್ ಲೇಬಲ್ ಮಸಾಲಾ ಚಹಾ ಸ್ಫೂರ್ತಿಯನ್ನು ದುಪ್ಪಟ್ಟುಗೊಳಿಸಿತು. ಕಾರ್ಯಕ್ರಮ ಬಹಳ ಶಿಸ್ತು, ಯೋಜನಾ ಬದ್ಧತೆ ಮತ್ತು ಸರ್ವರ ಸಹಕಾರಗಳೊಂದಿಗೆ ಅಭೂತ ಪೂರ್ವವಾಗಿತ್ತು. ಸಂಜೆ ಮುಕ್ತಾಯವು ನಿರ್ಧಾರಿತ ಸಮಯಕ್ಕೇ ನಡೆದಿದೆ ಎಂಬುದು ಸಮಯ ಪರಿ ಪಾಲನೆಯ ಪ್ರತೀಕ. ನನ್ನೊಡನೆ ಬಂದ ಯಕ್ಷಿತಾ ಮಗಳು ಮತ್ತು ಶ್ರುತಿಕಾ ಮಗಳು ಬಹಳ ಮೆಚ್ಚುಗೆ ಮತ್ತು ಧನ್ಯತೆಯ ಮಾತುಗಳನ್ನು ನನ್ನೊಡನೆ ಹೇಳಿರುವುದು ಕಾರ್ಯಕ್ರಮದ ಸಾರ್ಥಕತೆಗೆ ಕೈಗನ್ನಡಿ.

ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಲಿ. ಎಲ್ಲರ ಸಹಕಾರ ಭಾಗವಹಿಸುವಿಕೆ ಕೂಡಿ ಬರುತ್ತಿರಲಿ. ನಾವೆಲ್ಲರೂ ಒಂದಾಗಿ ಸಂತಸ ಪಡೋಣ. ಸುಭಾಸರೇ Hats up. ವಂದನೆಗಳು.
............................. ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************



Ads on article

Advertise in articles 1

advertising articles 2

Advertise under the article